LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.30 - ಜ.01 : ತೀರ್ಥಹಳ್ಳಿಯ  ಎಳ್ಳಮಾವಾಸ್ಯೆ ಜಾತ್ರೆ

ತೀರ್ಥಹಳ್ಳಿ, ಡಿ.25 : ಪಟ್ಟಣದ  ರಾಮೇಶ್ವರ ದೇವರ ಸನ್ನಿದಿಯ ಎಳ್ಳಮಾವಾಸ್ಯೆ ಜಾತ್ರೆಯನ್ನು ಅಂದಾಜು 17 ಲಕ್ಷ ರೂ.ವೆಚ್ಚದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು  ಜಾತ್ರೆಯ ತೆಪ್ಪೋತ್ಸವ ಸಮಿತಿಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಡಾ|| ಟಿ.ಎಲ್.ಸುಂದರೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮಲೆನಾಡಿನ ಹೆಸರಾಂತ ಏಳ್ಳಮಾವಾಸ್ಯೆ ಜಾತ್ರೆಯನ್ನು ಮೂರು ದಿನಗಳ ಕಾಲ ವಿಶೇಷವಾಗಿ ನೆಡೆಯಲಿದೆ. ಡಿಸೆಂಬರ್ 30 ರ ಸೋಮವಾರದಂದು ಬೆಳಿಗ್ಗೆ  ಪರುಶುರಾಮ ತೀರ್ಥಪೂಜೆಯೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ.ಡಿಸೆಂಬರ್ 31 ರ ಮಂಗಳವಾರ  ಮನ್ಮಹಾರಥಾರೋಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜನವರಿ 1 ರಂದು ರಾತ್ರಿ 7 ಕ್ಕೆ ಸಾರ್ವಜನಿಕರಿಂದ ತೆಪ್ಪೋತ್ಸವ, ನಂತರ ತುಂಗಾ ನದಿಯ ತಟದಲ್ಲಿ ಸಿಡಿಮದ್ದು ಹಾಗೂ ಬಾಣ ಬಿರುಸುಗಳ ಪ್ರದರ್ಶನ  ನಡೆಯಲಿದೆ ಎಂದರು.

ಈ ಜಾತ್ರೆಯ ಅಂಗವಾಗಿ ಮೂರು ದಿನಗಳು ಭಕ್ತಾದಿಗಳಿಗೆ ರಾಮೇಶ್ವರ ಅನ್ನದಾಸೋಹ ಸಮಿತಿಯವರ ನೇತೃತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಬಾರಿ  ಜಾತ್ರೆಯ ಅಂಗವಾಗಿ ವಿಶೇಷ ಸಾಂಸ್ಕೃತಿಕ ಸಂಜೆ ನೆಡೆಯಲಿದ್ದು ಡಿಸೆಂಬರ್ 30 ರಂದು ರಾತ್ರಿ ತುಂಗಾನದಿಯ ತೀರದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದಿಂದ ಸಂಗೀತಾ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಜನವರಿ 1 ರ ರಾತ್ರಿ ತೀರ್ಥಹಳ್ಳಿ ಮೂಲದ ಅಂತರಾಷ್ಟ್ರೀಯ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ ತಂಡದಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ .

ಈ ಪತ್ರಿಕಾಗೋಷ್ಟಿಯಲ್ಲಿ ಜಾತ್ರಾ ಸಮಿತಿಯ ಪದಾಧಿಕಾರಿಗಳಾದ ಪಾಂಡುರಂಗಪ್ಪ,ಅಶೋಕ್ ಶೆಟ್ಟಿ,ಶ್ರೀನಿವಾಸ್,ಸಂಜಯ್,ಟಿ.ಜೆ.ಅನಿಲ್,ರತ್ನಾಕರ್ ಶೆಟ್ಟಿ,ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST