Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

2100ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನದಾಸೋಹ ಕಾರ್ಯಕ್ರಮ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿಯುವ ಪ್ರತಿಯೊಬ್ಬರೂ ಮಾದರಿ.  ಸಮಾಜದಿಂದ ನಾವೇನು ಪಡೆಯಬಹುದು ಎಂಬ ಯೋಚನೆಯೊಂದಿಗೆ ಮಾಡುವ ಸಮಾಜ ಸೇವಾಕಾರ್ಯಗಳೇ


ಹೆಚ್ಚಾಗಿರುವ ಸಮಯದಲ್ಲಿ ಮಲ್ಲೇಶ್ ಮತ್ತು ತಂಡ ನಿಸ್ವಾರ್ಥ ಸೇವಕರಾಗಿ  ಕಳೆದ 2100 ದಿನಗಳಿಂದ ನಿರ್ಗತಿಕರಿಗೆ,ವಯೋವೃದ್ದರಿಗೆ, ಹಸಿದವರಿಗೆ  ನಿರಂತರ ಅನ್ನದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ ಅವರ ತಂಡಕ್ಕೆ ಶುಭವಾಗಲಿ ಎಂದು ಚಿತ್ರನಟ ಅಹಿಂಸಾ ಚೇತನ್ ತಿಳಿಸಿದರು.

 ನಗರದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ನಿರಂತರ ಅನದಾಸೋಹ ಸಮಿತಿಯ 2100ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಸಮಾಜಕ್ಕೆ ಒಳಿತು ಮಾಡಲು ಪ್ರಮುಖವಾಗಿ ಜನಜಾಗೃತಿಹೋರಾಟ ಮತ್ತು ಸೇವೆಗಳ ಮೂಲಕ   ಶ್ರಮಿಸಬಹುದಾಗಿದೆ . ಸಂವಿಧಾನವು ನಮಗೆ ಸಮ ಸಮಾಜದ  ಪರಿಕಲ್ಪನೆಯನ್ನು ನೀಡಿದೆ. ದೇಶದ ಸಮಗ್ರ ಅಭಿವೃದ್ಧಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ  ಸಮ ಸಮಾಜದ ಕನಸು ನನಸಾಗಬೇಕಿದೆ ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗುವ ಮೂಲಕ ಮುಂದಿನ ಪೀಳಿಗೆಗೆ ಸಮೃದ್ಧ ಸಮಗ್ರ ಸಮಾಜವನ್ನು ನೀಡುವ ನಿಟ್ಟಿನಲ್ಲಿ  ಶ್ರಮಿಸಬೇಕು ಎಂದರು.

 ದೇಶದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಹೆಚ್ಚಿಸುವ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸುವ ಮೂಲಕ  ದೇಶದ ಅಭಿವೃದ್ಧಿಪಥವನ್ನು ಸುಗಮಗೊಳಿಸಬಹುದಾಗಿದೆ.ಮೂಢನಂಬಿಕೆಗಳಿಂದ ಹೊರಬಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ  ಪ್ರಜ್ಞಾವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.

 ಕಾರ್ಯಕ್ರಮದಲ್ಲಿ ಅಂಗನವಾಡಿ  ಕಾರ್ಯಕರ್ತೆಯರಿಗೆ  ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಸದಾ ದಾನಿಗಳ ನೆರವಿನಿಂದ ನಡೆಯುವ ಈ ಕಾರ್ಯಕ್ರಮವು ನೂರಾರು ಕಡು ಬಡವರಿಗೆ, ವೃದ್ಧರಿಗೆ, ಹಸಿದ ಹೊಟ್ಟೆಗಳಿಗೆ  ಅಕ್ಷಯ ಪಾತ್ರೆಯಾಗಿದೆಯೆಂದರೆ ತಪ್ಪಾಗಲಾರದು, 2100 ನೇ ದಿನದ ಈ ಅನ್ನದಾಸೋಹ ಕಾರ್ಯಕ್ರಮವು ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ. ದಿನದಿಂದ ದಿನಕ್ಕೆ ಆಹಾರ ಬಯಸಿ ಬರುವ ಜನರು ಹೆಚ್ಚಾಗುತ್ತಿದ್ದಾರೆ.  ನಮಗೆ ದಾನಿಗಳ ಅವಶ್ಯಕತೆ ಹೆಚ್ಚಾಗಿದೆ ಅನ್ನದಾಸೋಹಕ್ಕೆ ಮುಂದಾಗುವ ದಾನಿಗಳು ತಮ್ಮ ವಿಶೇಷ ದಿನಗಳನ್ನು  ನಮ್ಮ ನಿರಂತರ ಅನ್ನದಾಸಾಹ ಸಮಿತಿ ಇಟ್ಟಿಗೆ ಆಚರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.

 ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ  ಪ್ರಾರಂಭವಾದ ಈ ಕಾರ್ಯಕ್ರಮವು ನಿರಂತರವಾಗಿ ಸಾಗುತ್ತಿದೆ. ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಹಾರ ಬಯಸಿ ಬರುತ್ತಾರೆ  ಮಲ್ಲೇಶ್ ಮತ್ತು ತಂಡ  ನಿತ್ಯ ನಿರಂತರ ದಾನಿಗಳ ನೆರವಿನಿಂದ  ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಸೇವಾ ಕಾರ್ಯಕ್ರಮವು  ಹೀಗೆ ನಿರಂತರ ಸಾಗಲಿ  ನಮ್ಮ ಬೆಂಬಲ ಮಲ್ಲೇಶ್ ಮತ್ತು ತಂಡಕ್ಕೆ ಸದಾ ಇರುತ್ತದೆ ಎಂದರು.


 ಶ್ರೀರಾಮ್ ಸೇನೆಯ ರಾಜ್ಯ ಧರ್ಮ ಪ್ರಚಾರಕರಾದ ಶ್ರೀನಿವಾಸ್ ಗುರೂಜಿ ಮಾತನಾಡಿ ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನವು ಸಹ ಆಗಿದೆ ಇಂತಹ ಸೇವಾಕಾರ್ಯವನ್ನು ನಿರಂತರವಾಗಿ 2,100 ದಿನಗಳಿಂದ ಮಾಡಿಕೊಂಡಿರುವ ಅನ್ನದಾಸೋಹ ಸಮಿತಿಕಾರ್ಯ ಶ್ಲಾಘನೀಯ ನಮ್ಮ ಶ್ರೀರಾಮ ಸೇನೆ  ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಸದಾ ಇರುತ್ತದೆ ಸಮಿತಿಯ ಎಲ್ಲರಿಗೂ ಶುಭವಾಗಲಿ ಎಂದರು.

 ಈ ವೇಳೆ ಮಾಜಿ ನಗರ ಸಭಾ ಅಧ್ಯಕ್ಷ ಪಿ ಸಿ ಲಕ್ಷ್ಮೀ ನಾರಾಯಣ್, ಸಮಾಜ ಸೇವಕರಾದ ಸಹದೇಶ್.ಟೀ.ಎಂ, ಸಮಾಜ ಸೇವಕ ಸೆಲ್ವಂ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷ ಎಚ್. ರಾಘವೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್  ಶಿವಕುಮಾರ್,

ಚಿತ್ರನಟ ವೀಡಾ ಸುಧೀರ್,ಚಿತ್ರನಟಿ ಸುವರ್ಣ,ಚಿತ್ರನಟಿ ಲಕ್ಷ್ಮಿ ಮುಖಂಡರಾದ ಜಿ.ರಂಗಸ್ವಾಮಿ,ಪ್ರವೀಣ್,ರುದ್ರೇಶ್ ಕೆ.ಸಿ, ಅಂಗನವಾಡಿ ಕಾರ್ಯಕರ್ತೆ ಶೈಲಜಾ ಗೌಡ,ಮೇಘನಾ,ಎ.ಸಿ.ಅಶೋಕ್,ಜ್ಯೂನಿಯರ್ ರಾಜ್ ಕುಮಾರ್, ಡಿ.ಸಿ.ಚೌಡರಾಜ್, ಸುರೇಶ, ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ