LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದೂ ವಿರೋಧಿ ಕೃತ್ಯ ಖಂಡಿಸಿ ಜನವರಿ 25ರಂದು ಧರಣಿ

ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಜಿಹಾದಿ ದೌರ್ಜನ್ಯಗಳ ವಿರುದ್ಧ ಜನವರಿ 25ರಂದು ಫ್ರೀಡಮ್ ಪಾರ್ಕ್‌ನಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ಬೆಂಗಳೂರಿನ ಪ್ರಸ್ಕಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜಧಾನಿ ಬೆಂಗಳೂರು ಇಂದು ಹಿಂದೂಗಳಿಗೆ ಸುರಕ್ಷಿತ ನಗರವಲ್ಲ ಎಂಬುದನ್ನು ಚಾಮರಾಜಪೇಟೆಯಲ್ಲಿ ನಡೆದ ನಿರಂತರ ದೌರ್ಜನ್ಯಗಳು ಸಾಬೀತುಪಡಿಸಿವೆ. ಹಿಂದೂ ಭಕ್ತರು, ಮಹಿಳೆಯರು, ವ್ರತಧಾರಿಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಇನ್ನು ಸಹನೆಯ ಗಡಿ ದಾಟಿವೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ – ಹಿಂದೂ ವಿರೋಧಿ ಷಡ್ಯಂತ್ರವನ್ನು ಸರ್ಕಾರವೇ ಮೌನದಿಂದ ಪೋಷಿಸುತ್ತಿರುವ ಭಯಾನಕ ಸ್ಥಿತಿ ಎದುರಾಗಿದೆ.

ಜನವರಿ 4ರಂದು ಓಂ ಶಕ್ತಿ ಮಾಲಧಾರಿಣಿ ಅಮಾಯಕ ಮಹಿಳಾ ಭಕ್ತರು ಭಜನೆಯೊಂದಿಗೆ ಶಾಂತಿಪೂರ್ಣವಾಗಿ ಮೆರವಣಿಗೆ ನಡೆಸುತ್ತಿದ್ದಾಗ, ಜಿಹಾದಿ ಮನೋಭಾವದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಕಲ್ಲು ತೂರಾಟ ನಡೆಸಿ ಮಹಿಳೆಯರನ್ನು ಗಾಯಗೊಳಿಸಿದರು. ಮಹಿಳೆಯರ ಮೇಲೂ ದಾಳಿ ನಡೆಸುವಷ್ಟು ಕ್ರೂರ ಮನಸ್ಥಿತಿಗೆ ಇಳಿದಿರುವ ಈ ಶಕ್ತಿಗಳನ್ನು ಸರ್ಕಾರ ಇನ್ನೂ “ಸಮಾಜ ವಿರೋಧಿ ಅಂಶಗಳು” ಎಂದು ಮೃದು ಪದಗಳಲ್ಲಿ ಕರೆದಿರುವುದು ಅಪರಾಧಿಗಳ ಮನೋಬಲ ಹೆಚ್ಚಿಸಿದೆ.

ಇದೇ ಕ್ಷೇತ್ರದಲ್ಲಿ ನರಸಿಂಹ ದೇವಸ್ಥಾನದ ಉತ್ಸವ ಮೂರ್ತಿಯ ಮೇಲೆ ಅಶುದ್ಧ ನೀರು ಎರಚಿ ದೇವಾಲಯವನ್ನು ಅಪವಿತ್ರಗೊಳಿಸಲಾಯಿತು. ಆಕಳ ಕೆಚ್ಚಲು ಕತ್ತರಿಸಿದ ಅಮಾನವೀಯ ಕೃತ್ಯ, ಅಯ್ಯಪ್ಪ ಮಾಲಧಾರಿಗಳ ಮೇಲೆ ದಾಳಿ, ವ್ರತಾಚರಣೆಯ ಟೆಂಟಿಗೆ ಬೆಂಕಿ, ಹಿಂದೂ ಭಕ್ತರಲ್ಲಿ ಭಯ ಮೂಡಿಸುವ ಕ್ರಮಗಳು – ಎಲ್ಲಕ್ಕೂ ಒಂದೇ ಉತ್ತರ:
“ಅಪ್ರಾಪ್ತ ಬಾಲಕರು”, “ಮಾನಸಿಕ ಅಸ್ವಸ್ಥ” ಎಂದು ಪ್ರಕರಣ ಮುಚ್ಚಿಹಾಕುವುದು!

ಇದು ಯಾದೃಚ್ಛಿಕವಲ್ಲ. ಇದು ಅಪರಾಧಿಗಳನ್ನು ರಕ್ಷಿಸುವ ವ್ಯವಸ್ಥಿತ ಸರ್ಕಾರಿ ನೀತಿ.

ಚಾಮರಾಜಪೇಟೆಯಲ್ಲಿ ಆಟದ ಮೈದಾನ ಕಬಳಿಸುವ ಷಡ್ಯಂತ್ರಧಾರ್ಮಿಕ ದತ್ತಿ ಇಲಾಖೆಯ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಸುತ್ತ ಕಾನೂನುಬಾಹಿರ ಮಾಂಸದ ಅಂಗಡಿಗಳುದೇವಸ್ಥಾನಗಳನ್ನು ಉದ್ದೇಶಪೂರ್ವಕವಾಗಿ ಅಪವಿತ್ರಗೊಳಿಸುವ ಕ್ರಮಗಳುನಿರಂತರವಾಗಿ ನಡೆಯುತ್ತಿವೆ. ಇಲ್ಲಿ ಸಂವಿಧಾನ ನಡೆಯುತ್ತಿಲ್ಲ. ಒಬ್ಬ ವ್ಯಕ್ತಿಯ, ಒಂದು ಮತಬ್ಯಾಂಕ್‌ನ, ಒಂದು ಅಜೆಂಡಾದ ಕಾನೂನು ಮಾತ್ರ ನಡೆಯುತ್ತಿದೆ.

ಇದಕ್ಕೂ ಮೇರಾಗಿ, ಪಶುಸಂಗೋಪನೆ ಇಲಾಖೆಗೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ ಪಶು ಆಸ್ಪತ್ರೆಯ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನ ನಡೆಯಿತು. ಮಾನ್ಯ ಉಚ್ಚ ನ್ಯಾಯಾಲಯ ತಡೆಆಜ್ಞೆ ನೀಡದಿದ್ದರೆ ಈ ದೋಚಾಟವೂ ಪೂರ್ಣಗೊಂಡಿರುತ್ತಿತ್ತು. ಇದು ರಾಜ್ಯ ಪ್ರಾಯೋಜಿತ ಭೂಮಿ ಕಬಳಿಕೆಯ ಸ್ಪಷ್ಟ ಉದಾಹರಣೆಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಆದ್ಯಕ್ಷರು, ಶ್ರೀರಾಮ ಸೇನೆ.ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,ಬಿ‌ಎನ್ ಮಹೇಶ ಕುಮಾರ್, ಅಯ್ಯಪ್ಪ ದೇವಸ್ಥಾನ ರಕ್ಷಿತ , ಕಾರ್ಯದರ್ಶಿ, ಓಂ ಶಕ್ತಿ ಸಂಘಟನೆ,ಸುಂದ್ರೇಶ ನರ್ಗಲ್, ಅಧ್ಯಕ್ಷರು, ಶ್ರೀ ರಾಮ ಸೇನೆ, ಕರ್ನಾಟಕಮಂಜುನಾಥ, ಆದ್ಯಕ್ಷರು, ಶ್ರೀರಾಮನ ಸೇನೆ, ಬೆಂಗಳೂರು ನಗರ. ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ