LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಿತ್ರದುರ್ಗ:ಈ ದಿನಾಂಕಗಳಂದು ಹಳ್ಳಿಗಳಲ್ಲಿ ಕರೆಂಟ್ ಇರಲ್ಲ.!

 

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಆಯ್ದ ದಿನಗಳಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ ಚಿತ್ರದುರ್ಗದಿಂದ ಬರುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗದಲ್ಲಿ ವಿ.ಜೆ.ಎನ್.ಎಲ್ ಅವರು ಭದ್ರಾ ಮೇಲ್ದಂಡೆ ಯೋಜನೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ನಿರ್ವಹಿಸುವುದರಿಂದ ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗಗಳ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಇದೇ ಫೆ.5, 8, 16,  22, 26 ಹಾಗೂ ಮಾರ್ಚ್ 1 ಮತ್ತು 5ರಂದು ಅಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : ಮಾಡನಾಯಕನಹಳ್ಳಿ, ಸಿ.ಜಿ.ಹಳ್ಳಿ, ಯಳವರ್ತಿ, ಮುದ್ದಾಪುರ, ಹೊಸಗೊಲ್ಲರಹಟ್ಟಿ, ಬಂಗಾರಕ್ಕನಹಳ್ಳಿ, ರಾಯನಹಳ್ಳಿ, ಸೂರೇನಹಳ್ಳಿ, ಐನಹಳ್ಳಿ, ತುರುವನೂರು, ಬೋಮ್ಮಕ್ಕನಹಳ್ಳಿ, ಕೂನಬೇವು, ಅವಳೇನಹಳ್ಳಿ, ದೊಡ್ಡಘಟ್ಟ, ಕರಿಯಮ್ಮನಹಟ್ಟಿ, ಕೋಟೆಹಟ್ಟಿ, ಹುಣಸೇಕಟ್ಟೆ , ಯಳಗೋಡು, ಇಸಾಮುದ್ರ,  ನೆಲ್ಲಿಕಟ್ಟೆ , ಕಾಲಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026