LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೀನುಗಾರಿಕಾ ದೋಣಿಯಲ್ಲಿ ಸಾಗಿಸ್ತಿದ್ದ 5 ಟನ್ ಮಾದಕ ವಸ್ತು ಕೋಸ್ಟ್ ಗಾರ್ಡ್ ವಶ

ಪೋರ್ಟ್ ಬ್ಲೇರ್ : ಅಂಡಮಾನ್‌ನಲ್ಲಿ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಸುಮಾರು 5 ಟನ್ ಮಾದಕ ವಸ್ತುವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಕ್ಕೆ ಪಡೆದುಕೊಂಡಿದೆ.

ನವೆಂಬರ್‌ನ ಆರಂಭದಲ್ಲಿ ಗುಜರಾತ್‌ನ ಕರಾವಳಿಯಲ್ಲಿ ಅಧಿಕಾರಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಇದನ್ನು ಸಾಗಿಸುತ್ತಿದ್ದ 8 ಇರಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು.

ಆದರೆ ಇದೀಗ ಸುಮಾರು 5 ಟನ್ ಮಾದಕ ವಸ್ತುವನ್ನು ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದ್ದಿ, ಇದು ಇದುವರೆಗೆ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡ ಮಾದಕ ವಸ್ತುವಿನಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾದಕ ವಸ್ತುಗಳ ಕಳ್ಳಸಾಗಾಣಿಕೆ ತಡೆಗೆ ಭಾರತ 'ಸಾಗರ್ ಮಂಥನ್ - 4' ಎಂಬ ಗುಪ್ತಚರ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಅಂಗವಾಗಿ ನೌಕಾಪಡೆಯು ಭಾರತದ ವ್ಯಾಪ್ತಿಯ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಮತ್ತು ದೋಣಿಗಳ ಮೇಲೆ ನಿಗಾ ವಹಿಸುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಡೆನೂರು ಮನು ವಿರುದ್ಧದ ಪ್ರಕರಣ ಹಿಂಪಡೆದ ‌ನಟಿಕಂತೆ ಕಂತೆ ಹಣ ಪತ್ತೆ ಕೇಸ್: ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ವಜಾಸಾವಿಗೆ ಸಂಸದ ಡಾ. ಕೆ ಸುಧಾಕರ್ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆ - ದೆಹಲಿ ಸರ್ಕಾರದಿಂದ ಎಚ್ಚರಿಕೆಉತ್ತರಾಖಂಡ ಮೇಘಸ್ಫೋಟ - ನಾಪತ್ತೆಯಾಗಿದ್ದ ಕೇರಳ ಮೂಲದ 28 ಪ್ರವಾಸಿಗರ ತಂಡ ಸುರಕ್ಷಿತಮೃತಪಟ್ಟ ತಾಯಿ ಖಾತೆಯಲ್ಲಿದ್ದ ಹಣ ಕಂಡು ಮೂರ್ಛೆ ಹೋದ ಮಗ!! ಶಾರುಖ್ ಖಾನ್ ಆಸ್ತಿಗೂ ಮೀರಿದ ಮೊತ್ತಕಂದಕಕ್ಕೆ ಉರುಳಿದ ಸಿಆರ್‌ಪಿಎಫ್ ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿದ್ದ ವಾಹನ; ಮೂವರು ಸಾವುಧರ್ಮಸ್ಥಳ: ಯುವತಿ ನೇಣು ಬಿಗಿದು ಆತ್ಮಹತ್ಯೆ..!!'ಭಾರತ ಎಂದಿಗೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ'- ಟ್ರಂಪ್‌ಗೆ ಮೋದಿ ತಿರುಗೇಟುಸ್ಟೇಟ್‌ಬ್ಯಾಂಕ್ ಆಫ್‌ ಇಂಡಿಯಾದಲ್ಲಿ 5180 ಹುದ್ದೆ- ಈಗಲೇ ಅರ್ಜಿ ಸಲ್ಲಿಸಿ