E-PAPER
16 Nov 2026, 02:19:39 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಒಳಪಂಗಡಗಳ  ಜಗಳ ಬಿಟ್ಟು ಲಿಂಗಾಯಿತರೆಲ್ಲ  ಒಂದಾಗಬೇಕು: ಡಾ.ಎಸ್.ಎಂ.ಜಾಮದಾರ

[caption id="attachment_3439" align="alignnone" width="300"] Oplus_131072[/caption]

[caption id="attachment_3440" align="alignnone" width="300"] oplus_0[/caption]

ಬೆಳಗಾವಿ;  ಒಳಪಂಗಡಗಳ  ಜಗಳ ಬಿಟ್ಟು ಲಿಂಗಾಯಿತರೆಲ್ಲ ಒಂದಾಗಬೇಕು ಮತ್ತು ಲಿಂಗಾಯಿತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹಿಮ್ಮೆಟ್ಟಿಸಬೇಕು ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ.ಜಾಮದಾರ  ಹೇಳಿದರು.

ಅವರಿಂದು ಜಾಗತಿಕ ಲಿಂಗಾಯಿತ ಮಹಾಸಭಾ, ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯಿತ ಸಂಘಟನೆ ಮತ್ತು  ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ "ವಚನದರ್ಶನ ಮಿಥ್ಯ VS ಸತ್ಯ" ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಲಿಂಗಾಯಿತರನ್ನು ವೈದಿಕ ಶೈವರೆಂದು ಬಿಂಬಿಸುವ ಪ್ರಯತ್ನ ನಡೆದಿದೆ, ಲಿಂಗಾಯತ ತತ್ವಗಳಿಗೆ ವಿರೋಧವಾದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ, ಬಸವಾದಿ ಶರಣರ ಮತ್ತು ವಚನ ಸಾಹಿತ್ಯದ ಕುರಿತು ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು. ಉಪಜಾತಿ, ಒಳಪಂಗಡಗಳ ರಾಜಕಾರಣದಿಂದಾಗಿ ಲಿಂಗಾಯಿತರೆಲ್ಲ ದಿಕ್ಕಾ ಪಾಲಾಗಿದ್ದಾರೆ ಅವರನ್ನೆಲ್ಲ ಒಗ್ಗೂಡಿಸುವ ಕಾರ್ಯ ನಡೆಯಬೇಕಿದೆ. ಎಲ್ಲ ಮಠಗಳಲ್ಲಿ ಹರಿದು ಹಂಚಿ ಹೋಗಿರುವ ಲಿಂಗಾಯಿತರನ್ನೆಲ್ಲಾ ಒಗ್ಗೂಡಿಸಬೇಕಿದೆ ಎಂದವರು ಕರೆ ನೀಡಿದರು.
ರಾಜಕಾರಣಿಗಳ ಬೆನ್ನು ಹತ್ತಿ  ಹಾಳಾಗಿದ್ದೆ ಹೆಚ್ಚು ಅವರಿಂದ ಲಿಂಗಾಯತ ಸಮಾಜಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ರಾಜ್ಯದಲ್ಲಿ ಲಿಂಗಾಯಿತರ ಸಂಖ್ಯೆ 1.35 ಕೋಟಿ ಅದರ ಬದಲಾಗಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ, ಮಹಾರಾಷ್ಟ್ರದಲ್ಲಿ  1.25 ಕೋಟಿ ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೋಟ್ಯಾಂತರ ಲಿಂಗಾಯಿತರು ಇದ್ದಾರೆ. ಮತ ಗಳಿಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಲಿಂಗಾಯಿತ ಸಮಾಜ ಛಿದ್ರ ಛಿದ್ರಗೊಂಡಿದೆ, ವಚನಗಳನ್ನು ಭಾರತದ ಪರಂಪರೆಗೆ ವಿರುದ್ಧವೆಂದು ಬಿಂಬಿಸುವ ಪ್ರಯತ್ನ ನಡೆಯಿತು. ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ಲಿಂಗಾಯಿತರಿಗೆ ಬೇರೆಯವರು ರಾಷ್ಟ್ರೀಯತೆಯನ್ನು ಕಲಿಸುವ ಅಗತ್ಯ ಇಲ್ಲ. ಲಿಂಗಾಯಿತ ಮಠಗಳು ಮತ್ತು ಲಿಂಗಾಯಿತ ಸಂಸ್ಥೆಗಳು ಮಾಡಿದ ಶಿಕ್ಷಣ ದಾಸೋಹದಿಂದಾಗಿ ಇಂದು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸುಶಿಕ್ಷಿತರು ಯಾರಾದರೂ ಇದ್ದರೆ ಅದು ಲಿಂಗಾಯಿತರು ಮಾತ್ರ ಎಂದವರು ಹೇಳಿದರು.
ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು, ಲಿಂಗಾಯಿತರು ಈ ನಾಡಿಗೆ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳಬೇಕು, ಅನುಭವ ಮಂಟಪವೇ ಇರಲಿಲ್ಲ ಎಂದವರಿಗೆ ಬಹಳ ಹಿಂದೆಯೇ ಉತ್ತರ ಕೊಟ್ಟು ಆಗಿದೆ ಲಿಂಗಾಯಿತರ ವಿರುದ್ಧ, ಲಿಂಗಾಯಿತ ಧರ್ಮದ ವಿರುದ್ಧ , ವಚನ ಸಾಹಿತ್ಯದ ವಿರುದ್ಧ ಬಸವಣ್ಣನವರ ವಿರುದ್ಧ  ಮಾಡಲಾಗುತ್ತಿರುವ ಸುಳ್ಳುಗಳ ಪ್ರಚಾರ ನಿಲ್ಲಬೇಕು ಎಂದವರು ಎಚ್ಚರಿಕೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ವಚನ ಟಿವಿ ಪ್ರಧಾನ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಮಾತನಾಡಿ ಕೆಲವರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸಿ ಜಾಗತಿಕ ಲಿಂಗಾಯತ ಮಹಾಸಭೆಯ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಬದಲಾದ ವಾತಾವರಣಕ್ಕೆ ತಕ್ಕಂತೆ ನಾವು ಕೂಡ ಸಾಮಾಜಿಕ ಜಾಲತಾಣದ ಮೂಲಕ , ಡಿಜಿಟಲ್ ಮಾಧ್ಯಮದ ಮೂಲಕ ಸತ್ಯವನ್ನು ತಿಳಿಸುವ ಕಾರ್ಯ ಮಾಡಬೇಕು,  ವಿಚರಸಂಕಿರಣಗಳು,  ಚರ್ಚೆಗಳು ನಡೆಯುವಂತಾಗಬೇಕು ಅಧಿಕಾರಕ್ಕೆ ಬೆನ್ನು ಹತ್ತದೆ ಈ ಕಾರ್ಯ ಕೈಗೊಳ್ಳುವಂತಾಗಬೇಕು. ಇಷ್ಟ ಲಿಂಗದ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಸಬೇಕು. ಲಿಂಗವನ್ನು ಧರಿಸಿಕೊಳ್ಳಲು ಅದಕ್ಕಿರುವ ನಿಯಮಗಳನ್ನು ಸಡಿಲಿಸಿ ಸರಳೀಕರಣ ಗೊಳಿಸುವಂತಹ ಕಾರ್ಯಕ್ರಮ ಆಗಬೇಕು  ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಜಗದ್ಗುರು.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು  "ವಚನದರ್ಶನ ನಿತ್ಯ VS ಸತ್ಯ" ಗ್ರಂಥ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ವಚನದರ್ಶನ ಗ್ರಂಥದಲ್ಲಿ ಬಸವಾದಿ ಶಿವಶರಣರ ಆಶಯಕ್ಕೆ  ವಿರುದ್ಧವಾದ ವಿಚಾರವನ್ನು ಮುದ್ರಿಸಿ, ಪ್ರಚಾರ ಮಾಡಲಾಗಿದೆ, ಜಾತಿ ವ್ಯವಸ್ಥೆಯನ್ನು ಮುಂದುವರಿಸುವ ಪ್ರಯತ್ನ ಮಾಡಲಾಗಿದೆ, ಪುನ: ಪುರೋಹಿತಶಾಹಿ ವ್ಯವಸ್ಥೆಯನ್ನ ಜಾರಿಗೆ ತರುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ವೈದಿಕ ವಿಚಾರಧಾರೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಿದ ವಿಚಾರಧಾರೆಯೇ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ, ತನ್ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಅದಕ್ಕೆ ನಾವು   ವಚನ ದರ್ಶನದಲ್ಲಿ ಇರುವ ದೋಷಗಳನ್ನು ಜನಕ್ಕೆ ತಿಳಿಸುವ ಕಾರ್ಯ ಮಾಡಬೇಕಿದೆ ಅದರ ಅಂಗವಾಗಿಯೇ ಇಂದು ವಚನದರ್ಶನ ಮಿಥ್ಯ ಸತ್ಯ ಗ್ರಂಥವನ್ನು ಲೋಕಾರ್ಪಣೆ ಗೊಳಿಸಲಾಗಿದೆ ಅದರ ಮೂಲಕ ಸತ್ಯವನ್ನು ಸಾಮಾನ್ಯ ಜನತೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.
 ಹಂದಿಗುಂದ ಸಿದ್ದೇಶ್ವರ ಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ವಚನದರ್ಶನ ಗ್ರಂಥವೇ ಮಿಥ್ಯ, ಬಸವಣ್ಣನವರ ಲಿಂಗಾಯಿತ ಧರ್ಮವೇ ಸತ್ಯ ಈ ಕುರಿತು ಜನರಿಗೆ ತಿಳಿಸುವ ಕಾರ್ಯವಾಗಬೇಕು, ನಾವು ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಕಷ್ಟ ತಪ್ಪಿದ್ದಲ್ಲ , ಶರಣ ಪರಂಪರೆಯ ಮಠದ ವಾರಸುದಾರರು ವಿಭೂತಿ ಬಿಟ್ಟು ಹಣೆಗೆ ಕುಂಕುಮ ಹಚ್ಚಿಕೊಂಡು ಓಡಾಡುತ್ತಿದ್ದಾರೆ ಇದು ಅತ್ಯಂತ ನೋವಿನ ಸಂಗತಿ ಎಂದ ಅವರು ಗುರು ವಿರಕ್ತರು ಒಂದಾಗಬೇಕು ಎಂದರೆ ಅದು ಹೇಗೆ ಸಾಧ್ಯ ಅವರು ಏನು ಹೇಳುತ್ತಾರೋ ಹೇಳಲಿ ನಮ್ಮ ವಿಚಾರವನ್ನು ನಾವು ಸ್ಪಷ್ಟಪಡಿಸುವುದು ಮುಖ್ಯ ಎಂದ ನುಡಿದ ಅವರು ಇತ್ತೀಚಿಗೆ ಶಂಕರ್ ಬಿದರಿ ಅವರು ನೀಡಲಾದ ಹೇಳಿಕೆ ಉಲ್ಲೇಖಿಸಿ ನೀವು ವೀರಶೈವರೋ- ಲಿಂಗಾಯಿತರೋ ಸ್ಪಷ್ಟವಾಗಿ ಹೇಳಿ ವೀರಶೈವರಾದರೆ ಅಲ್ಲಿಯೇ ಇರಿ ಲಿಂಗಾಯಿತರಾದರೆ ಇಲ್ಲಿಗೆ ಬನ್ನಿ ಎರಡನ್ನು ಏಕ ಕಾಲಕ್ಕೆ ಹೇಳಬೇಡಿ ಎಂದವರು ಸಲಹೆ ನೀಡಿದರು.
 ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಷಟಸ್ಥಲ ಧ್ವಜಾರೋಹಣ  ನೆರವೇರಿಸಿದರು.
ಲಿಂಗಾಯಿತ ಮಹಾಸಭೆಯ ಜಿಲ್ಲಾ ಅಧ್ಯಕ್ಷ  ಬಸವರಾಜ ರೊಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಪ್ರೊ. ಕೆ.ಎಸ್. ಕೌಜಲಗಿ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು. ರಾಷ್ಟ್ರೀಯ ಬಸವದಳ ಬೆಳಗಾವಿ ಅಧ್ಯಕ್ಷ ಅಶೋಕ್ ಬೆಂಡಿಗೇರಿ, ಬೆಳಗಾವಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇವಣ್ಣವರ, ಲಿಂಗಾಯತ ಮಹಾಸಭೆಯ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ ಗುಡಿಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಿಂಗಾಯತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಸ್ವಾಗತಿಸಿದರು. ಪ್ರೊ.ಮಂಜುನಾಥ ಶರಣಪ್ಪನವರ ಕಾರ್ಯಕ್ರಮವನ್ನು ನಿರ್ವಹಿಸಿದರು. ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ. ಪ್ರೇಮಾ ಅಂಗಡಿ ವಂದಿಸಿದರು. ಶ್ರೀಮತಿ ನೈನಾ ಗಿರಿಗೌಡರ ಮತ್ತು ಸಂಗಡಿಗರಿಂದ ವಚನ ಪ್ರಾರ್ಥನೆ ನಡೆಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ