Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಡಾ.ಪರಿಮಳ ಜಗ್ಗೇಶ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖ್ಯಾತ ನಟ ಜಗ್ಗೇಶ್​ ಅವರ ಧರ್ಮಪತ್ನಿ, ಹೆಸರಾಂತ ಆಹಾರ ತಜ್ಞೆ ಡಾ. ಪರಿಮಳ ಜಗ್ಗೇಶ್ ಅವರು ಬೆಳ್ಳಿ ಪದಕ ಪಡೆಯುವ ಮೂಲಕ ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ ಎಂಬುದನ್ನು ಅಕ್ಷರಶಃ ಸಾಬೀತುಪಡಿಸಿದ್ದಾರೆ.

ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಕನ್ನಡಿಗರ ಹೆಮ್ಮೆಯ ಸಾಧಕಿಯಾಗಿ ಡಾ.ಪರಿಮಳ ಜಗ್ಗೇಶ್ ಹೊರಹೊಮ್ಮಿದ್ದಾರೆ.



ಅದ್ಭುತ ಸಾಧನೆ:
ಬೆಂಗಳೂರಿನ
'ಸ್ಪೋಟ್ಸ್​​ ಅಥಾರಿಟಿ ಆಫ್​ ಇಂಡಿಯಾ' ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರೈಫಲ್​ ಅಸೋಸಿಯೇಷನ್​ ವತಿಯಿಂದ ಆಯೋಜಿಸಲಾಗಿದ್ದ " ನಾಗರಾಜ ರಾವ್​ ಜಗದಾಳೆ 3ನೇ ಶೂಟಿಂಗ್​ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್​​ - 2026" ರಲ್ಲಿ ಪರಿಮಳ ಅವರು ಪಾಲ್ಗೊಂಡಿದ್ದರು.

ವಿಭಾಗ: 10 ಮೀಟರ್ ಏರ್ ಪಿಸ್ತೂಲ್ ಚಾಂಪಿಯನ್‌ಶಿಪ್.
ಸಾಧನೆ: ಮಾಸ್ಟರ್ ವುಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಅಮೋಘ ಸ್ಕೋರ್ ಮಾಡುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಮಧುಮೇಹ ಮೆಟ್ಟಿ ನಿಂತ ಮನೋಬಲ:
1994ರಿಂದಲೂ ಮಧುಮೇಹದಿಂದ ಬಳಲುತ್ತಿರುವ ಡಾ. ಪರಿಮಳ ಜಗ್ಗೇಶ್ ಅವರಿಗೆ ಕ್ರೀಡಾ ಲೋಕಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್ ಎನ್ನುವುದು ಅತ್ಯಂತ ಏಕಾಗ್ರತೆ ಮತ್ತು ದೈಹಿಕ ಸ್ಥಿರತೆ ಬೇಡುವ ಕ್ರೀಡೆ. ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ.
ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ
'ರಿಕವರಿ ಪ್ಲಾನ್' ರೂಪಿಸಿಕೊಂಡು ಅಭ್ಯಾಸ ನಡೆಸಿದ್ದರು.


ಶಿಸ್ತು ಬದ್ಧ ತರಬೇತಿ:
ಗೋಲ್ಡನ್​ ಏಸ್ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಪ್ರಸಿದ್ಧ ಕೋಚ್ ಸಂತೋಷ್ ಬಿ.ಎನ್. ಅವರಿಂದ ಡಾ.ಪರಿಮಳ ಜಗ್ಗೇಶ್ ಅವರು ಕೇವಲ ಕೆಲವೇ ತಿಂಗಳುಗಳ ಹಿಂದೆ ತರಬೇತಿ ಆರಂಭಿಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ
, ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮವೇ ಪದಕದ ರೂಪದಲ್ಲಿ ಫಲ ನೀಡಿದೆ.

ಅದಮ್ಯ ಚೇತನ:
ಡಾ. ಪರಿಮಳ ಜಗ್ಗೇಶ್ ಅವರ ಶೈಕ್ಷಣಿಕ ಹಾದಿ ಪ್ರತಿಯೊಬ್ಬ ಮಹಿಳೆಗೂ ಒಂದು ಪಾಠ. ಮದುವೆಯಾದಾಗ
10ನೇ ತರಗತಿಯಲ್ಲಿದ್ದ ಅವರು, ಸಂಸಾರದ ನಡುವೆಯೇ ಗಳಿಸಿದ ಪದವಿಗಳು ಹಲವು.

ಸರ್ಟಿಫೈಡ್ ಕೋಚ್:
ಮಕ್ಕಳು ಜನಿಸಿದ ಮೇಲೂ ಓದು ಮುಂದುವರೆಸಿ ಅಂತಾರಾಷ್ಟ್ರೀಯ ಕೋಚಿಂಗ್ ಫೆಡರೇಶನ್ ಸರ್ಟಿಫೈಡ್ ಕೋಚ್ ಆಗಿ ಡಾ.ಪರಿಮಳ ಹೊರಹೊಮ್ಮಿದ್ದರು.

ಅಂತಾರಾಷ್ಟ್ರೀಯ ಮಾನ್ಯತೆ:
ಅಮೆರಿಕನ್ ಕೌನ್ಸಿಲ್ ಆನ್ ಎಕ್ಸರ್ಸೈಸ್ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ಮೆಡಿಸಿನ್ ನಿಂದ ತೂಕ ನಿರ್ವಹಣೆ ತಜ್ಞೆಯಾಗಿ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ.

ಸೈಕಾಲಜಿ ತಜ್ಞೆ:
ಡಾ.ಪರಿಮಳ ಅವರು ಪ್ರಮಾಣೀಕೃತ 'ಪಾಸಿಟಿವ್ ಸೈಕಾಲಜಿ ಕೋಚ್' ಕೂಡ ಹೌದು. 
ಡಾಕ್ಟರೇಟ್ ಪದವಿ:

ಮಧುಮೇಹ ನಿಯಂತ್ರಣದ ಕುರಿತಾದ ಅವರ ಸುದೀರ್ಘ ಸಂಶೋಧನೆಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಯಶಸ್ವಿ ಉದ್ಯಮಿ:
ಪ್ರಸ್ತುತ ಅವರು 'Alamirap Nutrition & G.L.A.M' ಎಂಬ ಸಂಸ್ಥೆಯ ಮೂಲಕ ಡಾ.ಪರಿಮಳ ಜಗ್ಗೇಶ್ ಅವರು ಜನರ ಜೀವನ ಶೈಲಿ ಬದಲಿಸುವ ಕಾರ್ಯ ಮಾಡುತ್ತಿದ್ದಾರೆ.

ಟಾರ್ಗೆಟ್ ಶೂಟಿಂಗ್ ನನಗೆ ಕೇವಲ ಗುರಿ ಹೊಡೆಯುವುದನ್ನು ಮಾತ್ರವಲ್ಲ, ಒತ್ತಡದ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಡುವುದು ಮತ್ತು ಶಿಸ್ತಿನ ಬದುಕು ಅಳವಡಿಸಿಕೊಳ್ಳುವುದನ್ನು ಕಲಿಸಿದೆ ಎಂದು ಡಾ. ಪರಿಮಳ ಜಗ್ಗೇಶ್ ಹೆಮ್ಮೆಯಿಂದ ತಿಳಿಸಿದ್ದಾರೆ.


ಪತ್ನಿ ಡಾ.ಪರಿಮಳ ಕುರಿತು ನಟ, ರಾಜ್ಯಸಭೆ ಸದಸ್ಯ ಜಗ್ಗೆ ಜಗ್ಗೇಶ್ ತನ್ನ​ ಫೇಸ್​ ಬುಕ್​ ಪೋಸ್ಟ್​ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ:
''ಪರಿಮಳ - ನಾನು ಬದುಕಲ್ಲಿ ಆಯ್ಕೆ ಮಾಡಿಕೊಂಡ ಶ್ರೇಷ್ಠ ವ್ಯಕ್ತಿತ್ವದ ಛಲಗಾತಿ. ಆಕೆ ಚಿಂತನೆ ಸದಾ ಆಶಾದಾಯಕ.

SSLC ಓದುವಾಗ ನಮ್ಮ ಮದುವೆಯಾಯಿತು. ಆಗ ನಾನು ತಂದೆಯಿಂದ ದೂರವಾಗಿ ಸಾಮಾನ್ಯರಲ್ಲಿ ಸಾಮಾನ್ಯ ಜೀವಿ, ಒಂದು ದಿನದ ಸಣ್ಣ ಪಾತ್ರಕ್ಕೆ ಅಲೆಯುತ್ತಿದ್ದ ದಿನಗಳು..!!


ಆಗ ಅವಳ ಬೇಡಿಕೆ, ದಯವಿಟ್ಟು ನನ್ನ ಓದಿಸು ಎಂದು, ಅದಕ್ಕೆ ನಾನು ಒಪ್ಪಿ EASTWEST COLLEGEಗೆ ಸೇರಿಸಿದೆ, PUCಯಲ್ಲಿ RANK ನಂತರ BMSನಲ್ಲಿ BE ARC ನಂತರ Computer Diploma ನಂತರ Medical Transcription ನಂತರ Diet Company. Modijiಯವರ ಉತ್ತೇಜನ ಪ್ರಯುಕ್ತ ಶ್ರೀ ಅನ್ನ ಆಹಾರ ಪದ್ಧತಿಯ ಬಗ್ಗೆ ಪುಸ್ತಕ ಬರವಣಿಗೆ. ಇತ್ತೀಚೆಗೆ ಅಂದರೆ 57ನೇ ವಯಸ್ಸಿನಲ್ಲಿ ಹೊಸ ಪ್ರಯತ್ನ. Shooting Academy ಸೇರ್ಪಡೆಗೊಂಡು ಇಂದು State Shootingನಲ್ಲಿ Silver Medal.

ಇದನ್ನ ಉಲ್ಲೇಕಿಸಲು ಕಾರಣ, ಮನುಷ್ಯರಾಗಿ ನಾವು ಹುಟ್ಟಿದ್ದೇ ಜಗತ್ತು ಗೆಲ್ಲಲು ವಿನಹಃ, ಏನು ಆಗದು ನನ್ನಿಂದ ಎಂದು ಕಾರಣ ಹೇಳಿ ಆಯುಷ್ಯ ಮುಗಿಸಿ ಹೋಗಲು ಅಲ್ಲಾ ..!!

ಪರಿಮಳನ ಪ್ರತಿಭೆ ಪ್ರಯತ್ನದಂತೆ ನನ್ನ ಎಲ್ಲಾ ನಲ್ಮೆಯ ಹೆಣ್ಣು ಕುಲ ಯತ್ನಿಸಿ, ನೀವು ಹೆಣ್ಣಾಗಿ ಹುಟ್ಟಿದರೆ ಅದು ನಿಮ್ಮ ಅದೃಷ್ಟ ಹಾಗು ದೇವರ ಕೃಪೆಯಿಂದ ಎಂದು ಸಂತೋಷಪಡಿ.

ಗಂಡ ಮಕ್ಕಳು ಸಂಸಾರ ಸರಿಯಾಗಿ ತೂಗಿಸಿ ಜೊತೆ ಜೊತೆಗೆ ಸಾಧಕರಾಗಿ ಎಂಬುದು ನನ್ನ ಹಾರೈಕೆ ಆಶಯ. ಗಂಡನಾಗಿ ಮಡದಿ ಪರಿಮಳನಿಗೆ ಹೃದಯಪೂರ್ವಕ ಶುಭಕಾಮನೆಗಳು'' ಎಂದು ಪತಿ ಜಗ್ಗೇಶ್ ಅವರು ಫೇಸ್​ಬುಕ್ ಪೋಸ್ಟ್​ ಮಾಡಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ