ಬೆಳಗಾವಿ:ಕರ್ನಾಟಕ ವೆಲ್ಫೇರ್ ಎಜುಕೇಶನ್ ಸೊಸೈಟಿಯ ವತಿಯಿಂದ ದ್ವಿತೀಯ ಪಿಯುಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಪ್ರತಿಶತ 50 ರಷ್ಟು ರಿಯಾಯಿತಿ ಶುಲ್ಕದಲ್ಲಿ ವಾಹನ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ವಾಹನ ತರಬೇತಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಪ್ರತಿಶತ 50ರಷ್ಟು ಹಣವನ್ನು ನಮ್ಮ ಸಂಸ್ಥೆಯ ವತಿಯಿಂದ ಸಂಬಂಧಪಟ್ಟ ಡ್ರೈವಿಂಗ್ ಶಾಲೆಗೆ ನೇರವಾಗಿ ಭರಿಸಲಾಗುತ್ತದೆ ಮತ್ತು ಮತ್ತು ಬಾಕಿ ಉಳಿದ 50 ಪರ್ಸೆಂಟ್ ಹಣವನ್ನು ಸಂಬಂಧಪಟ್ಟ ಡ್ರೈವಿಂಗ್ ಶಾಲೆಗೆ ವಿದ್ಯಾರ್ಥಿಗಳು ನೇರವಾಗಿ ಭರಿಸಬೇಕಾಗುತ್ತದೆ. ಕಾರಣ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ವಾಹನದ ತರಬೇತಿಯ ಲಾಭವನ್ನು ಪಡೆಯಬಹುದು. ಯಶಸ್ವಿಯಾಗಿ ತರಬೇತಿ ಮುಗಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ವಾಹನ ಪರವಾನಿಗೆ ಪತ್ರ ನೀಡಲಾಗುವುದು ಎಂದು ಕರ್ನಾಟಕ ವೆಲ್ಫೇರ್ ಎಜುಕೇಶನ್ ಸೊಸೈಟಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 82962 04234 ಸಂಖ್ಯೆಗೆ ಕರೆ ಮಾಡಬಹುದು.