Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

SDRF ಪರಿಹಾರ ಮೊದಲು ಕೊಡಲು ಆಗ್ರಹ: ಸರಕಾರದಿಂದ ರೈತರಿಗೆ ದೋಖಾ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇವಲ 2500 ರೂ. ಪರಿಹಾರಧನ ಘೋಷಿಸಿದ ಸರಕಾರವು ಒಂದು ರೂಪಾಯಿಯನ್ನೂ ಅವರ ಖಾತೆಗೆ ಹಾಕದೇ ಇರುವುದು ರಾಜಕೀಯವೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಒಂದು ಹೆಕ್ಟೇರ್‍ಗೆ 25 ಸಾವಿರ ಕೊಡಬೇಕೆಂದು ಬೇಡಿಕೆ ಇಟ್ಟರೆ ಅದು ರಾಜಕೀಯವೇ ಎಂದು ಕೇಳಿದರು. ಇದನ್ನು ಘೋಷಿಸಿ; ನಾವು ಬರುತ್ತೇವೆ, ಕೇಂದ್ರದ ಬಳಿ ಹೋಗೋಣ. ಎಸ್‍ಡಿಆರ್‍ಎಫ್ ಪರಿಹಾರ ಮೊದಲು ಕೊಡಲಿ; ಬಳಿಕ ಎನ್‍ಡಿಆರ್‍ಎಫ್ ಹಣ ಕೇಳೋಣ ಎಂದಿರುವುದಾಗಿ ಗಮನ ಸೆಳೆದರು. ಕಾಂಗ್ರೆಸ್ ಸರಕಾರಕ್ಕೆ ರೈತಪರ ಕಾಳಜಿ ಇಲ್ಲ; ಅವರಿಗೆ ದೋಖಾ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಭಿಕ್ಷಾಪಾತ್ರೆ ಹಿಡಿದು ನಿಂತಿದ್ದಾರೆ...

ನಿಯೋಗ ಹೋಗುವುದಿಲ್ಲ ಎಂದು ನಾವು ಹೇಳಿಲ್ಲ; ಒಂದು ರೂಪಾಯಿಯೂ ಕೊಟ್ಟಿಲ್ಲ; ಸರಕಾರ ದಿವಾಳಿ ಆಗಿದೆಯೇ ಎಂದು ಕೇಳಿದರು. ಶ್ರೀಮಂತಿಕೆ ಮೆರೆಯುವ ರೀತಿಯ ಮಾತನಾಡುತ್ತಾರೆ. ಇಲ್ಲಿ ಭಿಕ್ಷೆ ಪಾತ್ರೆ ಹಿಡಿದು ನಿಂತಿರುವುದು; ಇವರ ಬಂಡವಾಳ ನಮಗೆ ಗೊತ್ತಾಗಿದೆ ಎಂದು ತಿಳಿಸಿದರು. ಭಿಕ್ಷೆಯಾದರೂ ಎತ್ತಿ; ಆದರೆ ರೈತರ ಸಮಸ್ಯೆಗೆ ಸ್ಪಂದಿಸಿ ಎಂದು ಆಗ್ರಹಿಸಿದರು. ಕೇವಲ ಕೇಂದ್ರಕ್ಕೆ ಲವ್ ಲೆಟರ್ ಬರೆಯವುದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ವಿಚಾರದಲ್ಲಿ ಪ್ರಲ್ಹಾದ್ ಜೋಶಿಯವರು ಕೂಡಲೇ ಸ್ಪಂದಿಸಿ ಸಭೆ, ಮಾತುಕತೆ ನಡೆಸಿದ್ದಾರೆ. ಹೋರಾಟವೂ ಸ್ಥಗಿತವಾಗಿದೆ. ನಿಮ್ಮದು ಕೇವಲ ಹೇಳಿಕೆ ಮತ್ತು ಪತ್ರ ಮಾತ್ರ ಎಂದು ದೂರಿದರು.

ನಾಟಕ ಮಾಡುವ ಸರಕಾರ ಆಗಬಾರದು..

ರೈತರ ಆತ್ಮಹತ್ಯೆ ತಡೆಯಲು 10 ಸಾವಿರ ರೂ ಕೊಡಿ. ಅವರಿಗೆ ಒಂದು ರೂಪಾಯಿ ಕೊಡುತ್ತಿಲ್ಲ. ಈ ಸರಕಾರ ನಾಟಕ ಮಾಡುವ ಸರಕಾರ ಆಗಬಾರದು. ಸಮಸ್ಯೆ ಪರಿಹರಿಸುವ ಸರಕಾರ ಆಗಬೇಕು ಎಂದು ಒತ್ತಾಯಿಸಿದರು.

ಸಮಸ್ಯೆ ಪರಿಹರಿಸಲು ಒತ್ತಾಯ..

ಸರಕಾರದ ಬೆಳವಣಿಗೆ ನೋಡಿದರೆ ಮೂರನೆಯವರು ಬರುತ್ತಾರೋ ನಾಲ್ಕನೆಯವರು ಬರುವರೋ ಹೇಳಲು ಸಾಧ್ಯವಿಲ್ಲ. ಇಂಥ ಪರಿಸ್ಥಿತಿ ಇದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಸ್ಟಿಂಗ್ ಆಪರೇóಷನ್ ಅದೇನದು? ಯಾವುದೇ ಖಾಸಗಿ ಜೀವನದಲ್ಲಿ ಯಾರೂ ನುಸುಳಬಾರದು. ರಾಜಕಾರಣ ಮಾಡಿ ಸಾಮಾಜಿಕ ನ್ಯಾಯ ಕೊಡಿಸಿ; ದೇಶದ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಕ್ಯಾಮೆರಾ ಜೊತೆ ಬೆಡ್ ರೂಮಿಗೆ ನುಗ್ಗುವುದು ಸರಕಾರದ ಕೆಲಸ ಅಲ್ಲ ಎಂದು ಟೀಕಿಸಿದರು. ಕೆಸರೆರಚಾಟ ಬಿಡಿ; ಇದನ್ನು ಸಿಬಿಐಗೆ ಕೊಡಿ ಎಂದು ಆಗ್ರಹವನ್ನು ಮುಂದಿಟ್ಟರು.

ಅವರು ನಿಷ್ಪಕ್ಷಪಾತವಾಗಿ ಇದ್ದಾರಾ

ಸ್ಟಿಂಗ್ ವಿಚಾರದಲ್ಲಿ ಗೃಹ ಸಚಿವರು ಕೇವಲ ಮಾತನಾಡಿದರೆ ಸಾಲದು. ಯಾರನ್ನು ರಕ್ಷಿಸಲು ಹೋಗಿದ್ದಾರೆ ಅವರು ಎಂದು ಪ್ರಶ್ನಿಸಿದರು. ಗೃಹ ಸಚಿವ ಸ್ಥಾನ ಇಟ್ಟುಕೊಂಡವರು ಬಹಳ ಶ್ರದ್ಧೆಯಿಂದ, ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಅವರು ನಿಷ್ಪಕ್ಷಪಾತವಾಗಿ ಇದ್ದಾರಾ ಎಂದು ಕೇಳಿದರು. ಟಿವಿ, ಸಾಮಾಜಿಕ ಜಾಲತಾಣದಲ್ಲಿ ಬಂದ ವಿಡಿಯೋಗಳ ಹಿಂದೆ ಹೋಗಿದ್ದೀರಾ ಎಂದು ಪ್ರಶ್ನೆ ಹಾಕಿದರು. 

ಕಾಂಗ್ರೆಸ್ ಪಕ್ಷವೇ ಸ್ಟಿಂಗ್ ಆಪರೇಷನ್‍ನ ಕಾರ್ಖಾನೆ

ಕಾಂಗ್ರೆಸ್ ಪಕ್ಷವೇ ಸ್ಟಿಂಗ್ ಆಪರೇಷನ್‍ನ ಕಾರ್ಖಾನೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಆರೋಪಿಸಿದರು. ಕಾಂಗ್ರೆಸ್ ಕಚೇರಿಯಲ್ಲಿದ್ದ ಕಾರ್ಖಾನೆ ಈಗ ಸರಕಾರಕ್ಕೆ ಸ್ಥಳಾಂತರ ಹೊಂದಿದೆ ಎಂದು ಅವರು ದೂರಿದರು. ನನ್ನ ಬಿಟ್ಟು ನಿನ್ನ ಬಿಟ್ಟು ಕಳ್ಳ ಯಾರು ಎಂಬಂತಾಗಿದೆ ಇವರ ಪರಿಸ್ಥಿತಿ ಎಂದು ತಿಳಿಸಿದರು. ಪ್ರತಿಯೊಬ್ಬರೂ ಕಳ್ಳರಾದಾಗ ಯಾರೂ ಬಾಯಿ ಬಿಚ್ಚುವುದಿಲ್ಲ ಎಂದು ನುಡಿದರು.

ಪ್ರಿಯಾಂಕ್ ಖರ್ಗೆ ಅವರು ಅವಿವೇಕತನದ ಮಾತನಾಡುತ್ತಾರೆ. ಅವರು ಗೃಹ ಸಚಿವರಾಗಿ ಇರಲು ನಾಲಾಯಕ್ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಜ್ಞಾನ ಇಲ್ಲದೇ ಇದ್ದಾಗ ತಪ್ಪಿಸಿಕೊಳ್ಳಲು ವಾಚಾಳಿ ಆಗುತ್ತಾರೆ. ಹಿಂದೆ ಆರ್‍ಡಿಪಿಆರ್ ಸಚಿವರಾಗಿದ್ದಾಗ ಖಾತೆಗೆ ಸಂಬಂಧಿಸಿದ ಕೆಲಸ ಮಾಡುತ್ತಿರಲಿಲ್ಲ. ಈಗ ಗೃಹ ಸಚಿವರ ಕೆಲಸ ಏನೆಂದು ಅವರು ತಿಳಿದುಕೊಂಡಿಲ್ಲ ಎಂದು ಟೀಕಿಸಿದರು. ಅವರ ಪ್ರದೇಶದಲ್ಲೇ ಅನೇಕ ಅತ್ಯಾಚಾರಗಳಾಗಿವೆ. ಕೊಲೆಗಳೂ ಆಗಿವೆ; ಗೃಹ ಸಚಿವ ಎಂದು ಕೊಚ್ಚಿಕೊಳ್ಳುವ ವ್ಯಕ್ತಿ ಸ್ಥಳಕ್ಕೆ ಹೋಗಿ ಯಾರನ್ನಾದರೂ ಭೇಟಿ ಮಾಡಿದ್ದಾರಾ ಎಂದು ಪ್ರಶ್ನೆ ಹಾಕಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!