Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಲಬುರಗಿ - ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಓಡಿಸುವಂತೆ ಆಗ್ರಹ

ಸುದ್ದಿಮೂಲ ವಾರ್ತೆ

ಕಲಬುರಗಿ, ಮೇ.25: ಕಲಬುರಗಿ ಮತ್ತು ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್ ಮತ್ತು ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವಂತೆ ಆಗ್ರಹಿಸಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಕಲಬುರಗಿ ಬೆಂಗಳೂರು ಹಾಗೂ ಬೀದರ್ ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯ ಕುರಿತಂತೆ ವಿಸ್ತಾರವಾಗಿ ವಿವರಿಸಿರುವ ಖರ್ಗೆ ಅವರು ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 6000 ಪ್ರಯಾಣಿಕರು ಸಂಚರಿಸುತ್ತಿದ್ದು ಅವರಲ್ಲಿ ಬಹುತೇಕ ವಲಸೆ ಕೂಲಿ ಕಾರ್ಮಿಕರಾಗಿದ್ದಾರೆ. ಮೀಸಲು ಬೋಗಿಗಳಲ್ಲಿ ಆಸನ ಕಾಯ್ದಿರಿಸಲು ಹಣಕಾಸಿನ ದೃಷ್ಠಿಯಿಂದ ಅವರ ಶಕ್ತಿಗೆ ಮೀರಿದ್ದಾಗಿದ್ದು ಹಾಗಾಗಿ ಅವರು ಜನರಲ್ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದ್ದು ಪ್ರಯಾಣಿಕರು ಆಸನದ ಕೊರತೆಯಿಂದಾಗಿ ಹಾಸಲು ಮೇಲೆ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.

ಪ್ರಸ್ತುತ ಕಲಬುರಗಿ ಹಾಗೂ ಬೆಂಗಳೂರು ನಡುವೆ ಪ್ರತಿನಿತ್ಯ ಐದು ರೈಲುಗಳು‌ ಸಂಚರಿಸುತ್ತಿವೆ. ಅವುಗಳೆಂದರೆ, ಉದ್ಯಾನ ಎಕ್ಸ್ ಪ್ರೆಸ್, ಕರ್ನಾಟಕ ಎಕ್ಸ್‌ಪ್ರೆಸ್‌, ಬಸವ ಎಕ್ಸ್‌ಪ್ರೆಸ್‌, ಸೋಲಾಪುರ- ಹಾಸನ ಎಕ್ಸ್‌ಪ್ರೆಸ್‌ ಮತ್ತು ಕೊಯಮತ್ತೂರು ಎಕ್ಸ್‌ಪ್ರೆಸ್‌. ಇದರ ಜೊತೆಗೆ ವಾರಕ್ಕೊಮ್ಮೆ ಕೆಲ ರೈಲುಗಳು ಸಂಚರಿಸುತ್ತಿವೆ ಅವುಗಳೆಂದರೆ, ನಾಗರಕೋಯಿಲ್ ಎಕ್ಸ್‌ಪ್ರೆಸ್‌, ತುತೂಕುಡಿ ವಿವೇಕ ಎಕ್ಸ್‌ಪ್ರೆಸ್‌, ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್‌, ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್‌, ತಿರುವನಂತಪುರಂ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ಹಾಗೂ ಯಶವಂತಪುರ ಸುವಿಧಾ ಎಕ್ಸ್‌ಪ್ರೆಸ್‌. ಮತ್ತೆ ಮೈಸೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ವಾರದಲ್ಲಿ ಎರಡು ದಿನ ಸಂಚರಿಸುತ್ತದೆ. ಪ್ರಮುಖವಾಗಿ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಈ ಎಲ್ಲ ರೈಲುಗಳ ಬೋಗಿಗಳನ್ನು ಕಡಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು ಪುನಃ ಕಡಿತಗೊಳಿಸಲಾದ ಬೋಗಿಗಳನ್ನು ಆಯಾ ರೈಲುಗಳಿಗೆ ಜೋಡಿಸುವುದು ಅತಿ ಅವಶ್ಯಕವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಬರೆದಿದ್ದಾರೆ.

ಮುಂದುವರೆದು ಹೇಳಿದ ಖರ್ಗೆ ಅವರು, ವಾಸ್ತವಾಂಶ ಏನೆಂದರೆ, ಬೀದರ್ ಹಾಗೂ ಬೆಂಗಳೂರು‌ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಈ ಎರಡು ನಗರಗಳಿಗೆ ನಿಗದಿಪಡಿಸಿದ ಮೀಸಲಿಸಿರುವ ಆಸನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಲಬುರಗಿ- ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್- ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವ ಅವಶ್ಯಕತೆ ಇದ್ದು ಇದರಿಂದ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆ ಕಡಿಮೆಯಾಗಲಿದೆ.

ಹಾಗಾಗಿ, ನೂತನ ರೈಲುಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆ ನೀಡುವಂತೆ ರೈಲ್ವೆ ಸಚಿವರಲ್ಲಿ ಪತ್ರದ ಮೂಲಕ ಖರ್ಗೆ ಅವರು ಕೋರಿದ್ದಾರೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ