
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರು* ಇಂದು ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಸಾಕಷ್ಟು ಸಾಮೂಹಿಕ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡರೂ ಸ್ಥಳ ಪರಿಶೀಲನೆ ವೇಳೆ ಸಹ ಸಾಕಷ್ಟು ಕಡೆಗಳಲ್ಲಿ ರಸೆಗಳ ಪಕ್ಕದಲ್ಲಿ ಸಾರ್ವಜನಿಕರು ತ್ಯಾಜ್ಯ ಬಿಸಾಕುವ ಬ್ಲ್ಯಾಕ್ ಸ್ಪಾಟ್ ಗಳನ್ನು ಗಮನಿಸಿದ ಅವರು ಬ್ಲಾಕ್ ಸ್ಪಾಟ್ ಗಳಿಂದ ನಗರದ ಸೌಂದರೀಕರಣ ಹಾಗೂ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀದಲಿದ್ದು, ಸ್ವಚ್ಛತಾ ಕಾರ್ಯ ನಡೆಸಲು ಪ್ರಮುಖ ಆದ್ಯತೆ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
*ಪಾದಚಾರಿ ಒತ್ತುವರಿ ತೆರವುಗೊಳಿಸಿ:*
ರಸ್ತೆಯುದ್ದಕ್ಕು ಹಲವು ಸ್ಥಳಗಳಲ್ಲಿ ಪಾದಚಾರಿಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ವಯೋವೃದ್ಧರು, ಮಕ್ಕಳು, ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲವಾಗುತ್ತಿದ್ದು, ಅಂತಹ ಒತ್ತುವರಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದರು.
*ಬಾಕಿ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳಿಗೆ ಬೀಗಮುದ್ರೆ ಕಾರ್ಯ*
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಪಾಲಿಕೆಗೆ ಬಾಕಿ ಆಸ್ತಿ ತೆರಿಗೆ ಪಾವತಿಸಲು ಸಾಕಷ್ಟು ಸಲ ನೋಟಿಸ್ ಹಾಗೂ ಮೌಖಿಕವಾಗಿ ತಿಳಿಸಿ ಹೇಳಿದರೂ ಸಹ ಸ್ವತ್ತಿನ ಮಾಲೀಕರು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸದ ಕಾರಣ ಅಂತಹವರ ಪಟ್ಟಿಯನ್ನು ಮಾಡಿ ಇಂದು ಅಧಿಕಾರಿಗಳಿಗೆ ತಿಳಿಸಿದರು.

ತೆರಿಗೆ ಪಾವತಿಸದ ಮಾಲೀಕರ ಕಟ್ಟಡಗಳಿಗೆ ಬೀಗಮುದ್ರೆಯನ್ನು ಹಾಕುವ ಕೆಲಸವು *ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ನೇತೃತ್ವದಲ್ಲಿ ಹಾಗೂ ಜಂಟಿ ಆಯುಕ್ತರುಗಳಾದ ರಂಗನಾಥ್ ಹಾಗೂ ಹೇಮಂತ್ ರವರ ನೇತೃತ್ವದಲ್ಲಿ* ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.