LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹೊಸ ವ್ಯಾಪಾರ ಆರಂಭಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್‌ಟನ್ :ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ನವೀನ ವ್ಯವಹಾರ ಆರಂಭಿಸಿದ್ದಾರೆ. ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರವನ್ನು ಪ್ರಾರಂಭಿಸಿದ್ದು, ಈ ಗಿಟಾರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವ್ಯವಹಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಘೋಷಿಸಿದ್ದಾರೆ.

ಅಮೆರಿಕದ ಧ್ವಜ ಮತ್ತು ಹದ್ದಿನ ಆಕೃತಿಗಳು ಈ ಗಿಟಾರ್ ನಲ್ಲಿ ಆಕರ್ಷಕವಾಗಿ ಕಾಣುತ್ತವೆ. ‘ಮೇಕ್ ಅಮೇರಿಕಾ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯಗಳನ್ನು ಕೂಡ ಗಿಟಾರ್‌ನಲ್ಲಿ ಕಾಣಬಹುದು. ಇದಲ್ಲದೆ ಅವುಗಳಲ್ಲಿ ಕೆಲವು ಗಿಟಾರ್‌ಗಳಿಗೆ ಟ್ರಂಪ್ ಸಹಿ ಮಾಡಿದ್ದಾರೆ.

ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ. ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ (8.45 ಲಕ್ಷ ರೂ.) ಎಂದು ಘೋಷಿಸಲಾಗಿದ್ದು, ಸಹಿ ಹಾಕಿದ ಗಿಟಾರ್​ ಕೇವಲ 275 ಮಾತ್ರ ಇವೆ ಎಂದು ಹೇಳಲಾಗಿದೆ.

ಒಟ್ಟು ನಾಲ್ಕು ಬಗೆಯ ಗಿಟಾರ್‌ಗಳನ್ನು ಮಾರಾಟ ಮಾಡುವುದಾಗಿ ‘ಟ್ರಂಪ್ ಗಿಟಾರ್ಸ್’ ವೆಬ್‌ಸೈಟ್ ಬಹಿರಂಗಪಡಿಸಿದೆ. ಈ ಹಿಂದೆ ಟ್ರಂಪ್ ಬೈಬಲ್ ಮತ್ತು ವಾಚ್‌ಗಳ ವ್ಯಾಪಾರವನ್ನು ಪ್ರಾರಂಭಿಸಿದ್ದರು

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ: -ಅಮುಗೆ ರಾಯಮ್ಮ .!ಧರ್ಮಸ್ಥಳ ಪ್ರಕರಣ: ಮಣ್ಣು ಅಗೆದಂತೆ ನೀರು ತುಂಬುತ್ತಿದ್ದು, ಜೆಸಿಬಿ ಬಳಸಿ ಅಗೆಯಲು ಮುಂದಾದ ಎಸ್ಐಟಿ'ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್‌ಗೆ ಆಗದಿದ್ರೆ, ಸಹಾಯ ಮಾಡಲು ನಾವು ಸಿದ್ಧ'- ರಾಜನಾಥ್ ಸಿಂಗ್ಜಿಲ್ಲೆಯಲ್ಲಿ 1485 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ರೈತರಿಗೆ ಆತಂಕ ಬೇಡ: ಬಿ.ಮಂಜುನಾಥ.!ವಿದ್ಯಾರ್ಥಿ ವೇತನ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ: ನಟ ಶಿವರಾಜ್ ಕುಮಾರ್ಮಳೆ ಹಾನಿ ಕುಟುಂಬಸ್ಥರ ನೆರವಿಗೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ವೈಯಕ್ತಿವಾಗಿ ಆರ್ಥಿಕ ನೆರವು.!ರೈತ ವಿರೋಧಿ ಕಾಂಗ್ರಸ್ ಸರ್ಕಾರ: ಡಾ.ವಿನಯ ಕುಮಾರ್ ಆರೋಪ.!ಜವಾಹರ್ ನವೋದಯ ವಿದ್ಯಾಲಯ: 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಧರ್ಮಸ್ಪಳದಲ್ಲಿ ಉತ್ಪನನ ಕಾರ್ಯ: 1ನೇ ಪಾಯಿಂಟ್‌ ನಲ್ಲಿ ಸಿಗದ ತಲೆ ಬುರುಡೆ