LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.24ರಂದು ಧರಣಿ

ಬೆಂಗಳೂರು: ಸೇವೆ ಖಾಯಂ ಮಾಡುವ, ನೇರ ನೇಮಕಾತಿ, ಕನಿಷ್ಠ ವೇತನ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ ಹೀಗಾಗಿ ಫೆ.24ರಂದು ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರು ಷಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ರಾಧ ಸುರೇಶ್ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘದ ಹಕ್ಕುಗಳನ್ನು ಈಡೇರಿಕೆಗೆ ಹಲವು ಭಾರಿ ಸರ್ಕಾರಕ್ಕೆ, ಸಚಿವರಿಗೆ, ಇಲಾಖ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಆದರೆ ಈವರೆಗೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯ ಎಂದರು.

ನಮ್ಮ ಸಂಘದ ಸದಸ್ಯರು ನಮ್ಮ ಸಮುದಾಯದ ಮೇಲೆ ಪ್ರಭಾವ ಬೀರುವ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ದೀರ್ಘಕಾಲದಿಂದ ಪ್ರಾಮಾಣಿಕವಾಗಿ ಪ್ರತಿನಿಧಿಸಲು ಪ್ರಯತ್ನಿಸುತ್ತಿದ್ದೇವೆ. ಇದರಲ್ಲಿ ಅನಾನುಕೂಲತೆಗಳು ಸೇರಿವೆ. ಆದರೆ, ಸಂಬಂಧಿತ ಪ್ರಾಧಿಕಾರಿಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಮ್ಮ ಸಂಘದ ಬೇಡಿಕೆಗಳನ್ನು ಬಗೆಹರಿಸಲು ವಿಫಲವಾಗಿದೆ. ಅಲ್ಲದೆ ನಮ್ಮ ಸಮಸ್ಯೆಗೆ ಸರಿಯಾಗಿ ಗಂಭೀರವಾಗಿ ಪರಿಗಣಿಸಿರುವುದಿಲ್ಲ ಯಾವುದೇ ತೃಪ್ತಿಕರ ಪರಿಹಾರವನ್ನು ನೀಡಲು ವಿಫಲವಾಗಿದ್ದಾರೆ ಎಂದು ಆಗ್ರಹಿಸಿದರು.

ಸಂಘದಿಂದ ಸರ್ಕಾರಕ್ಕೆ ನೆಸಿರುವ ಬೇಡಿಕೆಗಳು :


1. ಗುತ್ತಿಗೆಯಲ್ಲಿ ದುಡಿಯುತ್ತಿರುವ ನಮ್ಮ "ಸೇವೆಯನ್ನು ಖಾಯಂ" ಮಾಡಬೇಕು.

2. ಸುಪ್ರಿಂ ಕೋಟ್ ೯ನ ಆದೇಶದಂತೆ "ಸಮಾನ ಕೆಲಸಕ್ಕೆ ಸಮಾನ ವೇತನ" ನಿಗಧಿಪಡಿಸಬೆಕು. [ಕನಿಷ್ಟ ಪಕ್ಷ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಶುಕ್ರೂಷಾಧಿಕಾರಿಗಳಿಗೆ ಮೂಲ ವೇತನ ಕೊಟ್ಟಂತೆ ನಮಿಗೂ ನಿಗದಿಪಡಿಸಬೇಕು.

3. ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಲಿಕೆಯನ್ನು ನೀಡಬೇಕು.

4. ಜಿಲ್ಲೆ ಯಿಂದ ಜಿಲ್ಲೆಗೆ ವರ್ಗವಣೆ ನೀಡಬೇಕು.

ಮೇಲಿನ ಬೇಡಿಕೆಗಳು ಇದುವರೆವಿಗೂ ಪೂರ್ಣಗೋಳಿಸಿದ ಕಾರಣ ನಮ್ಮ ಧ್ವನಿಯನ್ನು ಪ್ರೇರೆಪಿಸಲು ನಾವು ಎಲ್ಲಾ ರೀತಿಯ ಮನವಿಗಳನ್ನು ಮತ್ತು ಇತರೆ ಮಾರ್ಗಗಳನ್ನು ಮುಗಿಸಿದ್ದೇವೆ. ಸಮಯವು ಕೊನೆಗೊಳ್ಳುತ್ತಿರುವುದರಿಂದ ನಮ್ಮ ಸಂಘವು ಹೋರಾಟದ ದಾರಿಯನ್ನು ಮಾಡಲೇಬೇಕಾದ ಅನಿವಾರ್ಯತೆ ಇದ್ದು ಅಂತಿಮ ನಿರ್ಧಾರವಾಗಿದೆ.

ಫೆ:-24ರಂದು ಶಾಂತಿಯುತ ಹೋರಟವನ್ನು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಆರಂಭಿಸುತ್ತೀದ್ದೇವೆ. ಈ ಹೋರಾಟವು ಕೇವಲ ಪ್ರತಿಭಟನೆ ಮಾತ್ರವಲ್ಲ ಇದು ನಮ್ಮ ಹಕ್ಕುಗಳನ್ನು ಮಾನ್ಯವಾಗಿಸುವ ವರೆಗೂ ಹೋರಾಡುತ್ತೇವೆ ಎಂದು ಸರ್ಕಾರಕ್ಕೆ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸೌಮ್ಯ ಶ್ರೀ.ಕೆ. ಯುವರಾಜು, ಖಜಾಂಚಿ ರಜನಿ, ಸಹ ಕಾರ್ಯದರ್ಶಿ ವಿನೋದ, ಸಂಘಟನಾ ಕಾರ್ಯದರ್ಶಿ ಮಂಜುನಾಥ, ಸಂಚಾಲಕರಾದ ರಘುನಾಥ್, ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ