ಸಾಂಸ್ಕೃತಿಕ ನಾಯಕ ಬಸವಣ್ಣ
ಭಾಷಣ ಸ್ಪರ್ಧೆ -ಸೃಷ್ಠಿ ಪ್ರಥಮ
ಬೆಳಗಾವಿ; ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿ ಹಾಗೂ ನಾಗರಿಕ ವಿಕಾಸ ಸಂಘ ಮಾಳ ಮಾರುತಿ ಬಡಾವಣೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶನಿವಾರ 29 ರಂದು ಏರ್ಪಡಿಸಿದ "ಸಾಂಸ್ಕೃತಿಕ ನಾಯಕ ಬಸವಣ್ಣ"ವಿಷಯದ ಮೇಲೆ ಜರುಗಿದ ಭಾಷಣ ಸ್ಪರ್ಧೆಯಲ್ಲಿ 1) ಕುಮಾರಿ ಶೃಷ್ಠಿ ಗಿಡ್ಡಳ್ಳಿ ಪ್ರಥಮ ಸ್ಥಾನ 2) ಕುಮಾರಿ ಪವಿತ್ರಾ ಹೊಳೆಪ್ಪನವರ ದ್ವಿತಿಯ ಸ್ಥಾನ 3) ಕುಮಾರಿ ಹರ್ಷಿತಾ ಮರಳಿ ತೃತಿಯ ಸ್ಥಾನ ಪಡೆದುಕೊಂಡರು.
ವಿಜೇತ ವಿದ್ಯಾರ್ಥಿಗಳಿಗೆ ನಾಗರಿಕ ವಿಕಾಸ ಸಂಘದಿಂದ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್ ಸಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಗರಿಕ ವಿಕಾಸ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಂ. ಬೂದಿಹಾಳ ಪ್ರಾಸ್ಥಾವಿಕವಾಗಿ ಮಾತನಾಡಿ ಬಸವಾದಿ ಶರಣರು ರಚಿಸಿದ ವಚನಗಳ ತತ್ವಸಿದ್ಧಾಂತಗಳನ್ನು ವಿವರಿಸಿ. ಪ್ರಸ್ತುತ ಮಾನವ ಸಮಾಜ ವಚನಗಳನ್ನು ಓದಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾಗಿದೆ.
ಬಸವಣ್ಣನವರ ವಚನಗಳನ್ನು ಪಾಶ್ಚಾತ್ಯರು ಅಭ್ಯಾಸ ಮಾಡುತ್ತಿದ್ದಾರೆ. ಅವರು ಕೇವಲ ಕರ್ನಾಟಕ ಸಂಸ್ಕೃತಿಕ ನಾಯಕರಷ್ಟೇ ಅಲ್ಲ ವಿಶ್ವಕ್ಕೆ ಅವರ ವಿಚಾರಗಳು ಮಾರ್ಗದರ್ಶಿ ಆಗಿವೆ ಎಂದು ಹೇಳಿದರು.
ಪ್ರೋ.ಯಲ್ಲಪ್ಪ ಜಕ್ಕನ್ನವರ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಚಾರ್ಯ ಪ್ರೋ ಜಂಬಗಿ, ಪ್ರೋ ಜಿ. ಎಸ್ ಮಾನೆ, ನಾಗರಿಕ ವಿಕಾಸ ಸಂಘದ ಶ್ರೀ ಶಶಿಕಾಂತ ಗುಂಡಕಲ್ಲೆ, ಶ್ರೀ ಪ್ರಭಾಕರ ವನಹಳ್ಳಿ, ಶ್ರೀ ಸತೀಶ ಸವದಿ, ಶ್ರೀ ಸಿ. ಎಸ್ ಬಗಲಿ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಶ್ರೀ ಎಫ್ ಆರ್ ಪಾಟೀಲ, ಶ್ರೀಈರಣ್ಣ ಚಿನಗುಡಿ, ಉಪನ್ಯಾಸಕರಾದ ಶ್ರೀಮತಿ ಮಹಾದೇವಿ ಕಿತ್ತೂರು ಭಾಗವಹಿಸಿದ್ದರು.