LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಿತ್ರದುರ್ಗ: ಬಸವ ಪ್ರತಿಮೆ ನಿರ್ಮಾಣ 35 ಕೋಟಿ ದುರ್ಬಳ.! ತನಿಖೆ ಆದೇಶ.!

 

ಚಿತ್ರದುರ್ಗ: ಬಸವ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ  35 ಕೋಟಿ ಮೊತ್ತ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಎಚ್‌.ಏಕಾಂತಯ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ದೂರು ಆಧರಿಸಿ ಜಿಲ್ಲಾಧಿಕಾರಿ-ಯವರು ಹೆಚ್ಚುವರಿ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಿದ್ದರು. ಸಮಿತಿಯು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು ಮಠದ ಆಡಳಿತ ಮಂಡಳಿ ಅನುದಾನ ಬಳಕೆ ಕುರಿತಂತೆ ಅಧಿಕೃತವಾದ ದಾಖಲೆ ಒದಗಿಸಿಲ್ಲ ಎಂದು ತಿಳಿಸಿದೆ.

ಮುರುಘಾ ಮಠದ ಹಿಂಭಾಗದ ಜಾಗದಲ್ಲಿ ಬೃಹತ್ ಬಸವ ಪ್ರತಿಮೆ ನಿರ್ಮಾಣ ಸಂಬಂಧ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಬಳಕೆಯಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೋರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಎಡಿಸಿ ವರದಿ ಆಧರಿಸಿ ಜಿಲ್ಲಾ-ಧಿಕಾರಿಯವರು ಉನ್ನತ ಮಟ್ಟದ ತನಿಖೆಗೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈವರೆಗೆ 26.35 ಕೋಟಿ ಖರ್ಚಾಗಿದ್ದು, ಉಳಿಕೆ ಹಣದ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕ ಸಮೇತ ದಾಖಲೆ ಒದಗಿಸುವಂತೆ ಮಠದ ಆಡಳಿತ ಮಂಡಳಿಗೆ ಕೋರಲಾಗಿತ್ತು. ಆದರೆ ಮಠದವರು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ಕೋರಲಾಗಿದೆ!
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೌದಿ ಅರೇಬಿಯಾ ಬಸ್ ದುರಂತ- ಸಂತಾಪ ಸೂಚಿಸಿದ ಪ್ರಧಾನಿ ಮೋದಿದೆಹಲಿ ಸ್ಪೋಟ ಪ್ರಕರಣ: ಯಾವುದೇ ಪುರಾವೆಗಳಿಲ್ಲ; ಮೂವರು ವೈದ್ಯರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿದ NIAಮಕ್ಕಾದಲ್ಲಿ ಭೀಕರ ಅಪಘಾತ : 42 ಭಾರತೀಯ ಉಮ್ರಾ ಯಾತ್ರಿಕರು ದುರ್ಮರಣಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!! 250 ಸಿಮ್ ಬಳಸಿ 300 ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಖದೀಮರು ಅರೆಸ್ಟ್ಚಲನಚಿತ್ರಗಳಲ್ಲಿ ಸಾಹಿತ್ಯದ ಸ್ಪರ್ಶ ಬಿ.ಎಲ್.ವೇಣು ಅವರ ಸೃಜನಶೀಲತೆ: ಡಾ. ಡಾ.ಬಂಜಗೆರೆ ಜಯಪ್ರಕಾಶ್ಮದುವೆಗೆ 1 ಗಂಟೆ ಮುಂಚೆ ಸೀರೆ ವಿಚಾರಕ್ಕೆ ವಧುವನ್ನು ಕೊಂದ ವರ !22 ಲಕ್ಷ ಸಂಬಳದ ಉದ್ಯೋಗ ತೊರೆದು ಐಎಎಸ್ ಅಧಿಕಾರಿಯಾದ ಅಂಕಿತಾ ಪನ್ವಾರ್‌ನಿಮ್ಮ ಸಂಗಾತಿ ನಡುವೆ ಶಾಂತಿಭಂಗ ತರುವ `ಮದ್ಯ ಪ್ರೇಮಿ ಉಚ್ಟಾಟಣ ತಂತ್ರ'.!ಸಿಬಿಎಸ್‌ಇ 15 ಸಾವಿರ ಶಿಕ್ಷಕರು, ಬೋಧಕೇತರ ಹುದ್ದೆಗಳ ನೇಮಕಾತಿಗೆ ಚಾಲನೆ.!ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನ: 26ನೇ ವರ್ಷದ  ಅನ್ನದಾನದ.!