LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪರೀಕ್ಷಾ ಪೆ ಚರ್ಚಾ: ಮೋದಿ ಜೊತೆ ದೀಪಿಕಾ ಪಡುಕೋಣೆ, ಸದ್ಗುರು ಭಾಗಿ

ನವದೆಹಲಿ :ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸುವ ವಾರ್ಷಿಕ ಸಂವಾದ ‘ಪರೀಕ್ಷಾ ಪೆ ಚರ್ಚಾ’ಗೆ ಈ ಬಾರಿ ಹೊಸ ಆಯಾಮ ದೊರೆತಿದೆ.

ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದು, ವಿವಿಧ ಕ್ಷೇತ್ರಗಳ ಏಳು ಸೆಲೆಬ್ರಿಟಿಗಳು ಪರೀಕ್ಷೆಯ ಸಮಯದಲ್ಲಾಗುವ ಒತ್ತಡವನ್ನು ನಿವಾರಿಸುವ ಕುರಿತು ಸಲಹೆ ನೀಡಲಿದ್ದಾರೆ.ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ಫೆಬ್ರವರಿ 10ರಂದು ನವದೆಹಲಿಯಲ್ಲಿರುವ ಭಾರತ್ ಮಂಟಪದಲ್ಲಿ ನಡೆಯುತ್ತಿದೆ. ಈ ಮೊದಲು ಕೇವಲ ಪ್ರಧಾನಿಯೊಂದಿಗೆ ಮಾತ್ರ ಸಂವಾದ ನಡೆಯುತ್ತಿತ್ತು ಆದರೆ ಈಗ ಸೆಲೆಬ್ರಿಟಿಗಳು ಕೂಡ ಇದರ ಭಾಗವಾಗಿರಲಿದ್ದಾರೆ.

ಸದ್ಗುರು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಮೇರಿ ಕೋಮ್ ಮತ್ತು ಅವನಿ ಲೇಖರಾ ಸಲಹೆಗಳನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸುವ ವಿಶೇಷ ಸಂವಾದ, ಇದರಲ್ಲಿ ಅವರು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ.

ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ 35 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರುತ್ತಾರೆ. 50-60 ವಿದ್ಯಾರ್ಥಿಗಳು ಮತ್ತು ಇತರೆ ಪ್ರಮುಖರು ಪಾಲ್ಗೊಳ್ಳಿಲಿದ್ದಾರೆ. ಈ ಬಾರಿ ಸುಮಾರು ಆರುನೂರು ವಿದ್ಯಾರ್ಥಿಗಳು ಈ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಿಜಿಯಲ್ಲಿ ನೇಣು ಬಿಗಿದುಕೊಂಡು ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ.!ರೈತರಿಗೆ ಖುಷಿ ಸುದ್ದಿ.! ಕೆರೆ ಮಣ್ಣುನ್ನು ಹೊಲಗಳಿಗೆ ಬಳಸಿಕೊಳ್ಳಬಹುದು.!19=10-2025 ದಿನದ ಮಂಡಕ್ಕಿ ಒಗ್ಗರಣೆ- ಮಿರ್ಚಿ.!.!ವಚನ.: --ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯಓಯೋ ರೂಮ್ ಬುಕ್ ಮಾಡೋ ಮುನ್ನ ಈ ವಿಷಯಗಳು ತಿಳಿದಿರಲಿ!9 ಲಕ್ಷ ಕೋಟಿ ದಾಟಿದ ಆರ್‌ಬಿಐ ಚಿನ್ನದ ಮೀಸಲು ಸಂಗ್ರಹಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಏಕಾಏಕಿ ಬೆಂಕಿ; ಹೊತ್ತಿ ಉರಿದ ಎಸಿ ಕೋಚ್‌ಗಳುBamboo plastic ಚೀನಾ ಸಂಶೋಧಕರಿಂದ ಹೊಸ ಮಾದರಿ ಪ್ಲಾಸ್ಟಿಕ್ ಆವಿಷ್ಕಾರ, ಇದು 50 ದಿನದಲ್ಲಿ ಮಣ್ಣಲ್ಲಿ ಕರಗತ್ತೆ!ಕಾಲೇಜು ಶೌಚಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಅರೆಸ್ಟ್ತೇಜಸ್ ಎಂಕೆ1ಎ ಯುದ್ಧ ವಿಮಾನ- ಮೊದಲ ಹಾರಾಟ ಯಶಸ್ಸು