LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಸತಿ ಯೋಜನೆಯಡಿ ಮನೆ ನಿರ್ಮಾಣ ; ಅರ್ಜಿ ಆಹ್ವಾನ

ಮಡಿಕೇರಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಅನುದಾನ ಮಂಜೂರು ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಮುದಾಯದ ಪಲಾಪೇಕ್ಷಿಗಳು ಅರ್ಜಿಯನ್ನು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಅಥವಾ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇವರ ಕಚೇರಿಗೆ ಇದೇ ಮೇ 30 ರೊಳಗೆ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ನಿವೇಶನದ ಹಕ್ಕುಪತ್ರ, ಆರ್.ಟಿ.ಸಿ, ಅರ್ಜಿದಾರರು ಹಿಂದೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಅಥವಾ ಇತರೆ ವಸತಿ ಯೋಜನೆಗಳಡಿ ಸೌಕರ್ಯ ಪಡೆಯದಿರುವ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣ ಪತ್ರ. ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಮೇ, 23 ರಂದು ವಿಶ್ವ ಜೇನುನೋಣ ದಿನಾಚರಣೆ

ಮಡಿಕೇರಿ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ ವ್ಯಾಪ್ತಿಯ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಹಾಗೂ ಅರಣ್ಯ ಮಹಾವಿದ್ಯಾಲಯ,ಪೊನ್ನಂಪೇಟೆ ಮತ್ತು ರೇನೊರೆಸ್ಟ್ ಅಲೈನ್ಸ್ ಮತ್ತು ಬೈಫ್-ಸಬಲ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಮೇ 23 ರಂದು ಬೆಳಗ್ಗೆ 10.30 ಗಂಟೆಗೆ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಶ್ವ ಜೇನುನೊಣ ದಿನಾಚರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ನಾರಾಯಣಸ್ವಾಮಿ, ಕೃಷಿ ಸಚಿವರಾದ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ.ಎ.ಬಿ.ಪಾಟೀಲ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ರಾಮಚಂದ್ರ ಸಿ., ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಹಾಗೂ ಅರಣ್ಯ ಮಹಾವಿದ್ಯಾಲಯದ ಡೀನ್ (ಅರಣ್ಯ) ಡಾ ಜಿ.ಎಂ.ದೇವಗಿರಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮವು ಜೇನುಸಾಕಣೆ, ಜೇನು ಉತ್ಪನ್ನಗಳು, ಉಪಕರಣಗಳು, ಜೇನು ನೊಣಗಳ ಆಹಾರ ಸಸ್ಯಗಳು ಮತ್ತಿತರ ಬಗ್ಗೆ, ಸಮಗ್ರ ಮಾಹಿತಿಯನ್ನು ಒದಗಿಸುವ ಕಾರ್ಯಕ್ರಮವಾಗಿದ್ದು, ಕೊಡಗು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಕೃಷಿಕರು, ಜೇನು ಸಾಕಣೆದಾರರು, ಜೇನುಸಾಕಣೆ ಆಸಕ್ತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರು (9880076381, ಡಾ.ಆರ್.ಎನ್.ಕೆಂಚರಡ್ಡಿ), ತೋಟಗಾರಿಕೆ ತಜ್ಞರು (9900588345 ಡಾ. ಹೇಮಂತ್ ಕುಮಾರ್ ಪಿ.) ಇವರನ್ನು ಸಂಪರ್ಕಿಸಬಹುದಾಗಿದೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಸಿದ ಆಟಗಾರ ವಿರಾಟ್ ಕೊಹ್ಲಿBIG NEWS : ಧೂಮಪಾನಿಗಳಿಗೆ ಬಿಗ್ ಶಾಕ್ ; ಸಿಗರೇಟ್ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ |Cigarette Price Hike‘ಗ್ಯಾಸ್ ಸಿಲಿಂಡರ್’ ಬುಕ್ ಮಾಡುವಾಗ OTP ಬರುತ್ತಿಲ್ಲವೇ..ನಿಮ್ಮ ‘ಮೊಬೈಲ್‌’ನಲ್ಲಿ ಈ ಸೆಟ್ಟಿಂಗ್ಸ್ ಬದಲಾಯಿಸಿ !GOOD NEWS : ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ PF ಹಣ UPI ಮೂಲಕ ತಕ್ಷಣವೇ ಖಾತೆಗೆ ಜಮೆ !ಕೇಂದ್ರದಿಂದ ಬಿಜೆಪಿ ಸರ್ಕಾರ ಕಿತ್ತೆಸೆಯುತ್ತೇವೆ: ಮಮತಾ ಬ್ಯಾನರ್ಜಿ ಗುಡುಗುSHOCKING : ನಡುರಸ್ತೆಯಲ್ಲೇ ಮಹಿಳೆಯ ಉಡುಪು ಎಳೆದು ವಿಕೃತಿ ಮೆರೆದ ಕಾಮುಕ : ಆಘಾತಕಾರಿ ವೀಡಿಯೋ ವೈರಲ್ |WATCH VIDEO‘IT’ ಉದ್ಯೋಗಿಗಳಿಗೆ ನಿರಾಸೆ ; ‘ಬೋನಸ್’ ಕುರಿತು ಇನ್ಫೋಸಿಸ್ ಮಹತ್ವದ ಘೋಷಣೆ |InfosysJOB ALERT : ಪದವೀಧರರಿಗೆ ಗುಡ್ ನ್ಯೂಸ್ : ‘ಬ್ಯಾಂಕ್ ಆಫ್ ಬರೋಡಾ’ದಲ್ಲಿ 5,000 ಹುದ್ದೆಗಳಿಗೆ ಅರ್ಜಿ ಆಹ್ವಾನ |Bank of Baroda recruitment 2026JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘SBI’ ನಲ್ಲಿ 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ |SBI Recruitment 2026BIG NEWS: ಸಿಎಂ ಜೋಸೆಫ್ ವಿಜಯ್ ಸರ್ಕಾರಕ್ಕೆ ಮತ್ತೆ ಆತಂಕ: ಬೆಂಬಲ ಹಿಂಪಡೆಯುವುದಾಗಿ ಸಿಪಿಐಎಂ ಬೆದರಿಕೆ