LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಧರ್ಮಸ್ಥಳ ಬುರುಡೆ ಪ್ರಕರಣ- 12 ಷರತ್ತುಗಳೊಂದಿಗೆ ಜಾಮೀನು..! ಯಾವುದೆಲ್ಲಾ 12 ಷರತ್ತುಗಳು?

ಮಂಗಳೂರು: ಬುರುಡೆ ಪ್ರಕರಣ ಸಂಬಂಧ ಸದ್ಯ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ 12 ಷರತ್ತುಗಳೊಂದಿದೆ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯ ಚಿನ್ನಯ್ಯನಿಗೆ ವಿಧಿಸಲಾದ 12 ಷರತ್ತುಗಳಾವುವು? ಇಲ್ಲಿದೆ ಸಂಪೂರ್ಣ ವಿವರ….

1) ಸಮಾನ ಅಪರಾಧ ಮತ್ತೆ ಮಾಡಬಾರದು (ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು.)

2) ಓಡಿಹೋಗಬಾರದು (Abscond ಆಗಬಾರದು)(ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ.)

3) ಸಾಕ್ಷಿದಾರರಿಗೆ ಬೆದರಿಕೆ, ಲಂಚ, ಅಥವಾ ಪ್ರಲೋಭನೆ ಕೊಡಬಾರದು(Prosecution witnesses ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು.)4) ಸಾಕ್ಷಿಗಳನ್ನು ನಾಶ ಮಾಡಬಾರದು(ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಬೇಡ.)

5) ತನಿಖಾ ಅಧಿಕಾರಿಗೆ ಸಹಕರಿಸಬೇಕು(10 (Investigating Officer) ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು.)

6) ನ್ಯಾಯಾಲಯಕ್ಕೆ ಹಾಜರಾಗಬೇಕು(ಕೋರ್ಟ್ ದಿನಾಂಕಗಳಿಗೆ ಯಾವಾಗಲೂ ಹಾಜರಾಗಬೇಕು. ಕೋರ್ಟ್ ಕ್ಷಮಿಸಿದಾಗ ಮಾತ್ರ ಹಾಜರಾಗದೇ ಇರಬಹುದು.)

7) ವಿಳಾಸದ ಪುರಾವೆ ಕೊಡಬೇಕು(ತಾನೂ ಹಾಗೂ ಜಾಮೀನಾದರೂ ಕೂಡ: ಆಧಾ‌ರ್, ಮತದಾರರ ಗುರುತಿನ ಚೀಟಿ ಇದಲ್ಲಾದರೂ ಪುರಾವೆ ಕೊಡಬೇಕು.)

8) ವಿಳಾಸದಲ್ಲಿ ಬದಲಾವಣೆ ಬಂದರೆ ಕೋರ್ಟ್‌ಗೆ ತಿಳಿಸಬೇಕು.(ತಮ್ಮ ನಿವಾಸದ ವಿಳಾಸ ಬದಲಾದರೆ ತಕ್ಷಣ ಕೋರ್ಟ್‌ಗೆ ತಿಳಿಸಬೇಕು.)

9) ಮೊಬೈಲ್ ನಂಬರ್ / ವಾಟ್ಸಪ್ / ಇಮೇಲ್ ಕೊಡಬೇಕು(ಲಭ್ಯವಿದ್ದರೆ ಎಲ್ಲಾ contact details ಕೋರ್ಟ್‌ಗೆ ಕೊಡಬೇಕು.)

10) ಕೋರ್ಟ್ ಜುರಿಸ್ಟಿಕ್ಷನ್ ಹೊರಗೆ ಹೋಗಬಾರದು(ಕೋರ್ಟ್ ಅನುಮತಿ ಇಲ್ಲದೇ ಜಿಲ್ಲೆಯ ಹೊರಗೆ ಅಥವಾ jurisdiction ಹೊರಗೆ ಹೋಗಬಾರದು.)

11) ಕೇಸ್ ಬಗ್ಗೆ ಮಾಧ್ಯಮಕ್ಕೆ ಮಾತನಾಡಬಾರದು(Crime No.39/2025 2: TV, ಪತ್ರಿಕಾ/ವರದಿಗಾರರು, ಸೋಶಲ್ ಮೀಡಿಯಾ, ಇತರ ಮಾಧ್ಯಮಗಳು ಯಾವುದಕ್ಕೂ ಸಂದರ್ಶನ / ಹೇಳಿಕೆ ಕೊಡಬಾರದು.)

12) ಪೊಲೀಸ್ ಠಾಣೆಗೆ ಹಾಜರಾತಿ(ಬೇಲ್ ಮೇಲೆ ಬಿಡುಗಡೆ ಆದ ನಂತರ ಒಂದು ದಿನ ಹಾಜರಿ – ಒಂದು ದಿನ ಬಿಟ್ಟು ಪೊಲೀಸ್‌ ಠಾಣೆಗೆ ಹಾಜರಾಗಬೇಕು ಮುಂಚಿತ ವರದಿ (charge sheet / final report) ಫೈಲ್ ಆಗುವ ತನಕ)

ಅಲ್ಲದೇ ಜಾಮೀನು ಮೊತ್ತ ವೈಯಕ್ತಿಕ ಬಾಂಡ್ 1,00,000 ರೂಪಾಯಿ, ಇಬ್ಬರು ಜಾಮೀನುದಾರರು ತಲಾ ₹1,00,000 ಮೌಲ್ಯದ ಜಾಮೀನು ನೀಡಬೇಕು ಎಂಬ ಷರತ್ತನ್ನು‌ ನೀಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026