ಬೆಂಗಳೂರು: ರಂಜಾನ್ ಮಾಸದ ಪ್ರಯುಕ್ತ ರಾಜ್ಯದ ಉರ್ದು ಮಾಧ್ಯಮ ಪ್ರಥಮ ಹಾಗೂ ಪ್ರೌಢ ಶಾಲೆಗಳ ಬೋಧನಾ ಅವಧಿಯನ್ನು ಮಾರ್ಪಡಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಎಲ್ಲ ಮಾದರಿಯ ಶಾಲೆಗಳಿಗೂ ಬೆಳಗ್ಗೆ 10 ರಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಂಜಾನ್ ಮಾಸ ಆರಂಭವಾದ ದಿನದಿಂದ ಒಂದು ತಿಂಗಳ ಕಾಲ ಅಥವಾ ಮಾ.20ರವರೆಗೆ ಉರ್ದು ಶಾಲೆಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 12.45ರವರೆಗೆ ನಡೆಸಲು ಕ್ರಮ ವಹಿಸುವಂತೆ ಜಿಲ್ಲಾ ಡಿಡಿಪಿಐ, ಬಿಇಒಗಳಿಗೆ ಸೂಚಿಸಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.