ಸ್ಟಾಪ್ ನರ್ಸ್ ಹುದ್ದೆಗೆ ನೇರ ಸಂದರ್ಶನ.!
ಮಡಿಕೇರಿ: 2023-24 ನೇ ಸಾಲಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ವೈದ್ಯಕೀಯ ಶುಶ್ರೂಷಕಿ(ಸ್ಟಾಪ್ ನರ್ಸ್) ಹುದ್ದೆಗೆ ಜುಲೈ, 05 ರಂದು ಬೆಳಗ್ಗೆ 10 ರಿಂದ ನೇರ ಸಂದರ್ಶನ ನಡೆಯಲಿದೆ.
ಗಾಳಿಬೀಡು ಜವಾಹರ ನವೋದಯ ವಿದ್ಯಾಲಯ ವತಿಯಿಂದ ಸ್ಟಾಪ್ ನರ್ಸ್ ಹುದ್ದೆಯು ತಾತ್ಕಾಲಿಕವಾಗಿದ್ದು, ತಿಂಗಳಿಗೆ ರೂ. 34,125 ವೇತನ ನೀಡಲಾಗುತ್ತದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಜುಲೈ, 05 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ಗಂಟೆವರೆಗೆ ಹಾಜರಾಗುವಂತೆ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ವಿದ್ಯಾಲಯದ ವೆಬ್‍ಸೈಟ್ nvsjnv_kodagu ಹಾಗೂ ದೂ.ಸಂ.9447368470, 9380802179 ಸಂಪರ್ಕಿಸಬಹುದಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.