LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೋಚಿಂಗ್ ಪಡೆಯದೇ ಮೊದಲ ಪ್ರಯತ್ನದಲ್ಲೇ IAS ಆದ ದಿವ್ಯಾ ಮಿತ್ತಲ್

ಹರಿಯಾಣ : ಐಎಎಸ್ ದಿವ್ಯಾ ಮಿತ್ತಲ್ 2013ರ ಬ್ಯಾಚ್ ನ ಐಎಎಸ್ ಅಧಿಕಾರಿ. ಎರಡು ವರ್ಷಗಳ ಐಎಎಸ್ ತರಬೇತಿಯಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರೊಬೇಷನರ್ ಪ್ರೊಬೇಷನರ್ಸ್ ಗೆ ನೀಡುವ ಅಶೋಕ್ ಬಂಬಾವಾಲೆ ಪ್ರಶಸ್ತಿಯನ್ನು ದಿವ್ಯಾ ಅವರಿಗೆ ನೀಡಿ ಗೌರವಿಸಲಾಗಿದೆ. ಅವರ ಸಾಧನೆ ಕಥೆ ಇಲ್ಲಿದೆ.

ಐಎಎಸ್ ದಿವ್ಯಾ ಮಿತ್ತಲ್ ಮೂಲತಃ ಹರಿಯಾಣದ ರೇವಾರಿಯವರು. ಆದರೆ ಹುಟ್ಟಿದ್ದು ದೆಹಲಿಯಲ್ಲಿ. ಶಾಲೆಯಿಂದ ಬಿ.ಟೆಕ್ ವರೆಗೆ ಓದಿದ್ದು ದೆಹಲಿಯಲ್ಲಿ.

ದಿವ್ಯಾ ಮಿತ್ತಲ್ ಗೆ ಐಎಎಸ್ ಅಧಿಕಾರಿಯಾಗಲು ಸ್ಪೂರ್ತಿ ಬೇರೆ ಯಾರೂ ಅಲ್ಲ ಅವರ ಪತಿ ಗಗನ್ ದೀಪ್ ಸಿಂಗ್. ಐಎಎಸ್ ದಿವ್ಯಾ ಮಿತ್ತಲ್ ಅವರ ಪತಿ ಗಗನ್ ದೀಪ್ ಸಿಂಗ್ ಕೂಡ ಇಂಜಿನಿಯರಿಂಗ್ ವಿದ್ಯಾರ್ಥಿ.

ಮದುವೆಯ ನಂತರ ಇಬ್ಬರೂ ಲಂಡನ್ ನಲ್ಲಿ ಒಟ್ಟಿಗೆ ಕೆಲಸಕ್ಕೆ ಸೇರಿಕೊಂಡರು. ದೆಹಲಿಯ ಐಐಟಿಯಲ್ಲಿ ಬಿಟೆಕ್ ಮಾಡಿದ್ದಾರೆ. ಇದಾದ ಬಳಿಕ ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಮಾಡಿದರು.

ವಿದೇಶದಲ್ಲಿನ ಕೆಲಸದಲ್ಲಿ ಸಾಕಷ್ಟು ಹಣವಿತ್ತು. ಇಬ್ಬರೂ ಕೆಲಸ ಬಿಟ್ಟು ಭಾರತಕ್ಕೆ ಬಂದು UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ದಂಪತಿಗಳು ಭಾರತಕ್ಕೆ ಬಂದು ಯಾವುದೇ ಐಎಎಸ್ ಕೋಚಿಂಗ್ ಸೇರದೆ ಸ್ವಯಂ ಅಧ್ಯಯನವನ್ನು ಪ್ರಾರಂಭಿಸಿದರು.

2012ರಲ್ಲಿ ದಿವ್ಯಾ ಮಿತ್ತಲ್ ಕೂಡ ಆಯ್ಕೆಯಾಗಿ ಐಪಿಎಸ್ ಆದರು. ಅವರು ಗುಜರಾತ್ ಕೇಡರ್ ಪಡೆದರು. ತರಬೇತಿ ನಡೆಯುತ್ತಿರುವಾಗಲೇ 2013ರಲ್ಲಿ ಐಎಎಸ್ ಆದರು.

ದಿವ್ಯಾ ಮಿತ್ತಲ್ ಮೊದಲ ಪ್ರಯತ್ನದಲ್ಲಿಯೇ UPSC ತೇರ್ಗಡೆಯಾಗಿದ್ದಾರೆ. ಇನ್ನು ಐಎಎಸ್ ದಿವ್ಯಾ ಮಿತ್ತಲ್ ಅವರು ಮಿರ್ಜಾಪುರದ ಡಿಎಂ ಆಗುವ ಮೊದಲು ಬರೇಲಿ ಅಭಿವೃದ್ಧಿ ಪ್ರಾಧಿಕಾರದ ವಿಸಿ, ಯುಪಿಎಸ್ ಐಡಿಎ, ಸಿಒ ಗೊಂಡಾ, ಎಸ್ ಡಿಎಂ ಮೀರತ್ ಮತ್ತು ಸೀತಾಪುರ್ ನ ಜಂಟಿ ಎಂಡಿ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಳೆ ಹಾನಿ ಕುಟುಂಬಸ್ಥರ ನೆರವಿಗೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ವೈಯಕ್ತಿವಾಗಿ ಆರ್ಥಿಕ ನೆರವು.!ರೈತ ವಿರೋಧಿ ಕಾಂಗ್ರಸ್ ಸರ್ಕಾರ: ಡಾ.ವಿನಯ ಕುಮಾರ್ ಆರೋಪ.!ಜವಾಹರ್ ನವೋದಯ ವಿದ್ಯಾಲಯ: 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಧರ್ಮಸ್ಪಳದಲ್ಲಿ ಉತ್ಪನನ ಕಾರ್ಯ: 1ನೇ ಪಾಯಿಂಟ್‌ ನಲ್ಲಿ ಸಿಗದ ತಲೆ ಬುರುಡೆಬೆಳ್ತಂಗಡಿ : ನೇತ್ರಾವತಿ ಬಳಿ ಅರಣ್ಯದಲ್ಲಿ ಎಸ್.ಐ.ಟಿ ತನಿಖೆ ಮುಂದುವರಿಕೆ: ಮುಂದೆ ಜೆಸಿಬಿಯಿಂದ ಕಾರ್ಯಾಚರಣೆಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು‘ಸನ್ಯಾಸಿನಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಅವರಿಗೆ ನ್ಯಾಯ ಬೇಕು’: ರಾಜೀವ್ ಚಂದ್ರಶೇಖರ್'ಪಹಲ್ಗಾಮ್ ದಾಳಿ ಮಾಡಿದ ಮೂವರು ಉಗ್ರರನ್ನು ಎನ್‌ಕೌಂಟರ್‌ ಮಾಡಲಾಗಿದೆ'- ಅಮಿತ್‌ ಶಾ ಘೋಷಣೆಧರ್ಮಸ್ಥಳ ಪ್ರಕರಣವನ್ನು ಎಸ್ ಐಟಿ ಗಂಭೀರವಾಗಿ ಪರಿಗಣಿಸಿದೆ, ತನಿಖೆಯಲ್ಲಿ ಮಧ್ಯಪ್ರವೇಶ ಇಲ್ಲ; ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಪ್ರದೇಶದಲ್ಲಿ ಮಣ್ಣು ಅಗೆದು ಶೋಧ ಕಾರ್ಯ ಆರಂಭ