ಚಿತ್ರದುರ್ಗ: ಡಾ. ಬಿ. ಆರ್. ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ಪ್ರಯುಕ್ತ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ.!
ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ವತಿಯಿಂದ ಭಾರತ ರತ್ನ ಸಂವಿದಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ಪ್ರಯುಕ್ತ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಸಮಕಾಲಿನ ಭಾರತದಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ರವರ ಚಿಂತನೆ ಪ್ರಸ್ತುತತೆಯ ಬಗ್ಗೆ ಪ್ರಬಂಧ ಸ್ಪರ್ದೆಯನ್ನು ನಡೆಸಲಾಗುತ್ತಿದೆ. ಪದವಿ ಮಟ್ಟದ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಕನ್ನಡ ಭಾಷೆಯಲ್ಲಿ ಪ್ರಬಂಧವನ್ನು ಸ್ವಹಸ್ತಕಾರದಲ್ಲಿ ಬರೆಯಬೇಕು. ಬರೆದಂತಹ ಪ್ರಬಂಧವನ್ನು ಹಾಗೂ ಕಾಲೇಜು ಪ್ರಾಂಶು ಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪಾತ್ರವನ್ನು ಕಡ್ಡಾಯವಾಗಿ ಜೊತೆಗಿರಿಸಬೇಕು. ಬರೆದ ಪ್ರಬಂಧವನ್ನು ಎಬಿವಿಪಿ ಕಾರ್ಯಾಲಯ, ಎಸ್. ಪಿ ಕಛೇರಿ ಎದುರು, ಪ್ರಸನ್ನ ಗಣಪತಿ ದೇವಸ್ಥಾನ ಹಿಂಭಾಗ, ಕೆಳಗೋಟೆ, ಚಿತ್ರದುರ್ಗ-577 501 ಇಲ್ಲಿಗೆ ತಲುಪಿಸಲು ಕೋರಲಾಗಿದೆ.
13-12-2024ರ ಸಂಜೆ 5:00 ಗಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ಪ್ರಬಂಧದಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯಲ್ಲಿ ನಮೂದಿಸಬೇಕು. ಈ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ : 1000 ದ್ವಿತೀಯ ಬಹುಮಾನ : 700 ತೃತೀಯ ಬಹುಮಾನ : 500 ರೂ.ಗಳನ್ನು ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ 7337669656/ 9986561295/ 63630 44610/ 84318 32708 ದೂರವಾಣಿಯನ್ನು ಸಂಪರ್ಕ ಮಾಡಬಹುದಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.