LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡಿ.09 ರಿಂದ 23 ರವರೆಗೆ ಕರೆಂಟ್ ಇರುವುದಿಲ್ಲ.! ಇದರಲ್ಲಿ ನಿಮ್ಮ ಹಳ್ಳಿಗಳು ಇವೆಯಾ.?

 

ಚಿತ್ರದುರ್ಗ: ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ 66 ಕೆ.ವಿ ದಾವಣಗೆರೆ-ಚಿತ್ರದುರ್ಗ ಲೈನ್-1ರ ಟ್ಯಾಪ್ ಪಾಯಿಂಟ್‍ನಿಂದ 2.196 ಕಿಮೀ ಉದ್ದಕ್ಕೂ ಭರಮಸಾಗರ ವಿ.ವಿ ಕೇಂದ್ರಕ್ಕೆ 2.196 ಕಿಮೀ ದೂರದ ನಿರ್ಮಾಣಕ್ಕೆ  ಕೊಯೋಟ್ ಕಂಡಕ್ಟರ್‍ನೊಂದಿಗೆ ಜೋಡಿ ಪ್ರಸರಣ ಮಾರ್ಗದ ಮೇಲಿರುವ ಜೋಡಿ ಮಾರ್ಗದಿಂದ ಒಂಟಿ ಪ್ರಸರಣ ಮಾರ್ಗದ ಮೇಲಿರುವ ಒಂಟಿ ಮಾರ್ಗ ಪರಿವರ್ತಿಸುವ ಮೂಲಕ ಅಸ್ತಿತ್ವದಲ್ಲಿರುವ 66/11 ಕೆವಿ.

ಭರಮಸಾಗರ ವಿ.ವಿ ಕೇಂದ್ರಕ್ಕೆ ಲೀಲೋ ವ್ಯವಸ್ಥೆ  ಒದಗಿಸಲು 1 ಸಂಖ್ಯೆಯ 66 ಕೆವಿ ಟಿ.ಬಿಯನ್ನು 66/11 ಕೆ.ವಿ ಭರಮಸಾಗರ ವಿ.ವಿ ಕೇಂದ್ರದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಇದೇ ಡಿ.09 ರಿಂದ 23 ರವರೆಗೆ (ಪರ್ಯಾಯ ದಿನಗಳಂದು ಡಿ.09, 11, 13, 15, 17, 19, 21 ಮತ್ತು ಡಿ.23ರಂದು) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ  ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೋಳಾಳ್ ಎನ್.ಜೆ.ವೈ, ಹೆಗ್ಗಡೆಹಾಳ್,  ವಿಜಾಪುರ, ಶಿವನಕೆರೆ, ನಂದಿಹಳ್ಳಿ,  ಬಹದ್ದೂರ್ ಘಟ್ಟ , ಅಡವಿ ಗೊಲ್ಲರಹಳ್ಳಿ, ಭರಮಸಾಗರ , ಪಮೇರಹಳ್ಳಿ, ಕೋಗುಂಡೆ, ಎಸ್.ಕೆ.ಎಮ್ ಕೈಗಾರಿಕಾ ಪ್ರದೇಶ, ಕೋಡಿಹಳ್ಳಿ, ಅರಳಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಡಿ.09 ರಿಂದ 18 ರವರೆಗೆ ವಿದ್ಯುತ್ ವ್ಯತ್ಯಯ

ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ ಚಿತ್ರದುರ್ಗ 66  ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಪಂಡರಹಳ್ಳಿ ವಿ.ವಿ ಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುವ ಮಾರ್ಗ-3ರ ವಾಹಕ ಬದಲಾವಣೆ ಮತ್ತು ಗೋಪುರಗಳನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಪಂಡರಹಳ್ಳಿ, ಚಿತ್ರಹಳ್ಳಿ, ಹೆಚ್.ಡಿ.ಪುರ ಮತ್ತು ಹೊಳಲ್ಕೆರೆ 66/11 ಕೆ.ವಿ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಮಾರ್ಗ ಮುಕ್ತತೆ ತೆಗೆದುಕೊಳ್ಳುವುದರಿಂದ ಇದೇ ಡಿ.9 ರಿಂದ 18 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಪಂಡರಹಳ್ಳಿ, ಅನ್ನೆಹಾಳು, ಹುಲ್ಲೂರು, ಜಾನುಕೊಂಡ, ಸಿದ್ದಾಪುರ, ಗೋಡಬನಾಳು, ಸೊಂಡೆಕೊಳ, ಸೊಲ್ಲಾಪುರ, ಕುರುಬರಹಳ್ಳಿ, ಬೆಟ್ಟದ ನಾಗೇನಹಳ್ಳಿ, ಹೆಚ್.ಡಿ.ಪುರ, ಟಿ.ನುಲೇನೂರು, ಬೋದಿಪುರ, ತಾಳ್ಯ, ಮತ್ತಿಘಟ್ಟ, ತೆಕಲವಟ್ಟಿ, ಚಿತ್ರಹಳ್ಳಿ, ಬಿ.ಜಿ.ಹಳ್ಳಿ, ಮದ್ದೇರು, ಕೇಶವಪುರ, ಕೊಂಡಾಪುರ, ಹೊಳಲ್ಕೆರೆ, ಚನ್ನಪಟ್ಟಣ, ಹರೇನಹಳ್ಳಿ, ಪುಣಜೂರು, ಎನ್.ಜಿ.ಹಳ್ಳಿ, ಗುಂಡೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾಟ್‌ ಮಾಡೋಕೆ 15 ಸಾವಿರ, ವಿಡಿಯೋ ಕಾಲ್‌ಗೆ 30, 3 ಲಕ್ಷ ಕೊಟ್ರೆ..! ಈ ಸ್ಟಾರ್‌ ನಟಿ ತುಂಬಾ ದುಬಾರಿಹೊಸ ಅವತಾರದಲ್ಲಿ ಮಿಂಚಿದ ರಮ್ಯಾ: ಸಖತ್ ಗ್ಲಾಮರಸ್ ಫೋಟೋಗಳು ವೈರಲ್ನಾಳೆ ವರಮಹಾಲಕ್ಷ್ಮಿ ಹಬ್ಬ ಯಾವ ಗಳಿಗೆಯಲ್ಲಿ ಪೂಜೆ ನೆರವೇರಿಸಿಬೇಕು.? ಪ್ರಸಾದ ತಯಾರಿ ಹೀಗಿರಲಿ.!ಖಾಸಗಿ ಸುದ್ದಿವಾಹಿನಿ ತಂಡದ ಮೇಲೆ ಹಲ್ಲೆ ಪ್ರಕರಣ; ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಸಮೀರ್‌ ಎಂ.ಡಿ ವಿರುದ್ಧ ಎಫ್‌ಐಆರ್ ದಾಖಲು..!ಸಾಲಗಾರರ ಕಿರುಕುಳಕ್ಕೆ ಬೇಸತ್ತು ಯುವಕ ನೇಣಿಗೆ ಶರಣು.!ಗ್ರಹ ದೋಷಗಳನ್ನು ನಿವಾರಿಸಿ, ಸರ್ವ ಕಾರ್ಯ ಸಿದ್ಧಿಸುವ ಶ್ರೀ ಪ್ರತ್ಯಂಗಿರಾ ದೇವಿ ಯಂತ್ರ ಪೂಜೆ.!ಧರ್ಮಸ್ಥಳ ದೇವಾಲಯಕ್ಕೆ ಬಾಂಬ್ ಇರಿಸಿ ಸ್ಫೋಟಿಸಲು ಶಂಕಿತ ಉಗ್ರನ ಸಂಚು: ಇ.ಡಿ.ತನಿಖೆಯಲ್ಲಿ ಬಯಲುಬಾಳೆಬರೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆ ಪಾಸಾದ ನಿವೇದಿತಾ ಶೆಟ್ಟಿದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ..! 07-08-2025