Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಅಗಸಗಿ ಅಧ್ಯಕ್ಷರಾಗಿ ಅಮೃತ ಮುದ್ದಣ್ಣವರ ಆಯ್ಕೆ..!

ಅಗಸಗಿ ಅಧ್ಯಕ್ಷರಾಗಿ ಅಮೃತ ಮುದ್ದಣ್ಣವರ ಉಪಾಧ್ಯಕ್ಷರಾಗಿ ಶೋಭಾ ಕುರೇನ್ನವರ ಆಯ್ಕೆ..!

ಬೆಳಗಾವಿ : ಅಗಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಮೃತ ಮುದ್ದಣ್ಣವರ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಕುರೇನ್ನವರ ಅವಿರೋಧವಾಗಿ ಆಯ್ಕೆಯಾದರು.

ಇಂದು(ಬುಧವಾರ ದಿ: 26-7-2023) ಅಗಸಗಿ ಗ್ರಾ ಪಂ ಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ 13 ಸದಸ್ಯರು ಬಲಾಬಲ ಹೊಂದಿರುವ ಅಗಸಗಿ ಪಂಚಾಯಿತಿಯ 9 ಸದಸ್ಯರು ಚುನಾವಣೆಯಲ್ಲಿ ಭಾಗಿಯಾಗಿ ಅಧ್ಯಕ್ಷ ಹುದ್ದೆಗೆ ಅಮೃತ ಮುದ್ದಣ್ಣವರ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಕುರೇನ್ನವರ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಮೊದಲ ಬಾರಿಗೆ ಗೆದ್ದು ಅಧ್ಯಕ್ಷ ಗದ್ದುಗೆ ಏರಿದ ಮುದ್ದಣ್ಣವರ ಕುಡಿ..!

2020 ರಲ್ಲಿ ನಡೆದಿದ್ದ ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಸಾಮಾನ್ಯ ವರ್ಗದಡಿ ಸ್ಪರ್ಧಿಸಿದ್ದ ಅಮೃತ ಮುದ್ದಣ್ಣವರ ದಾಖಲೆಯ ಮತಗಳ ಅಂತರದಿಂದ ಅಗಸಗಿ ಗ್ರಾ ಪಂ ಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೊದಲೆರಡೂವರೆ ವರ್ಷ ಪರಿಶಿಷ್ಟ ಪಂಗಡಕ್ಕೆ (ST) ವರ್ಗಕ್ಕೆ ಮೀಸಲಾತಿ ಪ್ರಕಟವಾಗಿತ್ತು. ಈಗ ಮಂದಿನ ಎರಡೂವರೆ ವರ್ಷ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಹುದ್ದೆ ಪ್ರಕಟಣೆ ಯಾದ ಮೇಲೆ 13 ಸದಸ್ಯರ ಬಲಾಬಲ ಹೊಂದಿರುವ ಅಗಸಗಿ ಗ್ರಾ ಪಂ ಯ 9 ಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಅಮೃತ ಮುದ್ದಣ್ಣವರ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.

ಕೃತಜ್ಞತೆ ಸಲ್ಲಿಸಿದ ನೂತನ ಅಧ್ಯಕ್ಷರು..!

ಮೊದಲ ಬಾರಿಗೆ ಗೆದ್ದು ಅಧ್ಯಕ್ಷ ಹುದ್ದೆ ಅಲಂಕರಿಸಿದ ಅಮೃತ ಮುದ್ದಣ್ಣವರ ತಮ್ಮನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಸದಸ್ಯರಾದ ಅಪ್ಪಯ್ಯಗೌಡ ಪಾಟೀಲ, ಯಲ್ಲಪ್ಪಾ ಪಾಟೀಲ, ರಾಜು ಬಾಳೆಕುಂದ್ರಿ, ಗುಂಡು ಕುರೇನ್ನವರ, ಶೋಭಾ ಕುರೇನ್ನವರ, ನಿಂಗವ್ವಾ ಪಾಟೀಲ, ಉಮಾ ಕೊಲಕಾರ, ಮಾಜಿ ಅಧ್ಯಕ್ಷ ಚನ್ನಮ್ಮ ತಿರಮಾಳೆ ಹಾಗೂ ಯಮಕನಮರಡಿ ಶಾಸಕರು ಮತ್ತು ಸಚಿವರಾದ ಸತೀಶ ಜಾರಕಿಹೋಳಿ  ಮತ್ತವರ ಆಪ್ತಸಹಾಯಕರಿಗೆ ಕೃತಜ್ಞತೆ ಸಲ್ಲಿಸಿದರು.

ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿ ಕೊಳಿ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.ಅಗಸಗಿ PDO ಎನ್ ಎ ಮುಜಾವರ ಸಿಬ್ಬಂದಿ ಮಹೇಶ್ ಹಂಪಣ್ಣವರ , ಕಾಕತಿ ಪೊಲೀಸರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ