LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಗರಣ ಬಯಲು…!

ಮುಂಬೈ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ಅಕ್ರಮ ಎಸಗಿದ ಆರೋಪ ಮೇಲೆ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ  ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಿಶ್ರಾ ಮತ್ತು ಅವರ ಪುತ್ರ ಅಭಿಷೇಕ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿಸಿದೆ. ಅಷ್ಟೇ ಅಲ್ಲದೆ ಮಿಶ್ರಾ ಅವರ ಪತ್ನಿ ಪಾರ್ವತಿ ಮಿಶ್ರಾ ಮತ್ತು ಮಗಳು ಶ್ವೇತಾ ಮಿಶ್ರಾ ಕೂಡ ಹಗರಣದ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದೆ.


ವರದಿಯ ಪ್ರಕಾರ, ಮುಂಬೈನ ಬಾಂದ್ರಾ ಪೊಲೀಸರು ಫೆಬ್ರವರಿ 5 ರಂದು ಅನಿಲ್ ಮಿಶ್ರಾ ಮತ್ತು ಅವರ ಮಗ ಅಭಿಷೇಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ  ಸೆಕ್ಷನ್ 318 (4) ಮತ್ತು 319 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿಯ ಚಿತ್ರಪತ್ ಅಘಾಡಿ ಘಟಕದ ರಾಜ್ಯ ಅಧ್ಯಕ್ಷ ಸಮೀರ್ ದೀಕ್ಷಿತ್ ಎಂಬುವವರು ಇವರ ವಿರುದ್ಧ ದೂರು ದಾಖಲಿಸಿದ್ದರು.


ಉತ್ತರ ಪ್ರದೇಶದ ಗೋರಖ್‌ಪುರದವರಾದ ಮಿಶ್ರಾ, ಈ ಹಿಂದೆ ಚಲನಚಿತ್ರ ನಿರ್ಮಾಪಕ ಅನಿಲ್ ಶರ್ಮಾ ಅವರ ಸ್ಪಾಟ್ ಬಾಯ್ ಆಗಿದ್ದರು. ನಂತರ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಎಂಬ ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಚಲನಚಿತ್ರ ನಟರಿಗೆ ಪ್ರಶಸ್ತಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತನಿಖೆಯಲ್ಲಿ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ   ಅಧಿಕೃತವಾಗಿ ನೋಂದಾಯಿಸಲ್ಪಟ್ಟಿಲ್ಲ ಎಂದು ತಿಳಿದು ಬಂದಿದೆ.


ಮಿಶ್ರಾ ಫೆಬ್ರವರಿ 20 ರಂದು ಬಾಂದ್ರಾದ ಐದು ಪಂಚತಾರಾ ಹೋಟೆಲ್ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಆಯೋಜನೆಗಾಗಿ ಇಂಟರ್‌ನ್ಯಾಷನಲ್ ಟೂರಿಸಂ ಫೆಸ್ಟಿವಲ್ ಪ್ರೈವೇಟ್ ಲಿಮಿಟೆಡ್ ಎಂಬ ಮುಚ್ಚಲಾದ ಕಂಪನಿಯಿಂದ ಹೆಸರಿನಲ್ಲಿ ಅನುಮತಿ ಪಡೆಯಲಾಗಿತ್ತು. ಇದೀಗ ಆ ಕಾರ್ಯಕ್ರಮವೂ ರದ್ಧಾಗುವ ಸಾಧ್ಯತೆ ಇದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕಲ ಸಮಸ್ಯೆಗಳ ಪರಿಹಾರಕ್ಕೆ ಇಷ್ಟಾರ್ಥ ಕಾರ್ಯಸಿದ್ಧಿಗೆ ದುರ್ಗಾ ಯಂತ್ರದ ಮಹತ್ವ ತಿಳಿದು ಪರಿಹರಿಸಿಕೊಳ್ಳಿ!ಪಿಜಿಯಲ್ಲಿ ನೇಣು ಬಿಗಿದುಕೊಂಡು ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ.!ರೈತರಿಗೆ ಖುಷಿ ಸುದ್ದಿ.! ಕೆರೆ ಮಣ್ಣುನ್ನು ಹೊಲಗಳಿಗೆ ಬಳಸಿಕೊಳ್ಳಬಹುದು.!19=10-2025 ದಿನದ ಮಂಡಕ್ಕಿ ಒಗ್ಗರಣೆ- ಮಿರ್ಚಿ.!.!ವಚನ.: --ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯಓಯೋ ರೂಮ್ ಬುಕ್ ಮಾಡೋ ಮುನ್ನ ಈ ವಿಷಯಗಳು ತಿಳಿದಿರಲಿ!9 ಲಕ್ಷ ಕೋಟಿ ದಾಟಿದ ಆರ್‌ಬಿಐ ಚಿನ್ನದ ಮೀಸಲು ಸಂಗ್ರಹಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಏಕಾಏಕಿ ಬೆಂಕಿ; ಹೊತ್ತಿ ಉರಿದ ಎಸಿ ಕೋಚ್‌ಗಳುBamboo plastic ಚೀನಾ ಸಂಶೋಧಕರಿಂದ ಹೊಸ ಮಾದರಿ ಪ್ಲಾಸ್ಟಿಕ್ ಆವಿಷ್ಕಾರ, ಇದು 50 ದಿನದಲ್ಲಿ ಮಣ್ಣಲ್ಲಿ ಕರಗತ್ತೆ!ಕಾಲೇಜು ಶೌಚಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಅರೆಸ್ಟ್