LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಚ್ಚಾತೈಲ ಬೆಲೆ ದಿಢೀರ್‌ ಏರಿಕೆ : ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಆತಂಕ

ನವದೆಹಲಿ: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸಿ ಇರಾನ್‌ ಅಣ್ವಸ್ತ್ರ ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಪರಿಸ್ಥಿತಿ ಗಂಭೀರವಾಗಿದ್ದು, ಅಮೆರಿಕದ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್‌ ಘೋಷಣೆ ಮಾಡಿದ ಬೆನ್ನಲ್ಲೆ ಕಚ್ಚಾತೈಲದ ದರ 5 ತಿಂಗಳ ನಂತರ ಭಾರಿ ಏರಿಕೆಯಾಗಿದೆ. ಇದರಿಂದಾಗಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಕೆ ಆತಂಕ ತಲೆದೋರಿದೆ. ಸದ್ಯಕ್ಕೆ ಬೆಲೆ ಏರಿಕೆಯಗದು ಎಂದು ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದ್ದರೂ ಯುದ್ಧ ದೀರ್ಘಕಾಲ ಮುಂದುವರಿದರೆ ತೈಲ ಮಾರುಕಟ್ಟೆ ಮೇಲೆ ಪರಿಣಾಮವಾಗಲಿದೆ.

ಒಂದು ಬ್ಯಾರೆಲ್‌ (159 ಲೀಟರ್‌) ಕಚ್ಚಾತೈಲ ಜನವರಿ ನಂತರ ಏರಿಕೆ ಕಂಡಿದೆ. ಇಂದು 1 ಬ್ಯಾರೆಲ್ ಬ್ರೆಂಟ್ ಕಚ್ಚಾತೈಲದ ಬೆಲೆ 1.92 ಡಾಲರ್‌ ಅಥವಾ ಶೇ.2.49 ಏರಿಕೆಯಾಗಿ 78.93 ಡಾಲರ್(6,847 ರೂ.) ತಲುಪಿದೆ.



ಅಮೆರಿಕ ದಾಳಿಯ ಬೆನ್ನಲ್ಲೇ ಇರಾನ್‌ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಬಹುತೇಕ ದೇಶಗಳಿಗೆ ಹಾರ್ಮುಜ್‌ ಜಲಸಂಧಿ ಮೂಲಕ ಕಚ್ಚಾತೈಲ ರವಾನೆಯಾಗುತ್ತದೆ. ಈ ಜಲಸಂಧಿಯನ್ನು ಮುಚ್ಚಿದರೆ ಕಚ್ಚಾತೈಲ ಪೂರೈಕೆ ವ್ಯತ್ಯಯಗೊಂಡು ಬೆಲೆ ಏರಿಕೆಯಾಗಲಿದೆ. ಇರಾನ್‌ ಮತ್ತು ಒಮಾನ್‌ ನಡುವಿನ 40 ಕಿ.ಮೀ ಅಗಲದ ಸಮುದ್ರದಲ್ಲಿ ಹಡಗುಗಳು ಸಂಚರಿಸುವ ಜಾಗಕ್ಕೆ ಹಾರ್ಮುಜ್ ಜಲಸಂಧಿ ಎಂದು ಕರೆಯಲಾಗುತ್ತದೆ.

ಒಂದು ತಿಂಗಳಿನಲ್ಲಿ 3 ಸಾವಿರಕ್ಕೂ ಅಧಿಕ ಸರಕು ಹಡಗುಗಳು ಈ ಜಲಸಂಧಿಯನ್ನು ಬಳಸುತ್ತಿದೆ. ಇರಾನ್‌ ಈಗ ಈ ಜಲಸಂಧಿಯನ್ನೇ ಬಂದ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಕಚ್ಚಾತೈಲ ದರ ದಿಢೀರ್‌ ಏರಿಕೆಯಾಗಿದೆ. ಇರಾಕ್‌, ಸೌದಿ ಅರೇಬಿಯಾ, ಯುಎಇ, ಕತಾರ್‌ನಿಂದ ಬರುವ ಕಚ್ಚಾತೈಲ, ಎಲ್‌ಎನ್‌ಜಿ ಹೊತ್ತುಕೊಡು ಬರುವ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಬೇಕು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026