Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಮ್ಮ ಪ್ರತಿಭೆಯನ್ನು ಬೇರೆಯವರು ಸದುಪಯೋಗಪಡಿಸಿಕೊಂಡು ಮುಂದೆ ಬರುತ್ತಿದ್ದಾರೆ : ಡಾ.ಹನುಮಂತ ಮೇಲಿನಮನಿ

[video width="1920" height="1080" mp4="https://janajeevala.com/wp-content/uploads/2023/08/video_20230804_143627.mp4"][/video]

ಬೆಳಗಾವಿ ಜಿಎ ಪಪೂ ಮಹಾವಿದ್ಯಾಲಯದ ಶಾಲಾ ಒಕ್ಕೂಟ, ವಿವಿಧ ಸಂಘಗಳ ಉದ್ಘಾಟನೆ

ನಮ್ಮ ಪ್ರತಿಭೆಯನ್ನು ಬೇರೆಯವರು ಸದುಪಯೋಗಪಡಿಸಿಕೊಂಡು ಮುಂದೆ ಬರುತ್ತಿದ್ದಾರೆ : ಡಾ.ಹನುಮಂತ ಮೇಲಿನಮನಿ

ಬೆಳಗಾವಿ :ಪ್ರತಿಭೆಗಳು ನಮ್ಮಲ್ಲೇ ಇದೆ. ಆದರೆ ಅದನ್ನು ಕೆಲವರಿಗೆ ಪ್ರದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಬೇರೆಯವರು ಬಳಸಿಕೊಂಡು ಮುಂದೆ ಬರುತ್ತಿದ್ದಾರೆ. ನಾವು ಮುಂದೆ ಬರುತ್ತಿಲ್ಲ. ನಾವು ಹಿಂದುಳಿಯುತ್ತಿದ್ದೇವೆ ಎಂದು ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ಹೇಳಿದರು. ಶುಕ್ರವಾರ ನಗರದ ಕೆಎಲ್ ಇ ಸಂಸ್ಥೆ ಗಿಲಗಂಚಿ ಅರಟಾಳ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಒಕ್ಕೂಟ ಮತ್ತು ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮತ್ತೊಬ್ಬರ ವಿಚಾರ ಇಟ್ಟುಕೊಂಡು ಬದುಕುವ ಬದಲು ನಮ್ಮ ವಿಚಾರ ಇಟ್ಟುಕೊಂಡು ಬದುಕು ಕಲೆ ರೂಢಿಸಿಕೊಳ್ಳಬೇಕು. ಅಂದಾಗ ನಾವು ಮುಂದೆ ಬರಲು ಸಾಧ್ಯವಾಗುತ್ತದೆ. ಪಠ್ಯವನ್ನು ಸ್ವಲ್ಪಮಟ್ಟಿಗೆ ಬದಿಗಿಟ್ಟು ಪಠ್ಯೇತರ ಚಟುವಟಿಕೆಯತ್ತ ಗಮನಹರಿಸಬೇಕು. ಅಂದಾಗ ಸಾಧನೆ ಮಾಡಲು ಸಾಧ್ಯವಿದೆ. ಮಕ್ಕಳು ಇಂದು ವಿಶೇಷ ಪ್ರತಿಭೆ ತೋರಿಸಿರುವುದು ಸಂತಸದ ಸಂಗತಿ ಎಂದರು. ವಿದ್ಯಾರ್ಥಿಗಳು ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಓದಿನ ಸಮಯದಲ್ಲಿ ಓದಿಗೆ ಗರಿಷ್ಠ ಆದ್ಯತೆ ನೀಡಬೇಕು ಎಂದು ಹಲವು ದೃಷ್ಟಾಂತಗಳ ಮೂಲಕ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಉಪಪ್ರಾಚಾರ್ಯ ಎಸ್.ಆರ್. ಗದಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್.ಎಂ.ಮಗದುಮ್, ಹಿರಿಯ ಶಿಕ್ಷಕ ಪಿ.ಎಸ್.ನಿಡೋಣಿ, ಎ ಆರ್ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪತ್‌ಕುಮಾರ ಪಾಟೀಲ, ಉಷಾ ರಾಠೋಡ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಲ್ಕಾ ಪಾಟೀಲ ಸ್ವಾಗತಿಸಿದರು. ಕೆ.ಆರ್.ಪಟ್ಟಣ ಪರಿಚಯಿಸಿದರು. ಸಿ.ಎಂ.ಪಾಗಾದ ನಿರೂಪಿಸಿದರು. ಎಸ್.ಕೆ.ದೇಸಾಯಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ