LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಡಿ, ಬಿಜೆಪಿ ಕಿರುಕುಳ ಆರೋಪ: ಪತ್ರ ಬರೆದಿಟ್ಟು ಉದ್ಯಮಿ ದಂಪತಿ ನೇಣಿಗೆ ಶರಣು

ಭೋಪಾಲ: ತಮಗೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಬಿಜೆಪಿ ನಾಯಕರಿಂದ ಕಿರುಕುಳ ಎದುರಾಗಿದೆ ಎಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ಮಧ್ಯಪ್ರದೇಶದ ಸೇಹೋರ್ ಜಿಲ್ಲೆಯಲ್ಲಿ ಉದ್ಯಮಿ ಮನೋಜ್ ಹಾಗೂ ಪತ್ನಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಡೆತ್‌ನೋಟ್‌ನಲ್ಲಿ 'ನಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡಬೇಡಿ, ಅವರನ್ನು ನೋಡಿಕೊಳ್ಳಿ' ಎಂದು ಮೃತ ದಂಪತಿ ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಜಿತು ಪಟ್ವಾರಿ ಇದು ಆತ್ಮಹತ್ಯೆಯಲ್ಲ, ಸರಕಾರಿ ಪ್ರಾಯೋಜಿತ ಕೊಲೆ ಎಂದು ಎಂದು ಆರೋಪಿಸಿದ್ದಾರೆ. ಮಾಜಿ ಸಿಎಂ ಕಮಲ್‌ನಾಥ್ ಪ್ರತಿಕ್ರಿಯೆ ನೀಡಿ ಭಾರತ್ ಜೋಡೋ ಯಾತ್ರೆ ವೇಳೆ ಮನೋಜ್ ಅವರ ಮಕ್ಕಳು ರಾಹುಲ್‌ಗೆ ಪಿಗ್ಗಿ ಬ್ಯಾಂಕ್ ನೀಡಿದ್ದರು ಎಂದಿದ್ದಾರೆ.

ಆ ಕುಟುಂಬ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿತ್ತು. ಹೀಗಾಗಿಯೇ ಬಿಜೆಪಿ ಅವರಿಗೆ ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆ ಸಂಬಂಧ ಇತ್ತೀಚೆಗಷ್ಟೇ ಇ.ಡಿ. ಮನೋಜ್ ಮನೆ ಮೇಲೆ ದಾಳಿ ನಡೆಸಿತ್ತು. ಘಟನೆ ಬೆನ್ನಲ್ಲೇ ರಾಹುಲ್ ಅವರು ದಂಪತಿಯ 3 ಮಕ್ಕಳೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.

ಇನ್ನು ಮೃತರ ಕುಂಟುಂಬದವರು ದುಃಖದಲ್ಲಿರುವುದರಿಂದ ಸದ್ಯಕ್ಕೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತನಿಖೆ ಪ್ರಗತಿಯಲ್ಲಿರುವುದರಿಂದ ಅವರು ಹೆಚ್ಚಿನ ಮಾಹಿತಿ ತಿಳಿಸಿಲ್ಲ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಗುಡ್ ನ್ಯೂಸ್ .!ಹೊಸದಾಗಿ ತೆಂಗಿನ ಸಸಿ ನಾಟಿ ಮಾಡಿಕೊಳ್ಳುವ ರೈತರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನಬಿ.ಎಸ್ಸಿ. ಪದವಿ ಪಠ್ಯದಲ್ಲಿ ಸಾಹಿತಿ ಡಾ.ಬಿ.ಎಲ್.ವೇಣುರವರ ಕಥೆ ಸೇರ್ಪಡೆ.!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ 05-08-2025.!!ಪುತ್ರದಾ ಏಕಾದಶಿ ದಿನ ದಂಪತಿಗಳು ಹೀಗೆ ಮಾಡಿದರೆ ಸಂತಾನ ಪ್ರಾಪ್ತಿ.!ವಚನ: -ಮನಸಂದ ಮಾರಿತಂದೆ .!'ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲಾತಿ ಬಿಡುಗಡೆ ಮಾಡುತ್ತಾರೆ'- ಪ್ರಿಯಾಂಕ ಖರ್ಗೆಸಾರಿಗೆ ನೌಕರರ ರಜೆ ರದ್ದು ಮಾಡಿ ಸಾರಿಗೆ ಇಲಾಖೆ ಆದೇಶ'ಆ.8ಕ್ಕೆ ರಾಹುಲ್‌ ಗಾಂಧಿ ಪ್ರತಿಭಟನಾ ರ‍್ಯಾಲಿ ಮುಂದೂಡಿಕೆ'- ಡಿಕೆಶಿ71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡದಲ್ಲಿ ‘ಕಂದೀಲು’ ಅತ್ಯುತ್ತಮ ಚಿತ್ರ'ದೇಶದಲ್ಲಿ ಗೊಂದಲ ಸೃಷ್ಟಿಸಲು ಹೊರಟ ಕಾಂಗ್ರೆಸ್ ಪಕ್ಷ'- ವಿಜಯೇಂದ್ರ ಆಕ್ಷೇಪ