Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಗಲಿದ ಅಜಿತ ಪವಾರಗೆ ಡಾ.ಪ್ರಭಾಕರ ಕೋರೆ ಅಶ್ರುತರ್ಪಣ


ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರ ಅವರು ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿರುವ ಸುದ್ದಿಯು ಆಘಾತವನ್ನುಂಟು ಮಾಡಿದೆ. ಬಾರಾಮತಿ ಕ್ಷೇತ್ರದ ಜನಪ್ರಿಯ ನಾಯಕರಾಗಿ ರಾಜ್ಯದ ಡಿಸಿಎಂ ಹುದ್ದೆಯಲ್ಲಿ ಜನಸೇವೆಗೆ ತೊಡಗಿದ್ದ ಅವರ ನಿಧನ ಮಹಾರಾಷ್ಟಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ದುಃಖ ವ್ಯಕ್ತಪಡಿಸಿದ್ದಾರೆ.




ಒಬ್ಬ ಡೈನಾಮಿಕ ರಾಜಕೀಯ ಮುಖಂಡರಾಗಿ ಹಲವಾರು ದಶಕಗಳಿಂದ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸೇವೆಗೆ ತೊಡಗಿದ್ದರು. ಜನಾನುರಾಗಿಯಾಗಿದ್ದ ಅವರು ರೈತರ ಹಾಗೂ ದೀನದಲಿತರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ಪಾರದರ್ಶಕ ವ್ಯಕ್ತಿತ್ವದ ಅಜಿತ ಪವಾರ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿದ್ದರು. ಮಹಾರಾಷ್ಟ್ರ ರಾಜ್ಯದ ಅಭಿವೃದ್ಧಿಯಲ್ಲಿ ಮೌಲಿಕ ಯೋಗದಾನ ನೀಡಿದ್ದರು.
ವಿಶೇಷವಾಗಿ ಹಣಕಾಸು, ನೀರಾವರಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅವರ ಕಾರ್ಯಕ್ಷಮತೆ ಗಮನಾರ್ಹವಾಗಿತ್ತು. ರೈತ ಸಮಸ್ಯೆಗಳು, ನೀರಿನ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಅವರು ತೆಗೆದುಕೊಂಡ ಕ್ರಮಗಳು ಚರ್ಚೆಗೆ ಒಳಗಾಗಿದ್ದವು. ಕೆಲವೊಮ್ಮೆ ಅವರ ನಿರ್ಧಾರಗಳು ವಿವಾದಗಳಿಗೆ ಕಾರಣವಾದರೂ, ಬಲವಾದ ನಾಯಕತ್ವ ಗುಣದಿಂದ ಎಲ್ಲವನ್ನೂ ನಿಭಾಯಿಸಿದ್ದರು. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ರಾಜಕೀಯ ಪರಂಪರೆಯನ್ನು ಮುಂದುವರೆಸಿದ ನಾಯಕನಾಗಿಯೂ ಪರಿಗಣಿಸಲ್ಪಟ್ಟಿದ್ದರು. ಮಹಾರಾಷ್ಟ್ರದ ರಾಜಕೀಯ ಸ್ಥಿತಿಗತಿಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು,
ಕಳೆದ ಡಿಸೆಂಬರದಲ್ಲಿ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದನ್ನು ನೆನೆಪಿಸಿಕೊಂಡ ಡಾ.ಕೋರೆಯವರು, ಪವಾರ ಕುಟುಂಬದೊಂದಿಗೆ ನನ್ನದು ಆತ್ಮೀಯ ಒಡನಾಟ ಹಾಗೂ ಗರಿಷ್ಠ ಸಂಬಂಧವಿದೆ. ಸಹೋದರ ಸಮಾನನಾಗಿದ್ದ ಅಜಿತ ಪವಾರ  ಒಬ್ಬ ಸರ್ವೋತ್ತಮ ನಾಯಕನಾಗಿದ್ದ, ಹೃದಯವಂತ ನಾಯಕನನ್ನು ಸಮಾಜವು ಬಹುಬೇಗನೆ ಕಳೆದುಕೊಳ್ಳುವಂತಾಯಿತು. ಮಹಾರಾಷ್ಟçದಲ್ಲಿ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಅಜಿತ ಪವಾರ ಹಾಗೂ ಶರದ ಪವಾರ ಕುಟುಂಬದವರು ಬಹಳಷ್ಟು ಸಹಾಯ ಸಹಕಾರ ನೀಡಿದ್ದನ್ನು ಮರೆಯುವಂತಿಲ್ಲ. ಅಂತೆಯೇ ಶರದ ಪವಾರ ಹಾಗೂ ಅಜಿತ ಪವಾರ ಅವರು ಬಾರಾಮತಿಯಲ್ಲಿ ಕೃಷಿಕ್ಷೇತ್ರದಲ್ಲಿ ಮಾಡಿರುವ ಸಾಧನೆಯು ನನ್ನ ಮೇಲೆ ಅತೀಯಾದ ಪ್ರಭಾವ ಬೀರಿತು. ಅಂತೆಯೆ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಸ್ಥಾಪನೆಯಲ್ಲಿ ಪವಾರ ಕುಟುಂಬದ ಕೊಡುಗೆ ಬಹುದೊಡ್ಡದು. ಕೆಲಸದ ವಿಷಯದಲ್ಲಿ ಅವರದು ಕೇವಲ ಆಶ್ವಾಸನೆಯಾಗಿರಲಿಲ್ಲ, ಅದನ್ನು ತಕ್ಷಣ ಕೃತಿಯಲ್ಲಿ ತರುತ್ತಿದ್ದರು. ಅವರೊಬ್ಬ ನೇರವಾದಿ ಮತ್ತು ಸ್ಪಷ್ಟವಾದಿಯಾಗಿದ್ದರು.  ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಕರುಣಿಸಲೆಂದು ಪ್ರಾರ್ಥಿಸುತ್ತೇನೆಂದು ಡಾ.ಕೋರೆಯವರು ಕಂಬನಿ ಮಿಡಿಸಿದ್ದಾರೆ.




Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ