E-PAPER
16 Nov 2026, 02:20:22 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬ್ರಹ್ಮನ ಪ್ರಪಂಚಕ್ಕಿಂತ ಕವಿಯ ಕವನ ಶ್ರೇಷ್ಠ ; ಡಾ. ತೋಂಟದ ಸಿದ್ದರಾಮ ಶ್ರೀಗಳು

ಬೆಳಗಾವಿ; ಬ್ರಹ್ಮನ ನಿರ್ಮಾಣದ ಪ್ರಪಂಚಕ್ಕಿಂತ ಕವಿಯ ನಿರ್ಮಾಣದ ಕವನ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ದರಾಮ ಶ್ರೀಗಳು ನುಡಿದರು.

ಅವರು ಬೆಳಗಾವಿಯಲ್ಲಿ ಡಾ ಶಿವಾನಂದ ಮೂಲಿಮನಿ ಅವರ "ಮಿಂಚು" ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಸೀಮೆ ಇಲ್ಲದ ಪ್ರಪಂಚ ಎಂದರೆ ಅದು ಕಾವ್ಯ ಪ್ರಪಂಚ ಅದು ಅಪಾರವಾದದ್ದು ತನಗೆ ಬೇಕಾದಂತೆ ಕಾವ್ಯ ಸೃಷ್ಟಿ ಮಾಡುವ ಸ್ವಾತಂತ್ರ್ಯ ಕವಿಗಳಿಗೆ ಇದೆ ಡಾ.ಶಿವಾನಂದ ಮೂಲಿಮನಿಯವರು ಹೃದಯದ ಭಾವನೆಗಳನ್ನು ಮಿಂಚುಗಳ ಮೂಲಕ ಬೆಳಕಾಗಿಸಿದವರು, ಹೃದಯದ ಭಾವನೆಗಳಿಗೆ ಅಭಿವ್ಯಕ್ತಿ ನೀಡಿ ಕವನಗಳನ್ನಾಗಿಸಿದವರು.
ಕವಿ ಬ್ರಹ್ಮನಿದ್ದಂತೆ ಬ್ರಹ್ಮನಿಗಿಂತ ಕವಿ ಶ್ರೇಷ್ಠ ಎಂದವರು ಹೇಳಿದರು.

ಭೌತಿಕ ಪ್ರಪಂಚದಲ್ಲಿ ಆರು ರಸಗಳಿದ್ದರೆ ಕವಿಯ ಪ್ರಪಂಚದಲ್ಲಿ ನವರಸಗಳಿವೆ. ಇದರಿಂದ ಕಾವ್ಯ ಪ್ರಪಂಚ ಸಮೃದ್ಧಗೊಂಡಿದೆ ಅದಕ್ಕೆಂದೆ ಕಾವ್ಯ ಪ್ರಪಂಚಕ್ಕೆ ಮಹತ್ವ ಕಾವ್ಯ ದುಃಖದಲ್ಲೂ ಕೂಡ ಓದುವ ಸುಖವನ್ನು ಕೊಡುವಂತಹದ್ದು ಅದಕ್ಕೆಂದೇ ಹೇಳುತ್ತಾರೆ ರವಿ ಕಾಣದನ್ನು ಕವಿ ಕಾಣುತ್ತಾನೆಂದು ಕವನಗಳ ಮೂಲಕ ಆನಂದ ಹೊಂದಬಹುದು ಮಾರ್ಗದರ್ಶನ ಮಾಡುವ ಕಾರ್ಯವನ್ನು ಕವನಗಳು ಮಾಡುತ್ತವೆ 100 ಮೂರ್ಖ ಮಕ್ಕಳಿಗಿಂತ ಒಬ್ಬ ಗುಣವಂತ ಮಗ ಸಾಕು ಎನ್ನುವ ನಾಣ್ನುಡಿಯಂತೆ ನೂರು ಕೃತಿಗಳಿಗಿಂತ ಒಂದು ಅತ್ಯುತ್ತಮ ಕೃತಿ ಮುಖ್ಯ, ಜನಪರ ಕಾಳಜಿಗಾಗಿ ಕಾವ್ಯ ರಚನೆಯಾಗಿದೆ, ಕೇವಲ ಕವಿಯಾಗಲೆಂದು ಬರೆದ ಕೃತಿ ಇದಲ್ಲ ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಿ ಶಬ್ದಗಳ ರೂಪದಲ್ಲಿ ಕವನ ರಚನೆ ಸುಲಭವಲ್ಲ .ದುಃಖದಲ್ಲೂ ಆನಂದ ಭಾಷ್ವ ಬರುವಂಥ ಕವನಗಳ ರಚನೆ ಇದಾಗಿದೆ . ಮೂಲಿಮನಿಯವರ ಕೃತಿಗಳು ಸೀಮಿತ ಅದರಲ್ಲೂ "ಮಿಂಚು" ಬೆಳಗುವ ಚಂದ್ರನಂತೆ ಇದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಮ್ಮುಖದಲ್ಲಿದ್ದ ಬೆಳಗಾವಿಯ ಕಾರಂಜಿ ಮಠದ ಶ್ರೀ.ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ ಮಿಂಚು ಕವನ ಸಂಕಲನದಲ್ಲಿ ಹಿಂದಿನ ಸಾಮಾಜಿಕ ರೀತಿ ನೀತಿ ಶಿಕ್ಷಕರ ರೀತಿ ನೀತಿ ಮತ್ತು ಇಂದಿನವರ ರೀತಿ ನೀತಿಗಳ ಕುರಿತು ಸಾಮಾಜಿಕ ಕಾಳಜಿ ವ್ಯಕ್ತವಾಗಿದೆ ಎಂದರು.
ಕೃತಿ ಪರಿಚಯ ಮಾಡಿದ ನಿವೃತ್ತ ಪ್ರಾಚಾರ್ಯ ಡಾ. ಸಿ.ಕೆ.ನಾಮಲಗಿ ಮತ್ತು ಪ್ರೊಫೆಸರ್ ಕೆ.ಎಸ್. ಕೌಜಲಗಿ ಅವರುಗಳು ಮಾತನಾಡಿ ಹಿಂದಿನ ಕಾಲದ ಶಿಕ್ಷಕರು ರಾಜಕಾರಣಿಗಳನ್ನು ಒಲೈಸುವ ಕಾರ್ಯ ಮಾಡಲಿಲ್ಲ , ಅಧಿಕಾರಿಗಳ ಹಿಂದೆ ತಿರುಗಲಿಲ್ಲ, ನಿಸ್ವಾರ್ಥ ಸೇವೆಯನ್ನು ತಮ್ಮ ಪಾಡಿಗೆ ತಾವು ಮಾಡಿ ಗೌರವಕ್ಕೆ ಪಾತ್ರರಾದರು. ಇಂದು ಅದು ಆಗುತ್ತಿಲ್ಲ ಅತ್ಯಂತ ಕೆಟ್ಟ ರಾಜಕಾರಣ ನಡೆಯುತ್ತಿದೆ ಎಂದರು.
ಕೃತಿಯಲ್ಲಿನ ಕವನಗಳ ವಿಮರ್ಶೆಯನ್ನು ಮಾಡಿದ ಅವರು ಇತ್ತೀಚಿನ ದಿನಗಳಲ್ಲಿನ ಅತ್ಯುತ್ತಮ ಕೃತಿ ಇದಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಎಂ.ಆರ್. ಉಳ್ಳೇಗಡ್ಡಿ ವಹಿಸಿದ್ದರು ಇದೇ ಸಂದರ್ಭದಲ್ಲಿ ಇಬ್ಬರೂ ಶ್ರೀಗಳು ಕೃತಿಯ ಲೇಖಕ ಶಿವಾನಂದ ಮೂಲಿಮನಿ ದಂಪತಿಗಳನ್ನು ಸತ್ಕರಿಸಿದರು. ಶ್ರೀಮತಿ ನೈನಾ ಗಿರಿಗೌಡರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರೊ. ಏ.ಕೆ. ಪಾಟೀಲ್ ನಿರ್ವಹಿಸಿದರು, ಶಿವಾನಂದ ಮೂಲಿಮನಿ ಸ್ವಾಗತಿಸಿದರು, ಮೋಹನ ಗುಂಡ್ಲೂರ್ ಅತಿಥಿಗಳ ಪರಿಚಯ ಮಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ