LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

EVM ನಲ್ಲಿ ತಾಂತ್ರಿಕ ದೋಷ ಹಿನ್ನಲೆ ಕೆಲವೆಡೆ ಮತದಾನ ಸ್ಥಗಿತ

ಬೆಂಗಳೂರು : ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಜನ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಕೆಲವು ಕಡೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆ ಮತದಾನ ಸ್ಥಗಿತಗೊಂಡಿದೆ. ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಮೆಣಸೂರಿನಲ್ಲಿ ಮತದಾನ ಸ್ಥಗಿತಗೊಂಡಿದೆ. ತುಮಕೂರಿನ ಮತಗಟ್ಟೆ 66ರಲ್ಲಿ ಮತಯಂತ್ರ ಕೈಕೊಟ್ಟಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಲು ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53 ರಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಪಾದರಾಯನಪುರ ಸುಲ್ತಾನ್ ಪಾಳ್ಯ ಮತಗಟ್ಟೆ ಸಂಖ್ಯೆ 46 ರಲ್ಲಿ ಮತದಾನ ತಡವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ತಾಸು ಕಳೆದರೂ ಮತದಾನ ಶುರುವಾಗಿಲ್ಲ. ಹೀಗಾಗಿ ಮತಗಟ್ಟೆ ಸಂಖ್ಯೆ 46ರ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಮಿಕ್ಸಿಯಲ್ಲಿ ರುಬ್ಬಿದ ಪಾಪಿ ಪತಿ..!'ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಮಾಡುತ್ತೇವೆ'- ಸಿದ್ದರಾಮಯ್ಯ ಘೋಷಣೆಇದೇ ನೋಡಿ ರಾಜ್ಯದಲ್ಲೇ ಅತೀ ಎತ್ತರದ ಗಣೇಶ ; ಹುಬ್ಬಳ್ಳಿ ಕಾ ಮಹರಾಜ್ಇನ್ನು ಮುಂದೆ ದ್ವಿತೀಯ ಪಿಯುಸಿ ಪರೀಕ್ಷಾ ಅವಧಿ 2 ಗಂಟೆ 45 ಮಾತ್ರಸೀತಾರಾಂ ಯಚೂರಿ ಮೃತದೇಹವನ್ನು ಏಮ್ಸ್‌ ಮೆಡಿಕಲ್ ಕೇಂದ್ರಕ್ಕೆ ದಾನ ಮಾಡಿದ ಕುಟುಂಬಸ್ಥರುಜಾಮೀನು ದೊರೆತರೂ ಸಿಎಂ ಕಚೇರಿ ಪ್ರವೇಶಿಸದಂತೆ ಕೇಜ್ರಿವಾಲ್‌ಗೆ ಸುಪ್ರೀಂ ಷರತ್ತುಬ್ಯಾಂಕ್‌ ಸಾಲ ಮರುಪಾವತಿ ಮುನ್ನ ಈ ವಿಚಾರ ತಿಳಿದುಕೊಂಡಿರಿ..!ಎಚ್‌ಐವಿ ಪ್ರಮಾಣ ಏರಿಕೆ; ಯುವಕರೇ ಹೆಚ್ಚಾಗಿ ಏಡ್ಸ್ ರೋಗಕ್ಕೆ ತುತ್ತುಗ್ರಾಮ ಪಂಚಾಯತಿಗಳಲ್ಲಿ ಸರ್ಕಾರಿ ಉದ್ಯೋಗ: ಈಗಲೇ ಅರ್ಜಿ ಸಲ್ಲಿಸಿ'ಸುಳ್ಳು ಮತ್ತು ಪಿತೂರಿಗಳ ವಿರುದ್ಧ ಸತ್ಯದ ವಿಜಯ' - ಮನೀಶ್ ಸಿಸೋಡಿಯಾ