LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ: ಈ ಚಾನ್ಸ್‌ ಮಿಸ್‌ ಮಾಡಿಕೊಳ್ಳಬೇಡಿ!!

ಪಡಿತರ ಚೀಟಿದಾರರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಡಿ. 31 ರವರೆಗೆ ಆಹಾರ ಇಲಾಖೆ ಅವಕಾಶ ನೀಡಿದ್ದು, ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆ ಸಂಬಂಧ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.


ಎಲ್ಲಿ ತಿದ್ದುಪಡಿ ಮಾಡಬಹುದು?; ತಿದ್ದುಪಡಿ ಮಾಡಿಕೊಳ್ಳುವವರು ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.


ಏನೆಲ್ಲಾ ದಾಖಲೆಗಳು ಬೇಕು?;

*‌ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನೊಂದಿಗೆ ಆದಾಯ ಪ್ರಮಾಣ ಪತ್ರ ನೀಡಬೇಕು.

*‌ ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.

*‌ ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್.ಆರ್ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.


ಏನೆಲ್ಲಾ ಅಪ್ಡೇಟ್ ಮಾಡಬಹುದು..?:

* ವಿಳಾಸ ಬದಲಾವಣೆ

* ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯುವುದು

* ಪೋಟೋ ಮತ್ತು ಬಯೋಮೆಟ್ರಿಕ್

* ಕುಟುಂಬ ಸದಸ್ಯರ ಹೆಸರು ತಿದ್ದುಪಡಿ

* ಮನೆ ಯಜಮಾನರ ಬದಲಾವಣೆ

* ಹೊಸ ಸದಸ್ಯರ ಸೇರ್ಪಡೆ ration-card-;ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆನಿಂತಿದ್ದ ಲಾರಿಗೆ ವ್ಯಾನ್‌ ಡಿಕ್ಕಿ : 7 ಮಕ್ಕಳ ಸಹಿತ 10 ಮಂದಿ ಸಾವುಉಡುಪಿ: ಸ್ನೇಹಿತರೇ ರಾತ್ರೋರಾತ್ರಿ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆಚಾರ್ಮಾಡಿ ಘಾಟ್‌ನಲ್ಲಿ ಅಪಘಾತ: ಪ್ರಪಾತಕ್ಕೆ ಬಿದ್ದು ಯುವಕಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ: ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋನಿಲ್ಲಿಸಿದ್ದ ಶಾಲಾ ಬಸ್ಸಿನ ಒಳಗೆ ಬೆಂಕಿ ಅವಘಡ : ವ್ಯಕ್ತಿ ಸಜೀವ ದಹನಆ.15ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ!!ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ..!1990ರ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿ