ಬೆಂಗಳೂರು: ಗ್ರಾಮೀಣ ಹಂತದ ವಿಲೇಜ್ ಆಫೀಸರ್ ಹುದ್ದೆಗಳು ರದ್ದಾಗಿರುವುದು,ಹುದ್ದೆ ಖಾಯಂಗೊಳಿಸಿ,ಸಂಬಳ ಹೆಚ್ಚಿಸುವುದು ಸೇರಿದಂತೆ ಗ್ರಾಮ ಸಹಾಯಕರ ಡಿ ಗ್ರೂಪ್ ನವರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.27 ರಂದು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಹೆಚ್ ಎನ್ ದೇವರಾಜಯ ಅವರು ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ರ ಪ್ರಕಾರ ವಂಶಪಾರಂಪರ್ಯ ಗ್ರಾಮೀಣ ಹಂತದ ಎಲ್ಲಾ ವಿಲೇಜ್ ಆಫೀಸರ್ ಹುದ್ದೆಗಳನ್ನು ಹಂತಹಂತವಾಗಿ ಆಡಳಿತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಾವಿರಾರು ಗ್ರಾಮ ಸಹಾಯಕರನ್ನು ನೇಮಕ ಮಾಡಿಕೊಂಡು ವೇತನ ಹೆಚ್ಚಳವನ್ನು 2007ರಲ್ಲಿ ಸುಮಾರು 15 ಸಾವಿರ ವೇತನ ಹೆಚ್ಚಿಸಿತ್ತು. ಆದರೆ ಯಾವುದೇ ಸೇವಾ ಭದ್ರತೆ ಹೆಚ್ಚಿಸಿರಲಿಲ್ಲ. ಆದರೆ ದಿನ ನಿತ್ಯದ ಬೆಲೆಗಳ ಏರಿಕೆಯಿಂದ ಕುಟುಂಬ ನಿರ್ವಹಣೆ ಮಾಡಲು ಸಮಸ್ಯೆಯಾಗುತ್ತಿದೆ.
ಸೇವಾ ಭದ್ರತೆ ನೀಡುವಂತೆ ಕಳೆದ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಅಧಿವೇಶನದಲ್ಲಿ ಪ್ರತಿಭಟನೆಯನ್ನು ಸಂಘಟನೆಯಿಂದ ನಡೆಸಲಾಯುತು ಆಗ ಅಂದಿನ ಕಂದಾಯ ಸಚುವರು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿರುತ್ತಾರೆ ಆದರೆ 2 ವರ್ಷವಾದರೂ ಈಡೇರದಿರುವುದು ದುರಂತದ ಸಂಗತಿಯಾಗಿದೆ.
ಇನ್ನು ಪತ್ರಿಕಾ ಘೋಷ್ಠಿಯಲ್ಲಿ ಪಾವಗಡ ಶ್ರೀರಾಮ್ ಮಾತನಾಡಿ, ಗ್ರಾಮ ಲೆಕ್ಕಗಳಿಗೆ ಸಮಾನ ವೇತನ ನೀಡಬೇಕೆಂದು ಅಡ್ವಕೇಟ್ ಜನರಲ್ ಆದವರು ಸಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಅದಕ್ಕೂ ಸಹ ಸರ್ಕಾರ ಕಿವಿಗೊಡದೆ ಇರುವುದು ದುರಂತ ಪ್ರಸಂಗತಿಯಾಗಿದೆ ಇದರ ಜೊತೆಗೆ ಸೇವಾ ಭದ್ರತೆಯನ್ನು ಒದಗಿಸಬೇಕಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಆಶ್ವಾಸನೆಯನ್ನು ನೀಡಿತು ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಾ ಬಂದರೂ ಸಹ ಯಾವುದೇ ಗ್ರಾಮ ಲೆಕ್ಕಗರ ಬೇಡಿಕೆಗಳನ್ನು ಈಡೇರಿಸದಿರುವುದು ಗ್ರಾಮ ಲೆಕ್ಕಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಗ್ರಾಮ ಲಕ್ಕಿಗರ ಅವಶ್ಯಕತೆ ಬಹಳಷ್ಟು ಇದ್ದು ಪ್ರತಿಯೊಂದು ಕೆಲಸ ಕಾರ್ಯಗಳು ಅದರಲ್ಲೂ ಕಂದಾಯ ಇಲಾಖೆ ಸಂಬಂಧಪಟ್ಟಂತೆ ಎಲ್ಲಾ ಕಾರ್ಯಗಳು ಗ್ರಾಮ ಲಕ್ಕಿಗಳಿಂದಲೇ ನಡೆಯಬೇಕಾಗಿದೆ ಇವೆಲ್ಲವೂ ಗೊತ್ತಿದ್ದರೂ ಸಹ ಸರ್ಕಾರ ಜಾಣ ಕಿವುಡುತನ ಪ್ರದರ್ಶನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇನ್ನೂ ಅದೇ ರೀತಿ ಪೌರಕಾರ್ಮಿಕರಿಗೆ ಲಾರಿ ಡ್ರೈವರ್ ಗಳಿಗೆ ಕ್ಲೀನರ್ ಗಳಿಗೆ ಹಾಗೂ ಇತರರಿಗೂ ಸಹ ಮೇ 1-2015 ರಿಂದ ಅನ್ವಯವಾಗುವಂತೆ ಕಾಯನ್ನು ಗೊಳಿಸಲಾಗಿರುತ್ತದೆ ರಾಜ್ಯದ ಎಲ್ಲಾ ದುಡಿಯುವ ಕಾರ್ಮಿಕರಿಗೆ ದುಡಿಮಿಗೆ ತಕ್ಕಂತೆ ಕನಿಷ್ಠ ವೇತನವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲು ನಂಕಾಇ ಫೋರ್ ಡಬಲ್ ಒನ್ ಎಲ್ ಡಬ್ಲ್ಯೂ ಏ 2023 ಈ ಮೂಲಕ ಏಪ್ರಿಲ್ 11 2018 ಎಲ್ಲಾ ಶ್ರಮಿಕ ವರ್ಗದವರ ಪರವಾಗಿ ಆದೇಶ ಹೊರಡಿಸಲಾಗಿರುತ್ತದೆ ಆದರೆ ಸರ್ಕಾರ ಮಾತೃ ಇಲಾಖೆ ಕಂದಾಯ ಇಲಾಖೆಯಲ್ಲಿ ಸರಿಸುಮಾರು 45 ವರ್ಷಗಳಿಂದಲೂ ಗೀತಾ ತಾಳುಗಳಂತೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಯಾವುದೇ ಸೇವಾ ಭದ್ರತೆ ಇರುವುದಿಲ್ಲ ಪ್ರಸ್ತುತ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಡತ ಮಂಡನೆಯಾಗಿ ಗ್ರಾಮ ಸಹಾಯಕರ ಸೇವೆಯನ್ನು ಗ್ರೂಪ್ ಡಿ ಹುದ್ದೆಯಲ್ಲಿ ಸಕ್ರಮಗೊಳಿಸಲು ಗ್ರಾಮ ಸಹಾಯಕರಿಗೆ 10450 ಗೌರವಧನ 15,000 ದಿಂದ 27 ಸಾವಿರವರೆಗೆ ಹೆಚ್ಚಿಸಲು ಸಚಿವ ಸಂಪುಟದಲ್ಲಿ ನಿರ್ಣಯಿಸಿರುತ್ತದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಿಕೆ ಹೇಳಿಕೆ ನೀಡಿದ್ದಾರೆ ಆದರೆ ಇಲ್ಲಿಯವರೆಗೂ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಗ್ರಾಮ ಸಹಾಯಕರ ಪ್ರಮುಖ ಬೇಡಿಕೆಗಳು:
ಗ್ರಾಮ ಸಹಾಯಕರನ್ನು ಪೂರ್ಣ ಅವಧಿಗೆ ನೇಮಕ ಮಾಡಿಕೊಳ್ಳಬೇಕು.
ಗ್ರಾಮ ಸಹಾಯಕರಿಗೆ ಕನಿಷ್ಠ ವೇತನ 27 ಸಾವಿರ ನೀಡಬೇಕು.
ಖಾಲಿ ಇರುವ ಗ್ರಾಮ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು.
ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು.
ಕೇಳ ಹಂತದ ಹುದ್ದೆಯಿಂದ ಮೇಲು ಹಂತದ ಹುದ್ದೆಗೆ ಬಡ್ತಿ ಕೊಡಬೇಕು.
ಡಿ ಗ್ರೂಪ್ ನೌಕರರ ಬೇಡಿಕೆಯನ್ನು ಮಾರ್ಚ್ 27ನೇ ತಾರೀಖಿನ ಒಳಗೆ ಈಡೇರಿಸಬೇಕು, ಇಲ್ಲದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಎಲ್ಲಾ ರಚಿತಾ ಎಲ್ಲಾ ಗ್ರಾಮ ಸಹಾಯಕರು ನೌಕರರು ಆಮರಣ ಅಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದರು.
ಇನ್ನೂ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಗ್ರಾಮ ಸಹಾಯಕರು ಹಾಗೂ ಸಂಘದ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.