Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎರಡ್ಮೂರು ತಿಂಗಳಲ್ಲಿ ಐಮಂಗಲ ಕೆರೆಗಳಿಗೆ ಪ್ರಯೋಗಿಕ ನೀರು-ಸಣ್ಣ ಚಿತ್ತಯ್ಯ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲ ಹೋಬಳಿಯ ಕನಿಷ್ಠ 10 ಕೆರೆಗಳಿಗೆ ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ  ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಮುಖ್ಯಮಂತ್ರಿಗಳ ಪರವಾಗಿ ನಾನು ವಾಗ್ದಾನ ಮಾಡುತ್ತೇನೆಂದು  ವಿಶ್ವೇಶ್ವರಯ್ಯ ಜಲ ನಿಗಮದ ಮಾಜಿ ವ್ಯವಸ್ಥಾಪಕು ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣ ಚಿತ್ತಯ್ಯ ಹೇಳಿದರು.

 ತಾಲೂಕಿನ ಜವನಗೊಂಡನಹಳ್ಳಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ನಾನು ಕೃಷಿಕ ಕುಟುಂಬದಿಂದ ಬಂದಿದ್ದು, ಅನ್ನದಾತರ ಸಮಸ್ಯೆಗಳ ಬಗ್ಗೆ ಅರಿವಿದೆ. ಸಣ್ಣ ಸಮುದಾಯದಿಂದ ಬಂದಿರುವ ನನ್ನನ್ನು ಗುರುತಿಸಿ ವಿಶ್ವೇಶ್ವರಯ್ಯ ಜಲ ನಿಗಮದ ಮಂಡಳಿಯ ಎಂಡಿಯಾಗಿ ನನ್ನನ್ನ ನೇಮಕ ಮಾಡಿದ್ದರಿಂದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆಲಸ ಮಾಡುವ ಪುಣ್ಯ ನನಗೆ ಸಿಕ್ಕಿತ್ತು.

ಅನ್ನ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಸುಮಾರು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ನನ್ನ ಅವಧಿಯಲ್ಲಿ 3500 ಕೋಟಿ ಅನುಧಾನ ಬಿಡುಗಡೆ ಮಾಡಿದರು. ಇದರಿಂದ ತುಂಗಾದಿಂದ ಭಧ್ರಾ ನದಿಗೆ ನೀರು ತರುವ ಕೆಲವಾಯಿತು. 18 ವರ್ಷ ನೆನಗುದಿಗೆ ಬಿದ್ದಿದ್ದ ತುಂಗಾ ಕಾಮಗಾರಿ ಪೂರ್ಣಗೊಳಿಸುವ ಮೂಲಕ  17.4 ಟಿಎಂಸಿ ನೀರು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗೆ ನೀರು ತರಲು ಸಹಕಾರಿಯಾಯಿತು. ವೈ ಜಂಕ್ಷನ್ ಯಿಂದ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರು ಹರಿಸಿಲಾಗುತ್ತಿದ್ದು, ಕಸಬಾ, ಧರ್ಮಪುರ, ಐಮಂಗಳ ಹೋಬಳಿಯ 91 ಸಾವಿರ ಎಕರೆಯ 64 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಮೂಲಕ ನುಡಿದಂತೆ ನಡೆದಿದ್ದೇವೆ. 1775 ಕೋಟಿ ಕಾಮಗಾರಿಯ ಮೂಲಕ ಕೆರೆಗಳಿಗೆ ನೀರು ಬಿಡಲು ಪ್ರಾರಂಭ ಮಾಡಿದ್ದೇವೆ.  ಅಜ್ಜಂಪುರ ಹೆಗ್ಗಡೆಹಳ್ಳಿ ಬಳಿ ಸ್ವಲ್ಪ ಕಾಮಗಾರಿ ಕುಂಠಿತವಾಗಿದ್ದು, ಒಂದು ತಿಂಗಳಲ್ಲಿ ಮುಗಿಯುತ್ತೆದೆ. ಗೋಣೂರುವರೆಗೂ ನೀರು ತಂದು ಮಾತು ಮಾತೇ ಕನಿಷ್ಠ 10 ಕೆರೆಗಳಿಗೆ ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ  ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದರು.

ವಿಶೇಷವಾಗಿ ಜವನಗೊಂಡನಹಳ್ಳಿ ಹೋಬಳಿ ಬಗ್ಗೆ ನನಗೆ ನೀರಿನ ಸಮಸ್ಯೆ ಬಗ್ಗೆ ಮನವರಿಕೆಯಾಗಿತ್ತು. ಬುಕ್ಕಾಪಟ್ಟಣ ಮಾರ್ಗದಿಂದ ಜವಗೊಂಡನಹಳ್ಳಿ ಮುಖಾಂತರ ಆದಿವಾಲದವರೆಗೂ ಪೈಪ್ಲೈನ್ ಕಾಮಗಾರಿ ಆರಂಭ ಮಾಡಲಾಗಿದೆ. ಕಾಮಗಾರಿ ನಡಿಯುತ್ತಿತ್ತು. ಅದನ್ನ ವೀಕ್ಷಣೆಗೆ ತೆರಳಿದ್ದಾಗ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರ ಸಂಕಷ್ಟದಲ್ಲಿದ್ದಾಗ ಗಮನಿಸಿದ್ದೇವೆ. ಹಿಂದಿನ ಸಚಿವರಾಗಿದ್ದ ದಿವಂಗತ ಸುಧಾಕರ್ ಅವರ ಒತ್ತಾಸೆಯಿಂದ ಸಚಿವರು ಮತ್ತು ನಾನು ಅಂದಿನ ಜಲಸಂಪ್ಮೂಲ ಸಚಿವರನ್ನು ಭೇಟಿ ಮಾಡಿ ಈ ಭಾಗಕ್ಕೆ 0.37ಟಿಎಂಸಿ ನೀರು ಹಂಚಿಕೆಯಾಗಿದೆ. ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿದ್ದು ಅಲ್ಲಿಂದ ನೀರನ್ನ ಲಿಫ್ಟ್ ಮೂಲಕ ಜೆಜೆ ಹಳ್ಳಿ ಹೋಬಳಿ ಕೆರೆಗಳಿಗೆ ನೀರು ಹರಿಸಲಾಗುತ್ತದೆ. 

ಉಡುವಳ್ಳಿಕೆರೆ, ಯಲ್ಲದಕೆರೆ, ತಳವಾರಹಟ್ಟಿ ಕೆರೆ, ಮಾಳಗೊಂಡನಹಳ್ಳಿ,  ವಡ್ಡನಹಳ್ಳಿ, ಲಂಬಾಣಿ ಹಟ್ಟಿ,  ಗೌಡನಹಳ್ಳಿ ಕೆರೆ, ರಂಗಾಪುರ, ಗಾಂಧಿನಗರ, ವಡ್ಡನಹಳ್ಳಿ, ದಿಂಡವಾರ, ಬಗ್ಗನಡು, ಬೋರನಕುಂಟೆ, ಓಬಳಾಪುರ ಕಾಟನಾಯಕನಹಳ್ಳಿ ಕೆರೆಗಳಿಗೆ ನೀರು ಹರಿಸಲು ಮುಖ್ಯಮಂತ್ರಿಗಳ ಆದೇಶ ಮೇರೆಗೆ ನೀರು ಹಂಚಿಕೆಯಾಗಿದೆ. ಸರ್ಕಾಲದ ಆದೇಶವಾಗಿದೆ. ಯಾವುದೇ ಅನುಮಾನ ಬೇಡ. 244 ಕೋಟಿ ವೆಚ್ಚದಲ್ಲಿ,  ಸಣ್ಣ ನೀರಾವರಿ ಇಲಾಖೆಯಿಂದ  ಕಾಮಗಾರಿ ತಗೋಬೇಕು ಎಂದು ಹಿಂದಿನ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಅನುಮೋದನೆ ನೀಡಿದ್ದರು. ಅದರಂತೆ ಸಚಿವ ಸಂಪುಟಕ್ಕೆ ತಂದು ಅನುಮೋದನೆ ಕೊಡಿಸಿ ಒಂಬತ್ತು ತಿಂಗಳು ಅಥವಾ ವರ್ಷದೊಳಗೆ ಗ್ರಾಮೀಣಾಭಿರುದ್ಧಿ ಇಲಾಖೆಯ ಮುಖಾಂತರ ನೂರು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಶ್ವತವಾಗಿ ನೀರು ಹರಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಗಾಯಿತ್ರಿ ಜಲಾಶಯಕ್ಕೂ ನೀರು ಹಂಚಿಕೆಯಾಗಿದ್ದು ಅದನ್ನ ತುಂಬಿಸಲಾಗುತ್ತದೆ. ಈ ಎಲ್ಲಾ ಕಾಮಗಾರಿ ಕೆಲಸ ಆಗಬೇಕು ನನಗೆ ಎಲ್ಲ ಗೊತ್ತಿದೆ. ನಾನು ಇಲ್ಲಿಯೇ ಇರುವನು, ಇಲ್ಲಿಗೆ ಬಂದ್ರೇನೇ ಸಾಧ್ಯ ನಿಮ್ಮೆಲ್ಲರ ಆಶೀರ್ವಾದ ನನ್ನಮೇಲೆ ಇರಲಿ ಎಂದು ಮುಗಿದಿ ಕೇಳಿದರು.

ತಾಲೂಕಿನ ಜೆಜಿ ಹಳ್ಳಿ ಗಣೇಶ ದೇವಾಲಯ, ನಂದಿಹಳ್ಳಿ ಶ್ರೀ ರಂಗನಾಥ ಸ್ವಾಮಿ, ಕೂಡ್ಲಹಳ್ಳಿ ಪಾರ್ಥಲಿಂಗೇಶ್ವರ ಹಾಗೂ ಬ್ಯಾಡರಹಳ್ಳಿ ಶ್ರೀ ತಿರುಮಲ ತಿಮ್ಮಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಸಣ್ಣ ಸಮುದಾಯದ ವ್ಯಕ್ತಿಯಾದ ನನ್ನನ್ನು ಗುರುತಿಸಿ ವಿಶ್ವೇಶ್ವರಯ್ಯ ಜಲ ನಿಗಮ ನಿಗಮದ ಎಂಡಿ ಆಗಿ ನನ್ನನ್ನು ನೇಮಕ ಮಾಡಿದರು ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮಗಳ ಮೂಲಕ ಹೃದಯಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಪಿಎಸ್. ಪಾತಯ್ಯ, ವಕೀಲ ಯತೀಶ್, ಎಸ್. ಆರ್. ತಿಪ್ಪೇಸ್ವಾಮಿ, ಜೆಜಿ ಹಳ್ಳಿ ಕೇಶವ್, ರಾಜಶೇಖರ್, ಖಾಲೀದ್ ಹುಸೇನ್, ಎಲ್. ಪುಟ್ಟರಾಜ್, ಗುರುಮೂರ್ತಿ, ಮೊಹಮ್ಮದ್ ನಾಯಿದ್, ಮಾರಾನಾಯಕ, ಶ್ರೀನಿವಾಸ್, ತಿಮ್ಮರಾಯಪ್ಪ, ಕೃಷ್ಣಮೂರ್ತಿ,  ಅಲ್ತಪ್ ಅಹಮ್ಮದ್, ಅಪ್ಸರ್ ಬಾಷಾ, ಮಹಮ್ಮದ್, ದಿಂದವಾರ ಮಹೇಶ್, ಇಲೀಸ್, ವಜೀರ್ ಸೇರಿದಂತೆ ಇತರರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ