Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕ್ಷೇತ್ರ ಪುನರ್ ವಿಂಗಡಣೆ : ಭಾರಿ ಕುತೂಹಲ

ದೆಹಲಿ : ಇಡೀ ದೇಶದಲ್ಲಿ ಈಗ ಜನಗಣತಿ ಆರಂಭವಾಗಿದೆ ಇದರ ಬೆನ್ನಲ್ಲೇ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಹೆಚ್ಚಳ ಸಾಧ್ಯತೆ ಇದೆ.

ಶಿವಮೊಗ್ಗ ಜಿಲ್ಲೆ ಬಗ್ಗೆ ಹೇಳುವುದಾದರೆ, ಕಳೆದ ಸಲ ಕ್ಷೇತ್ರ ಪುನರ್ವಿಂಗಡನೆ ವೇಳೆ ಹೊಸ ನಗರ ಕ್ಷೇತ್ರ ಮಾಯವಾಗಿತ್ತು. ಆದರೆ ಈ ಸಲ ಹೊಸನಗರ ವಿಧಾನಸಭಾ ವಿಧಾನಸಭಾ ಮತಕ್ಷೇತ್ರ ರಚಿಸುವಂತೆ ಹೋರಾಟ ಆರಂಭವಾಗಿದೆ.

ಈಗ ಸೊರಬ ಕ್ಷೇತ್ರ ಸೇರಿರುವ ಸಾಗರ ತಾಲೂಕಿನ ತಾಳಗುಪ್ಪ ಹಾಗೂ ಜೋಗ ಪ್ರದೇಶಗಳ ಒಂದು ಹೊಸ ಕ್ಷೇತ್ರ ಉದಯಿಸಬಹುದು. ಏಕೆಂದರೆ ಸಾಗರದ ನಗರದ ಸದ್ಯದ ಜನಸಂಖ್ಯೆ ಹತ್ತಿರ ಹತ್ತಿರ 80000 ಆದುದರಿಂದ ಸಾಗರ ನಗರ ಕ್ಕೆ ಸಾಗರವೆಂದು ಗ್ರಾಮಾಂತರ ಹಾಗೂ ಪಕ್ಕದ ಕ್ಷೇತ್ರ ಸೇರಿರುವ ಸಾಗರ ತಾಲೂಕಿನ ಇನ್ನೊಂದು ಕ್ಷೇತ್ರ ಉದಯ ಆಗಬಹುದು. ಏಕೆಂದರೇ ಒಟ್ಟು ಸಾಗರ ತಾಲೂಕಿನ ಮತದಾರ ಸಂಖ್ಯೆ ಎರಡು ಮುಕ್ಕಾಲು ಲಕ್ಷ ಇದೆ.

ಇನ್ನೂ ಇರುವ ಮೂರು ವರೆ ಲಕ್ಷ ಮತದಾರರರ ಶಿವಮೊಗ್ಗ ತಾಲೂಕು , ಎರಡು ಮುಕ್ಕಾಲು ಲಕ್ಷದ ಭದ್ರಾವತಿ ಎರಡು ಮುಕ್ಕಾಲು ಲಕ್ಷ ದಷ್ಟು ಮತದಾರರಿರುವ ಸಾಗರ ತಾಲೂಕು ಇವುಗಳೇ ಮೊದಲ ಆದ್ಯತೆ.
ಏಕೆಂದರೆ ಇರುವ 18 ಲಕ್ಷ ಮತದಾರರು 1.75 ಲಕ್ಷದಂತೆ ಈಗಿರುವ ಏಳು ಕ್ಷೇತ್ರದ ಜೊತೆಗೆ ಇನ್ನೆರಡು ಇಲ್ಲವೇ ಇನ್ನೊಂದು ಆಗಬಹುದು ಏಕೆಂದರೆ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವೇ ಹಿಂದಿನ ಹೊಳೆಹೊನ್ನೂರು ಹಾಗು ಹೊಸನಗರ ಆಗಿದ್ದ ಪ್ರದೇಶಗಳು. ಹೊಸನಗರ ಇನ್ನೊಂದು ಸಲ ಕ್ಷೇತ್ರವಾದರೇ ಸಂತೋಷ.

ಇನ್ನೂ ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಬಂದರೇ
ಶಿರಸಿ ಅಲ್ಲ ಸಾಗರ ಲೋಕಸಭಾ ಕ್ಷೇತ್ರ ಆಗುವ ಸಾಧ್ಯತೆ ಜಾಸ್ತಿ ಇದೆ. ಏಕೆಂದರೆ ಉತ್ತರ ಕನ್ನಡ ಜಿಲ್ಲೆಯ ಹನ್ನೊಂದು ತಾಲೂಕಿನಿಂದ ಇರುವುದೇ ಆರು ಕ್ಷೇತ್ರಗಳು ಅಲ್ಲಿರುವ ಹದಿನೈದು ಲಕ್ಷ ಮತದಾರರಿಂದ ಇನ್ನೂ ನಾಲ್ಕು ಕ್ಷೇತ್ರ ಗಳ ಸಾದ್ಯತೆ ಇದೆ.

ಭಟ್ಕಳ, ಕುಮಟಾದಿಂದ ಹೊನ್ನಾವರ ಬೇರ್ಪಡಬಹುದು.
ಸಿದ್ದಾಪುರದ ಉದಯವಾಗಬಹುದು.

ಇರುವ ಕೆನರಾ ಕ್ಷೇತ್ರಕ್ಕೆ ಬೆಳಗಾವಿಯ ಕಿತ್ತೂರು ಖಾನಾಪುರ ಸೇರಸಲಾಗಿದೆ. ಆದುದರಿಂದ ಕೆನರಾ ಒಟ್ಟಾಗಿ ಇರಲಿದೆ.

ದಕ್ಷಿಣದ ಭಟ್ಕಳ ಹೊನ್ನಾವರ ಸಾಧ್ಯವಾದರೆ ಸಿದ್ದಾಪುರ

ಉಡುಪಿಯ ಬೈಂದೂರು,
ಸಾಗರ, ಹೊಸನಗರ
ಸೊರಬ, ಸಾಗರ ಗ್ರಾಮಾಂತರ ಇಲ್ಲವೇ (ಜೋಗ ಕಾರ್ಗಲ್ )
ಸೇರಿ ಸಾಗರ ಲೋಕ ಸಭಾ ಕ್ಷೇತ್ರದ ಉದಯ ಆಗಬಹುದು.

ಉಡುಪಿಯ ನಾಲ್ಕು ಕ್ಷೇತ್ರ ಗಳ ಜೊತೆಗೆ ಬ್ರಹ್ಮಾವರ, ಹೆಬ್ರಿ, ಉಡುಪಿ‌ ಉತ್ತರದ ಸಾಧ್ಯತೆ ಇದೆ.

ಅಲ್ಲದೇ ಮಂಗಳೂರಿನ ಎರಡು, ಮೂರು ಕ್ಷೇತ್ರಗಳು ಉಡುಪಿಗೆ ಸೇರಿಸಿ ಹಳೆಯ ಉಡುಪಿ ಲೋಕಸಭಾ ಕ್ಷೇತ್ರವಾಗಲಿದೆ.

ಅಂದರೇ ಈಗಿರುವ ಮಂಗಳೂರು ಉತ್ತರ, ದಕ್ಷಿಣ ಉಲ್ಲಾಳ, ಬಂಟ್ವಾಳ, ಮೂಡಬಿದಿರೆ,,ಸುಳ್ಯ, ಪುತ್ತೂರು, ಬೆಳ್ತಂಗಡಿ ಜೊತೆಗೆ
ಸುರತ್ಕಲ್ ,ವಿಟ್ಲ ಪುನಃ ಉದಯವಾಗುತ್ತದೆ.
ಇದರ ಜೊತೆಗೆ ಕಡಬ, ಪಾಣೆಮಂಗಳೂರು ಆಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು,
ಸಖರಾಯಪಟ್ಟಣ ಹಿಂದೆ ಅಸ್ತಿತ್ವ ದಲ್ಲಿ ಇದ್ದ ಕ್ಷೇತ್ರ
ಮೂಡಿಗೆರೆ, ಶೃಂಗೇರಿ ಇಲ್ಲವೇ ಕೊಪ್ಪದ ಉದಯ.
ಬೀರೂರು ಪುನಃ ಉದಯವಾಗುತ್ತದೆ.

(ಕೃಪೆ : ಸಾಮಾಜಿಕ ಜಾಲತಾಣ)

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ