E-PAPER
16 Nov 2026, 02:20:35 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನ್ನೇರಿ ಶ್ರೀ.ಗಳ ಅನಾಗರಿಕ ವರ್ತನೆ ನೋವಿನ ಸಂಗತಿ: ಡಾ : ತೋಂಟದ ಸಿದ್ಧರಾಮ ಸ್ವಾಮೀಜಿ

ಬೆಳಗಾವಿ: ಇತ್ತೀಚೆಗೆ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಕನ್ನೇರಿ ಕಾಡಸಿದ್ಧೇಶ್ವರ ಮಠದ ಕಾಡಸಿದ್ಧೇಶ್ವರ ಸ್ವಾಮಿಗಳು ನಮ್ಮ ಹೆಸರನ್ನು ಉಲ್ಲೇಖಿಸಿ ಕೆಲವೊಂದು ಆರೋಪಗಳನ್ನು ಮಾಡಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿ ಅವರ ಆರೋಪಕ್ಕೆ ಈ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದ್ದಾರೆ.

‘ಒಬ್ಬ ಸ್ವಾಮಿ’ ಎಂಬ ಏಕವಚನದ ಶಬ್ದದಿಂದ ಪ್ರಾರಂಭವಾಗುವ ಅವರ ಮಾತುಗಳಲ್ಲಿ “ನಾವು ಮರಾಠಿ ಭಾಷೆಯ ಕುರಾನನ್ನು ಕನ್ನಡಕ್ಕೆ ಅನುವಾದಿಸಿ ನಮ್ಮ ಮಠದಿಂದಲೇ ಪ್ರಕಟಿಸಿ ಹಂಚಿರುವುದಾಗಿ ಮತ್ತು ಭಗವದ್ಗೀತೆಯನ್ನು ಬಯ್ದಿರುವುದಾಗಿ ಹೇಳಿರುವುದನ್ನು ಕೇಳಿದೆವು.

ವಾಸ್ತವವಾಗಿ ನಾವು ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ ಸಂತರಾದ ವಿನೋಬಾ ಭಾವೆ ಅವರ “ಇಸ್ಲಾಂ ಧರ್ಮ ಸಂದೇಶ” ಎಂಬ ಹಿಂದೀ ಭಾಷೆಯ ಕೃತಿ. ಅದು ಕುರಾನ ಅಲ್ಲ, ಮರಾಠಿ ಭಾಷೆಯ ಕೃತಿಯೂ ಅಲ್ಲ. ಅದನ್ನು ನಮ್ಮ ಮಠದಿಂದ ನಾವು ಪ್ರಕಟಿಸಿಯೂ ಇಲ್ಲ. ಆದರೂ ಅವರು ಸುಳ್ಳು ಆರೋಪ ಮಾಡಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಈ ಕೃತಿಯನ್ನು ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಗಳನ್ನೂ ಆಹ್ವಾನಿಸಲಾಗಿತ್ತು ಎಂಬುದು ವಾಸ್ತವ ಸಂಗತಿ.ಪದೇ ಪದೇ ಸುಳ್ಳು ಆರೋಪ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ.

ಕನ್ನೇರಿ ಶ್ರೀಗಳು ಇದೇ ಸಂದರ್ಭದಲ್ಲಿ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿಯೂ ತಿಳಿಸಿದ್ದಾರೆ. ನಾವು ಬಯ್ದಿರುವುದಕ್ಕೆ ಅವರಲ್ಲಿ ಏನಾದರೂ ಆಧಾರಗಳಿದ್ದರೆ ತಿಳಿಸಲಿ. ಈ ರೀತಿ ನಿರರ್ಥಕವಾಗಿ ಆರೋಪ ಮಾಡುವುದರ ಉದ್ದೇಶ ಎಂದರೆ ಒಬ್ಬ ವ್ಯಕ್ತಿಯ ಚಾರಿತ್ರ್ಯಹನನ ಮಾಡುವುದು ಮತ್ತು ಒಂದು ಧರ್ಮದವರನ್ನು ವ್ಯಕ್ತಿಯ ವಿರುದ್ಧ ಎತ್ತಿಕಟ್ಟುವ ಮೂಲಕ ದ್ವೇಷವನ್ನು ಹರಡುವುದೇ ಆಗಿದೆ. ಈ ರೀತಿ ಸುಳ್ಳು ಆರೋಪಗಳ ಮೂಲಕ ನಮ್ಮ ಚಾರಿತ್ರ್ಯಹನನಕ್ಕೆ ಅವರು ಪ್ರಯತ್ನಿಸುತ್ತಿರುವುದು ಇದು ಮೂರನೆಯ ಬಾರಿ.

ಜನರು ಇದೆಲ್ಲವನ್ನು ಗಮನಿಸುತ್ತಿದ್ದಾರೆ. “ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಂಡಿರುವ ನಾವು ಯಾವುದೇ ಧರ್ಮ-ದೇವರು ಮತ್ತು ಭಗವದ್ಗೀತೆಯನ್ನು ಎಂದೂ ನಿಂದಿಸಿರುವುದಿಲ್ಲ. ನಿಂದಿಸಿದ್ದೇವೆ ಎಂಬುದು ಕುತ್ಸಿತ ಬುದ್ಧಿಯ ಸುಳ್ಳು ಆರೋಪ.

ಬದಲಾಗಿ ನಾವು ಭಾರತೀಯ ತತ್ತ್ವಶಾಸ್ತ್ರ ಕೃತಿಯಲ್ಲಿ ಡಾ. ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೇವೆ. ಇದೂ ಅಲ್ಲದೆ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿದ್ದೇವೆ.

ಇಷ್ಟಾದರೂ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿ ಕನ್ನೇರಿ ಶ್ರೀಗಳು ಹೇಳಿರುವುದರ ಉದ್ದೇಶವೇನು? ಪದೇ ಪದೇ ಇಂಥ ಆಧಾರರಹಿತ ಆರೋಪ ಮಾಡುವ ಮತ್ತು ಅನಾಗರಿಕ ಭಾಷೆಯಲ್ಲಿ ಎಲ್ಲ ಸ್ವಾಮಿಗಳನ್ನು ಸಾಮೂಹಿಕವಾಗಿ ನಿಂದಿಸುವ ಮೂಲಕ ಅವರು ಏನು ಸಾಧಿಸಲಿದ್ದಾರೆ ಎಂಬುದು ಅರ್ಥವಾಗದ ಮಾತು.

ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕನ್ನೇರಿ ಶ್ರೀಗಳು ಸಮಾಜದಲ್ಲಿ ಅಶಾಂತಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕನ್ನೇರಿ ಶ್ರೀಗಳಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈಗಾಗಲೇ ಛೀಮಾರಿ ಹಾಕಿವೆ. ಅವರಾಡುವ ಮಾತುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಹಿತ ಪದೇ ಪದೇ ಅನಾಗರಿಕರಂತೆ ಅವರು ವರ್ತಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದು ಶ್ರೀಗಳು ವಿಷಾದಿಸಿದ್ದಾರೆ.

ಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ.
ಅವರು ಮಾಡಿದ ಸುಳ್ಳು ಆರೋಪಗಳನ್ನೇ ಜನರು ನಿಜವೆಂದು ಭಾವಿಸಬಾರದು ಎಂಬ ಕಾರಣಕ್ಕೆ ಮತ್ತು ಶ್ರೀಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ