42 ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಚಿತ್ರದುರ್ಗದ ಕಲಿಗಳು.!
ಚಿತ್ರದುರ್ಗ : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42 ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಚಿತ್ರದುರ್ಗದ ಟೇಕ್ವಾಂಡೋ ಅಮೆಚೂರ್ ಸೆಂಟರ್ನ ವಿದ್ಯಾರ್ಥಿಗಳು ಸೀನಿಯರ್, ಕೆಡೆಟ್, ಜೂನಿಯರ್, ಸಬ್ ಜೂನಿಯರ್ ಮತ್ತು ಜಿ-4 ವಿಭಾಗಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.
ಜಿ-4 ವಿಭಾಗದಲ್ಲಿ ಪ್ರನೀಲ್ ಜಿ. ದೀಕ್ಷಿತ್ ಆರ್. ಲಕ್ಷ್ಮಿನಾರಾಯಣ ಎನ್. ಮೋಹಿತ್ ಆರ್ ಇವರುಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಲೋಹಿತ್ ಎನ್.
ರೋಹಿತ್ ಎಸ್.ಎಸ್. ಹೃದಯ್ ಎನ್. ಇವರುಗಳು ಬೆಳ್ಳಿ ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಪದ್ಮಾವತಿ ಎಸ್.ಎಸ್. ರಿಷಿಕ್ ಎಂ. ಇವರುಗಳು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಪದಕ ವಿಜೇತರುಗಳಿಗೆ ಟೇಕ್ವಾಂಡೋ ತರಬೇತುದಾರರಾದ ರಂಗನಾಥ್ ಕೆ. ಪೂಜಿತಾ ಎಂ. ಮಾರುತಿ ಕೆ. ಇವರುಗಳು ಅಭಿನಂದಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.