LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾವಣಗೆರೆ: ಡಾ.ಪುನೀತ್ ಗೌಡಗೆ “ಸರ್ಕಾರದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ.!

 

ದಾವಣಗೆರೆ: ಕರ್ನಾಟಕ ಸರ್ಕಾರ ನೀಡುವ 2023-24 ನೇ ಸಾಲಿನ ಅತ್ಯುತ್ತಮ ಸಂಶೋಧನಾ ಪ್ರಕಟಣೆಯ ಪ್ರಶಸ್ತಿಗೆ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಜೆ.ಪುನೀತ್ ಗೌಡ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯು ರೂ.೨೫ ಸಾವಿರ ನಗದು ಬಹುಮಾನ, ಉಲ್ಲೇಖ ಪತ್ರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಅತ್ಯುತ್ತಮ ಸಂಶೋಧನಾ ಪ್ರಕಟಣೆಯ ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳ ಅಧ್ಯಾಪಕರು ಹಾಗೂ ಸಂಶೋಧಕರಿಗೆ ಕರ್ನಾಟಕ ಸರ್ಕಾರವು ವಾರ್ಷಿಕವಾಗಿ ನೀಡಲಾಗುತ್ತಿದ್ದು, ಅತ್ಯುತ್ತಮ ಸಂಶೋಧನಾ ಪ್ರಕಟಣೆಗಳನ್ನು ಗುರುತಿಸಲು ಕರ್ನಾಟಕ ಸರ್ಕಾರದ ಭಾಗವಾದ ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿಯು ಒಂದು ಉಪಕ್ರಮವಾಗಿದೆ.

2020-21 ನೇ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಬಿ.ಸಿ.ಪ್ರಸನ್ನ ಕುಮಾರ ಹಾಗೂ 2022-23 ನೇ ಸಾಲಿನಲ್ಲಿ ಇವರ ವಿದ್ಯಾರ್ಥಿಯಾದ ಡಾ.ಆರ್ ನವೀನ್‌ ಕುಮಾರ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಬಾರಿಯ ಕಂಪ್ಯೂಟೆಶನ್ ಮತ್ತು ಗಣಿತ ವಿಭಾಗದಲ್ಲಿ ಡಾ.ಪುನೀತ್ ಗೌಡ ಇವರಿಗೆ ಪ್ರಶಸ್ತಿ ದೊರಕಿದ್ದು, ಇವರು ಕೂಡ ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಡಾ.ಬಿ.ಸಿ.ಪ್ರಸನ್ನಕುಮಾರ ರವರ ವಿದ್ಯಾರ್ಥಿಯಾಗಿದ್ದಾರೆ.

ಡಾ.ಪುನೀತ್ ಗೌಡ ಅವರ ಪ್ರಸುತ್ತ ದಾವಣಗೆರೆಯಲ್ಲಿನ ಬಿಐಇಟಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಅರವಿಂದ, ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕಾಲೇಜಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀವು ಮೆಟ್ರೋ ದಲ್ಲಿ ಓಡಾಡುವವರೆ, ? ಮುಂದಿನ ತಿಂಗಳಿಂದ ಮೆಟ್ರೋ ದರ ರೇಟ್.!ಸಣ್ಣಪುಟ್ಟ ಮನಸ್ತಾಪಗಳಿಂದ ಮೂರನೇ ವ್ಯಕ್ತಿ ಹಸ್ತಕ್ಷೇಪದಿಂದ ಭಿನ್ನಾಭಿಪ್ರಾಯದಿಂದ ನಿಮ್ಮಿಂದ ದೂರಾದಂತ ವ್ಯಕ್ತಿಗಳನ್ನು ಈ ರೀತಿಯಾಗಿ ನಿಮ್ಮ ಹತ್ತಿರ ಸೆಳೆಯಬಹುದು!ರೈಲ್ವೆ ಇಲಾಖೆಯಲ್ಲಿ 22,000 ಖಾಲಿ ಹುದ್ದೆಗಳ ಭರ್ಜರಿ ನೇಮಕಾತಿ2 ನೇ ರ‍್ಯಾಂಕ್ ಪಡೆದ ಅನಿಮೇಶ್ ಪ್ರಧಾನ್ ಸ್ಪೂರ್ತಿದಾಯಕ ಕಥೆಈ ಕಾರಣಕ್ಕೆ ಹಿರಿಯ ಐಎಎಸ್ ಪಂಕಜ್ ಕುಮಾರ್ ಪಾಂಡೆಯವರಿಗೆ ನೋಟಿಸ್.!ದೆಹಲಿ ಗಣರಾಜ್ಯೋತ್ಸವದಲ್ಲಿ ರಾಜ್ಯದ  ಸ್ತಬ್ಧಚಿತ್ರ : ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ .!ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 23-01-2026 .!ಇಂದಿನ ವಚನ: -ಹಾವಿನಹಾಳ ಕಲ್ಲಯ್ಯ ಅವರ ವಚನ..!ಬೆಟ್ಟದನಾಗೇನಹಳ್ಳಿಯಲ್ಲಿ ಸರ್ಕಾರಿ ಮಾಂಟೇಸ್ಸರಿ ಪ್ರಾರಂಭೋತ್ಸವ