LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಲೆ ಆರೋಪಿಗಳಿಗೆ ಜೀವಾವಧಿಶಿಕ್ಷೆ : ನೊಂದವರಿಗೆ ಪರಿಹಾರ

ಭದ್ರಾವತಿ:  ಜಮೀನು ವಿವಾದ ಸಂಬಂಧ  ಮರಾಣಾಂತಿಕ ಹಲ್ಲೆ ನಡೆಸಿ ಒಬ್ಬನ  ಸಾವಿಗೆ ಕಾರಣರಾ ಗಿದ್ದ ಏಳು ಆರೋಪಿಗಳಿಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚಿಟ್ಟಿಯಾರ್ ಮಂಗಳವಾರ  ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಾಳಾದ ಬಡ್ಡಿ ಪರಮೇಶಿ ,ಜಗದೀಶ, ರಮೇಶ, ಗೌತಮ,ಅಭಿಷೇಕ್, ವಿಕ್ರಂ,ಸಂಜಯ್ ಅವರುಗಳ ಮೇಲಿನ ಆರೋಪ ಸಾಬೀತಾದ ಕಾರಣ ಈ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆವಿಧಿಸಿದೆ.
ಹೊಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯ ಭದ್ರಾಪುರದ ನಿವಾಸಿ ಕರಿಯಪ್ಪ ಎಂಬಾತನಿಗೆ ಕೂಡ್ಲಿಯ ಸರ್ವೆನಂಬರ್ 196 ನಲ್ಲಿರುವ 41/2 ಎಕರೆ ಜಮೀನಿದ್ದು, ಜಮೀನಿನ ಸಂಬಂಧ ಕರಿಯಪ್ಪನಿಗೂ ಹಾಗೂ ಆರೋಪಿಗಳ ನಡುವೆ ವಿವಾದ, ಮನಸ್ತಾಪವಿತ್ತು.

2020 ರ  ಮಾ..5 ರಂದು ರಾತ್ರಿ  ಕರಿಯಪ್ಪನ ಮಗ ನಾಗರಾಜ ಹಾಗೂ  ಅರುಣ ಎಂಬುವರು  ಸದರಿ ಜಮೀನಿನ ಭತ್ತದ ಗದ್ದೆಗೆ ನೀರು ಕಟ್ಟಲು ಹೋದಾಗ ಅಲ್ಲಿಗೆ  ಎರಡು ಬೈಕ್‌ಗಳಲಿ ಬಂದ ಆರೋಪಿ ಬಡ್ಡಿ ಪರಮೇಶಿ ,ಜಗದೀಶ,ರಮೇಶ,ಗೌತಮ,ಅಭಿಷೇಕ್,ವಿಕ್ರಂ,ಸಂಜಯ್ ಎಂಬುವವರು ಕಬ್ಬಿಣದ ಪೈಪು ಮತ್ತಿತರ ಮಾರಾಕಾಸ್ತ್ರಗಳಿಂದ ನಾಗರಾಜ ಮತ್ತು ಅರುಣನ ಮೇಲೆ ಹಲ್ಲೆ ನಡೆಸಿದ್ದಾರೆ, ಘಟನಾ ಸ್ಥಳಕ್ಕೆ ಹೋಗಿ ಆರೋಪಿಗಳನ್ನು ತಡೆಯಲು ಯತ್ನಿಸಿದ ಕರಿಯಪ್ಪನ ಮೇಲೆ ಹಾಗೂ ಉಳಿದವರ ಮೇಲೆ ಆರೋಪಿಗಳು  ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

ಹಲ್ಲೆಯಿಂದಾಗಿ ಗಂಭೀರವಗಿ ಗಾಯಗೊಂಡಿದ್ದ ಕರಿಯಪ್ಪನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು ಆಸ್ಪತ್ರೆಯಲ್ಲ್ಲಿ ಕರಿಯಪ್ಪ ಮೃತಪಟ್ಟಿದ್ದ. ಹೊಳೆಹೊನ್ನೂರು ಪೋಲಿಸ್‌ಠಾಣೆಯಲ್ಲಿ  ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು.  ತನಿಖೆ ನಡೆಸಿದ ಪೋಲಿಸರು ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಕುರಿತಂತೆ ಸಾಕ್ಷಿದಾರರ ಸಾಕ್ಷ್ಯವಿಚಾರಣೆ ನಡೆಸಿದ  ನ್ಯಾಯಾಲಯ ಸರ್ಕಾರಿ  ಆರೋಪಿಗಳ ಪೈಕಿ ನಾಲ್ಕನೇ ಆರೋಪಿ ಮಂಜಪ್ಪ ಮತ್ತು ಏಳನೆ ಆರೋಪಿ ಶರತ್ ಎಂಬುವವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರಿಬ್ಬರ ಬಿಡುಗಡೆಗೆ  ಆದೇಶಿಸಿ, ಉಳಿದವರಿಗೆ ಶಿಕ್ಷೆ ವಿಧಿಸಿದೆ.

ದಂಡ ಪಾವತಿಸಲು ಆದೇಶ : 
ಆರೋಪಿಗಳಿಂದ ಹತ್ಯೆಗೊಳಾಗದ ಕರಿಯಪ್ಪನ ಪತ್ನಿ ಗಂಗಮ್ಮನಿಗೆ ಮೂರು ಲಕ್ಷ ಪರಿಹಾರ ಹಾಗೂ ಆರೋಪಿಗಳಿಂದ ಹಲ್ಲೆಗೊಳಗಾಗಿರುವ ನಾಗರಾಜ,ಅರುಣ,ವೀರಪ್ಪ,ಮನೋಹರ,ನಾಗರಾಜ ಈ ಐರ್ವರಿಗೆ ತಲಾ ಒಂದೊಂದು ಲಕ್ಷ ಪರಿಹಾರವನ್ನು ಆರೋಪಿಗಳು ನೀಡಬೇಕೆಂದು  ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚಿಟ್ಟಿಯರ್ ತೀರ್ಪುನೀಡಿ ಆದೇಶಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ರತ್ಮಮ್ಮ ವಾದಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST