E-PAPER
16 Nov 2026, 02:20:27 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಮಾನ ಮನಸ್ಕರು, ಪರಿಸರ ಹೋರಾಟಗಾರರಿಂದ ಜನಾಂದೋಲನ ಸಭೆಗೆ ರಕ್ಷಣಾ ವೇದಿಕೆ ವಿರೋಧ.

ಖಾನಾಪುರ

ಇದು ಗೋವಾ ಸರಕಾರ ಹಾಗೂ ರೆಸಾರ್ಟ್ ಮಾಲೀಕರ ಪೂರ್ವನಿಯೋಜಿತ ಸಭೆ ದಶರಥ ಬನೋಶಿ ಕಿಡಿ..!

ಖಾನಾಪುರ:ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ನೀರೊದಗಿಸುವ ಮಹದಾಯಿ ತಿರುವು ಯೋಜನೆ ಕಾಮಗಾರಿಗೆ ಖಾನಾಪುರದ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತಪಡಿಸಿ ಪಟ್ಟಣದಲ್ಲಿ ಬುಧವಾರ 'ಪಶ್ಚಿಮ ಘಟ್ಟ ಅರಣ್ಯ ಉಳಿಸಿ, ವನ್ಯಜೀವಿ ಉಳಿಸಿ, ಜಲಮೂಲ ಉಳಿಸಿ' ಎಂಬ ಜನಾಂದೋ ಜನ ಸಭೆ ನಡೆಸಿದ ಸಮಾನ ಮನಸ್ಥರು, "ಈ ಯೋಜನೆಯಿಂದ ತಾಲೂಕಿನ ಅರಣ್ಯ ಪ್ರದೇಶಕ್ಕೆ ಧಕ್ಕೆ ಉಂಟಾಗುವ ಪ್ರಮೇಯ ಮದ್ದು ಸ್ಥಳೀಯರು ಎಚ್ಚೆತ್ತುಕೊಂಡು ಅಲ್ಲಿಯ ಅಪರೂಪದ ವನ್ಯಸಂಪತ್ತು ಉಳಿಸಲು ಪಣ ತೊಡಬೇಕು", ಎಂದು ಪರಿಸರವಾದಿ ದಿಲೀಪ್ ಕಾಮತ್ ಹೇಳಿದರು.

ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರ ದಿಲೀಪ್ ಕಾಮತ್, ''ಕರ್ನಾಟಕ ಸರಕಾರ ನೀರಾವರಿ ನಿಗಮದ ಮೂಲಕ ತಾಲೂಕಿನ ಅರಣ್ಯದಲ್ಲಿರುವ ಖಾನಾಪುರದಲ್ಲಿ ಪರಿಸರ ಹೋರಾಟಗಾರರು ಮಹದಾಯಿ ತಿರುವು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಲು ಆಗ್ರಹಿಸಿ ತಹಸೀಲ್ದಾ‌ರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಿದರು. ಮಾಡುವ ಕೆಲಸಕ್ಕೆ ಸರಕಾರ ಕೈಹಾಕಿದ್ದು,ಹಲ್ದಾರಾ, ಕಳಸಾ ಮತ್ತು ಭಂಡೂರಿ ನಾಲೆಗಳ ಮೇಲೆ ಅಣೆಕಟ್ಟು ನಿರ್ಮಿಸಿ ಮಹದಾಯಿ ನದಿ ತಿರುಗಿಸುವ ಯೋಜನೆ ಜಾರಿಗೆ ಮುಂದಾಗಿದೆ. ಪೈಪ್‌ಲೈನ್ ಅಳವಡಿಸಿ ಭಂಡೂರಿ ಹಳ್ಳದ ನೀರನ್ನು ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಸಾಗಿಸುವ ಪ್ರಯತ್ನ ಆರಂಭವಾಗಿದೆ. ಇದಕ್ಕಾಗಿ ಈಗಾಗಲೇ ಹಲವು ಹಳ್ಳಿಗಳ ರೈತರಿಗೆ ಭೂಸ್ವಾಧೀನದ ನೋಟಿಸ್ ನೀಡಲಾಗಿದೆ. ಪರಿಸರ ಸೂಕ್ಷ್ಮವಲಯದಲ್ಲಿ ಕಾಮಗಾರಿ ನಡೆಸಿ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ ಅದಕ್ಕೆ ಈಗಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
*ಜನಾಂದೋಲನ ಸಭೆಗೆ ಖಾನಾಪುರ ಸಾರ್ವಜನಿಕರು ಮತ್ತು ರಕ್ಷಣಾ ವೇದಿಕೆ ತೀವ್ರ ವಿರೋಧ*
ಇನ್ನೂ ಕಾರ್ಯಕ್ರಮದಲ್ಲೇ ಜನಾಂದೋಲನೆ ಸಭೆಗೆ ವಿರೋಧ ವ್ಯಕ್ತಪಡಿಸಿದ ಖಾನಾಪುರ ಜನತೆ ಹಾಗೂ ರಕ್ಷಣಾ ವೇದಿಕೆ ಸದಸ್ಯರು ನಮಗೆ ಈ ಸಭೆ ಖಾನಾಪುರ ಅಭಿವೃದ್ಧಿ ಸಲುವಾಗಿ ನಡೆಸುತ್ತಿದ್ದು ಎಲ್ಲರೂ ಭಾಗವಹಿಸಿ ಎಂದು ಸುಳ್ಳು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಕರೆಸಲಾಗಿದ್ದು ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಮಾಡದೇ ತರಾತುರಿಯಲ್ಲಿ ಜನರ ದಿಕ್ಕು ತಪ್ಪಿಸಿ ಮಹಾದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವದನ್ನ ನೋಡಿದರೆ ಈ ಸಭೆ ಗೋವಾ ಸರಕಾರ ಹಾಗೂ ಕಣಕುಂಬಿ ಭಾಗದಲ್ಲಿರುವ ರೆಸಾರ್ಟ್ ಮಾಲೀಕರ ಪೂರ್ವನಿಯೋಜಿತ ಹುನ್ನಾರ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಶರಥ ಬನೋಶಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು ಮಹಾದಾಯಿ,ಕಳಸಾ-ಬಂಡೂರಿ ಹೋರಾಟ ಇವತ್ತು ನಿನ್ನೆಯದಲ್ಲಿ ದಶಕಗಳಿಂದ ನಡೆದು ಬರುತ್ತಿದೆ ಈ ಹೋರಾಟ ನವಲಗುಂದ-ನರಗುಂದ ಸೇರಿದಂತೆ ಇನ್ನೂ ಹಲವಾರು ಭಾಗದ ಜನರು ಹಾಗೂ ರೈತರ ಜೀವಜಲಕ್ಕಾಗಿ ನಡೆಸುತ್ತಿರುವ ಹೋರಾಟ ಅದಕ್ಕೆ ವಿರೋಧ ವ್ಯಕ್ತಪಡಿಸುವ ಬದಲು ಮಲಪ್ರಭೆಯ ಶುದ್ದೀಕರಣಕ್ಕಾಗಿ ಮತ್ತು ಕಾಡು ರಕ್ಷಣೆಗಾಗಿ ಹೋರಾಟ ಮಾಡುವದು ಸೂಕ್ತ ಆದ್ದರಿಂದ ಈ ಜನಾಂದೋಲನ ಸಭೆಗೆ ನಮ್ಮ ತೀವ್ರ ವಿರೋಧವಿದ್ದು ಸರಕಾರ ಕಳಸಾ-ಬಂಡೂರಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸದೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಖಾನಾಪುರ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ