Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಆದಿಪುರುಷ ಸಿನಿಮಾ ಕುರಿತು ನ್ಯಾಯಾಲಯ ಸಿಡಿಮಿಡಿ

 

ದೆಹಲಿ :
ಆದಿಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಬುಧವಾರ ಸಿನಿಮಾ ನಿರ್ಮಾಪಕರು ಧಾರ್ಮಿಕ ಪಠ್ಯಗಳಿಂದ ದೂರವಿರಬೇಕು ಮತ್ತು ಅವುಗಳ ಬಗ್ಗೆ ಸಿನಿಮಾ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ. ನಿಷೇಧವನ್ನು ಕೋರಿ ಸಲ್ಲಿಸಿದ ಮನವಿಗಳಿಗೆ ಪ್ರತಿಕ್ರಿಯೆಯಾಗಿ ವೈಯಕ್ತಿಕ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ (ಸಿಬಿಎಫ್‌ಸಿ) ನಿರ್ದೇಶಿಸಿದೆ. ನೀವುಗಳು ಕುರಾನ್‌ ಹಾಗೂ ಬೈಬಲ್‌ ವಿಚಾರಗಳನ್ನೂ ಮುಟ್ಟಬಾರದು. ನಾನು ಇಲ್ಲಿ ಒಂದು ಮಾತನ್ನು ನಿಮಗೆ ಸ್ಪಷ್ಟವಾಗಿ ಹೆಳುತ್ತೇನೆ. ಯಾವುದೇ ಒಂದು ಧರ್ಮದ ಅಂಶಗಳನ್ನು ನೀವು ಮುಟ್ಟಲೇಬಾರದು. ಯಾವುದೇ ಧರ್ಮದ ಕುರಿತಾಗಿಯೂ ಕೆಟ್ಟದಾಗಿ ಚಿತ್ರಣ ಮಾಡಬಾರದು. ನಿಮಗೆ ನೆನಪಿರಲಿ ಕೋರ್ಟ್‌ಗೆ ಯಾವುದೇ ಧರ್ಮ ಅನ್ನೋದು ಇರೋದಿಲ್ಲ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀಪ್ರಕಾಶ್ ಸಿಂಗ್ ಅವರಿದ್ದ ನ್ಯಾಯಪೀಠ ಹೇಳಿದೆ. ಸಿನಿಮಾ ನಿರ್ಮಾಣ ಮಾಡುವವರು ಹಣವನ್ನು ಮಾಡೋದು ಹೇಗೆ ಅನ್ನೋದರ ಬಗ್ಗೆ ಮಾತ್ರವೇ ಯೋಚನೆ ಮಾಡ್ತಾರೆ ಎಂದು ನ್ಯಾಯಮೂರ್ತಿ ಚೌಹಾಣ್‌ ಹೇಳಿದರು. ಇದೇ ವೇಳೆ, ಸುಮ್ಮನೆ ಕುರಾನ್‌ ಬಗ್ಗೆ ಒಂದು ಸಣ್ಣ ಡಾಕ್ಯುಮೆಂಟರಿ ಮಾಡಿದರೆ, ಇಡೀ ದೇಶ ಹೇಗಾಗುತ್ತದೆ ನೋಡಿ ಎಂದು ಎಚ್ಚರಿಸಿದ್ದಾರೆ.

"ನೀವು ಕುರಾನ್‌ನಲ್ಲಿ ತಪ್ಪು ವಿಷಯಗಳನ್ನು ಚಿತ್ರಿಸುವ ಸಣ್ಣ ಸಾಕ್ಷ್ಯಚಿತ್ರವನ್ನಾದರೂ ನಿರ್ಮಾಣ ಮಾಡಿದರೆ, ಏನಾಗಬಹುದು ಎಂದು ನಿಮಗೆ ಗೊತ್ತಿರಲಿ' ಎಂದು ನ್ಯಾಯಾಲಯವು ಮೌಖಿಕವಾಗಿ ಟೀಕಿಸಿತು. ಸಾಮಾಜಿಕ ಸೌಹಾರ್ದತೆ ಕದಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೈಕೋರ್ಟ್ ಹೇಳಿದೆ. “ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು. ಇದು ತಮಾಷೆಯ ವಿಚಾರವಲ್ಲ ”ಎಂದು ಅದು ಹೇಳಿದೆ.

"ರಾಮಾಯಣದ ಹಲವಾರು ಪಾತ್ರಗಳನ್ನು ಪೂಜಿಸಲಾಗುತ್ತದೆ ಮತ್ತು ಅವುಗಳನ್ನು ಚಿತ್ರದಲ್ಲಿ ಹೇಗೆ ಚಿತ್ರಿಸಲಾಗಿದೆ ಅನ್ನೋದನ್ನ ನೋಡಿದ್ದೇವೆ" ಎಂದು ನ್ಯಾಯಾಲಯ ಹೇಳಿದೆ. ಜೂನ್‌ 16 ರಂದು ಚಿತ್ರ ಬಿಡುಗಡೆಯಾಗಿದೆ. ಈವರೆಗೂ ಏನೂ ಆಗಿಲ್ಲ. ಆದರೆ, ಮೂರು ದಿನದ ವಿಚಾರಣೆಯಲ್ಲಿ ಏನಾಗಲು ಸಾಧ್ಯ ಎಂದು ಪ್ರಶ್ನೆ ಮಾಡಿದೆ. ಈ ಚಿತ್ರದಿಂದ ತಮಗೆ ನೋವಾಗಿದೆ ಎಂದು ಹಲವರು ಹೇಳಿದ್ದಾರೆ ಎಂದು ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ. “ಕೆಲವರು ಪೂರ್ಣ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಭಗವಾನ್ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ಜಿಯನ್ನು ನಂಬುವವರು ಚಿತ್ರ ವೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

 

ಇದೇ ವೇಳೆ ಕೇಂದ್ರ ಸೆನ್ಸಾರ್‌ ಮಂಡಳಿ ಸದಸ್ಯರಿಗೂ ಛೀಮಾರಿ ಹಾಕಿದ ಕೋರ್ಟ್‌, ರಾಮಾಯಣವನ್ನು ಈ ರೀತಿ ಚಿತ್ರಣ ಮಾಡಿದ ಚಿತ್ರಕ್ಕೆ ಪ್ರಮಾಣೀಕರಣ ಮಾಡಿದವರು ಮಹಾನ್‌ ವ್ಯಕ್ತಿಗಳು ಎಂದು ಹೇಳಿದೆ. ''ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಅರ್ಜಿಯಲ್ಲಿ ಹೇಳಿರುವುದನ್ನು ನಾವು ನಂಬಿದ್ದೇವೆ. ನಿಜವಾಗಿಯೂ ಜನರ ಭಾವನೆಗಳಿಗೆ ಧಕ್ಕೆಯಾಗಿದೆ, ”ಎಂದು ಹೇಳಿದ ನ್ಯಾಯಾಲಯ, “ನಾವು ಇಂದು ಮೌನವಾಗಿದ್ದರೆ, ಏನಾಗುತ್ತದೆ ಎಂದು ನಮಗೆ ತಿಳಿದಿದೆ” ಎಂದು ಹೇಳಿದರು. "ಒಂದು ಚಿತ್ರವು ಭಗವಾನ್ ಶಿವನು ತ್ರಿಶೂಲದೊಂದಿಗೆ ಓಡುತ್ತಿರುವುದನ್ನು (ಪಿಕೆ ಚಿತ್ರದಲ್ಲಿ) ತೋರಿಸಿದೆ. ಅದರಲ್ಲಿ ಭಗವಂತನನ್ನೇ ಗೇಲಿ ಮಾಡಲಾಗಿದೆ. ಇನ್ನು ಮುಂದೆಯೂ ಇದು ಆಗಬಹುದು' ಎಂದು ನ್ಯಾಯಾಧೀಶರೊಬ್ಬರು ಕೇಳಿದರು.

 

ಇತ್ತೀಚೆಗಷ್ಟೇ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿಸಲು ತಿದ್ದುಪಡಿ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಶುಕ್ಲಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ತಿದ್ದುಪಡಿ ಅರ್ಜಿಯು ಶುಕ್ಲಾ ಅವರು ಬರೆದ ಸಂಭಾಷಣೆಗಳನ್ನು ಹಾಸ್ಯಾಸ್ಪದ, 'ಕೊಳಕು' ಮತ್ತು 'ರಾಮಾಯಣ ಯುಗದ ವೈಭವದ ವಿರುದ್ಧ' ಎಂದು ಉಲ್ಲೇಖಿಸಿ ಆಕ್ಷೇಪಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ