ಚಿಕ್ಕಮಗಳೂರು : ಹೆಡ್ ಲೈಟ್ ಇಲ್ಲದೆ ಕೆಎಸ್ಆರ್ಟಿಸಿ ಬಸ್ ರಾತ್ರಿ ಸಂಚಾರ ಮಾಡಿದ್ದು ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಬಸ್ ಸಂಚರಿಸಿದೆ ಕೆಜಿಎಫ್ ಡಿಪೋಗೆ ಸೇರಿದ KA-40 F-1400 ಬಸ್ ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಚಲಿಸುವ ಸಂದರ್ಭದಲ್ಲಿ ಹೆಡ್ ಲೈಟ್ ಇಲ್ಲದೆ ಸಂಚರಿಸಿದೆ.
ಇಂತಹ ಒಂದು ಘಟನೆ ಮೊನ್ನೆ ತಾನೆ ಕೊಪ್ಪಳದಲ್ಲಿ ನಡೆದಿತ್ತು ಮೊಬೈಲ್ ಟಾರ್ಚ್ ನಲ್ಲಿ ಬಸ್ ಸಂಚರಿಸಿದ ಘಟನೆ ನಡೆದಿತ್ತು, ಇದೀಗ ಅಂತದ್ದೇ ಘಟನೆ ಶೃಂಗೇರಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಹತ್ತು ಮೂವತ್ತಕ್ಕೆ ಶೃಂಗೇರಿಯಿಂದ ಚಿಕ್ಕಮಗಳೂರಿಗೆ ತಳ್ಳುತ್ತಿತ್ತು ಮಾರ್ಗ ಮಧ್ಯದಲ್ಲಿ ಬಸ್ಸಿನ ಹೆಡ್ ಲೈಟ್ ಕೈಕೊಟ್ಟಿದೆ ಹೆಡ್ ಲೈಟ್ ಇರದೇ ಜೀವ ಕೈಯಲ್ಲಿ ಹಿಡಿದು ಚಾಲಕ ಬಸ್ ಓಡಿಸಿದ್ದಾನೆ ಮೊಬೈಲ್ ಟಾರ್ಚ್ ನಲ್ಲಿ ಚಾಲಕ ಬಸ್ ಓಡಿಸಿದ್ದಾನೆ