LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಜಿಲ್ಲಾ ಉಸ್ತುವಾರಿ ಸಚಿವ, ಸಂಸದರ ಹೆಸರಿಲ್ಲ ಕಾಂಗ್ರೆಸ್​​ ಕಾರ್ಯಕರ್ತ ರೋಶಾ.!

 

ಕೊಪ್ಪಳ್ಳ: ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲನ್ಯಾಸ ಕಾರ್ಯಕ್ರಮದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕೇಂದ್ರ ಸಚಿವ ಸೋಮಣ್ಣ ಎದುರೇ ಕಾಂಗ್ರೆಸ್​​ ಕಾರ್ಯಕರ್ತರು ರೋಶಾವೇಷ ಪ್ರದರ್ಶಿಸಿದ್ದಾರೆ.

ಕಾರ್ಯಕ್ರಮದ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರ ಹೆಸರಿಲ್ಲದಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕುರ್ಚಿ ಎಸೆದು ರಂಪಾಟ ನಡೆಸಿದ್ದಾರೆ. ಈ ಹಿನ್ನೆಲೆ ಕೇವಲ 5 ನಿಮಿಷಗಳಕಾಲ ಸ್ಥಳದಲ್ಲಿದ್ದು, ಬಳಿಕ ವಿ. ಸೋಮಣ್ಣ ತೆರಳಿದ್ದಾರೆ.

ಉದ್ರಿಕ್ತ ಕಾಂಗ್ರೆಸ್​​ ಕಾರ್ಯಕರ್ತರು ಕೇಂದ್ರ ಸಚಿವ ಸೋಮಣ್ಣ ಅವರತ್ತಲೂ ಕುರ್ಚಿ ತೂರಿದ್ದಾರೆ. ಶಂಕು ಸ್ಥಾಪನೆ ಮುಗಿಸಿ ಅವರು ಹೊರಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ವೇಳೆ ಅಂಗರಕ್ಷಕರು ಸೋಮಣ್ಣರತ್ತ ಬರುತ್ತಿದ್ದ ಕುರ್ಚಿಗಳನ್ನ ತಡೆದಿದ್ದಾರೆ. ಇದರಿಂದ ಸಂಭವನೀಯ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST