Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮೂಡಲಗಿ ಉಪ ನೋಂದಣಿ ಕಚೇರಿಯಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ

 

ಮೂಡಲಗಿ :
ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಏಜೆಂಟರ ಹಾವಳಿ ಮಿತಿ ಮೀರಿದೆ.

ನೋಂದಣಿಗಾಗಿ ₹ 1ಸಾವಿರದಿಂದ ₹ 5 ಸಾವಿರದವರೆಗೆ ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪಗಳು ಇದೆ. ಮದುವೆ ನೋಂದಣಿಗೆ ₹ 5ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಏಜೆಂಟರು. ಹಣ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ. ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ-ನೋಂದಣಾಧಿಕಾರಿ ಹರಿಯಪ್ಪ ವೇಳೆಗೆ ಸರಿಯಾಗಿ ಬರದೆ ಮುಂಜಾನೆ 11-30 ಕ್ಕೆ ಕಚೇರಿಗೆ ಬರುವುದು ಹಾಗೂ ವಿವಾಹ ನೋಂದಣಿಗೆ ನೇರವಾಗಿ ಸಾರ್ವಜನಿಕರು ಕಚೇರಿಗೆ ಹೋದರೆ ಮಧ್ಯಾಹ್ನದ ನಂತರ ಬನ್ನಿ ಅಂತ ಹೇಳುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವುದು, ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ.

ದುರಂತ ಎಂದರೆ ವಿವಾಹ ನೋಂದಣಿಗೆ ಸರ್ಕಾರಿ ಶುಲ್ಕ ಇರುವುದೇ 450 ರೂಪಾಯಿ. ಆದರೆ ಏಜೆಂಟರು ಸಾರ್ವಜನಿಕರ ಹತ್ತಿರ ಸುಲಿಗೆ ಮಾಡುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇದೆ ರೀತಿಯಾಗಿ ಮುಂದುವರೆದಲ್ಲಿ ವಿವಿಧ ಸಂಘಟನೆಗಳು ಹೋರಾಟ ಮಾಡುವುದರಲ್ಲಿ ಸಂದೇಹವಿಲ್ಲ.

  • ಮೂಡಲಗಿಯಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ. ಏಜೆಂಟರ ಹಾವಳಿಗೆ ಕಂಗಾಲಾದ ಸಾರ್ವಜನಿಕರು. ಸಾರ್ವಜನಿಕರಿಗಿಂತ ಏಜೆಂಟರ ಹಾವಳಿ. ಪ್ರತಿಯೊಂದು ಟೇಬಲ್ ಗೆ ಕೊಡಲೇಬೇಕು ಹಪ್ತ. ಸರ್ಕಾರದ ಎಲ್ಲಾ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಿದ್ದಾರೆ. ನೋಂದಣಿ ಅಧಿಕಾರಿಗೆ ಬೇರೆ ಹಣ. ಕಂಪ್ಯೂಟರ್ ಆಪರೇಟರಿಗೆ ಬೇರೆ ಹಣ. ಇಲ್ಲಿ ದುಡ್ಡಿದ್ದರೆ ಮಾತ್ರ ಕೆಲಸ. ಕೆಲವು ದಾಖಲಾತಿಗಳು ಇಲ್ಲದೆ ನೋಂದಣಿ ಮಾಡುತ್ತಿರುವುದು ಕೂಡ ಇಲ್ಲಿ ನಡೆಯುತ್ತಿದೆ. ಏಜೆಂಟರ ಮಹಿಮೆಯಿಂದ ಕೋಟ್ಯಾಧೀಶ್ವರರಾಗಿರುವ ನೋಂದಣಿ ಅಧಿಕಾರಿಗಳು. ಲಂಗೂ ಲಗಾಮು ಇಲ್ಲದೆ ಬೇಕಾಬಿಟ್ಟಿಯಾಗಿ ಸಾರ್ವಜನಿಕರಿಂದ ಹಣ ವಸೂಲಿ. ಕಣ್ಣಿದ್ದು ಕೂರಡರಂತೆ ಮೌನವಾಗಿರುವ ಸ್ಥಳೀಯ ಶಾಸಕರು. ಯಾರಿಗೆ ಹೇಳೋಣ ನಮ್ ಸಮಸ್ಯೆ. ಈ ನೊಂದಣಿ ಕಚೇರಿಯನ್ನು ಬೇಡಿ ಪಡೆದಿದ್ದು ಇದಕ್ಕೆನಾ????. ತಾಲೂಕಿನ ಹೋರಾಟಗಾರರು ಮೌನ ವಹಿಸಿದ್ದು ಏಕೆ??

  • ಗುರು ಗಂಗನ್ನವರ
    ಸಾಮಾಜಿಕ ಹೋರಾಟಗಾರ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ