LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಟಾಪರ್..!!

ಕೇರಳ : ಕೇವಲ 25 ವರ್ಷದಲ್ಲಿ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿಯಲ್ಲಿ ಯಶಸ್ಸು ಕಂಡ ಫಾಬಿ ರಶೀದ್ ಅವರ ಸಕ್ಸಸ್‌ ಕಥೆ ಇಲ್ಲಿದೆ.

ಫಾಬಿ ರಶೀದ್ ಕೇರಳದ ನಿವಾಸಿಯಾಗಿದ್ದು, 1999ರ ಜೂನ್ 23ರಂದು ಜನಿಸಿದ್ದಾರೆ. ಫಾಬಿ ತಮ್ಮ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಅವರ ಅದೃಷ್ಟ ಮತ್ತು ಶ್ರಮದ ಫಲವಾಗಿದೆ.

ಅವರು ಪದವಿಯನ್ನು ಪೂರ್ಣಗೊಳಿಸಿದ ತಕ್ಷಣ, UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅವರ ಪೋಷಕರಿಬ್ಬರೂ ವೈದ್ಯರು. ಫಾಬಿಯ ತಾಯಿ ಮಕ್ಕಳ ತಜ್ಞೆ,  ತಂದೆ ಆಯುರ್ವೇದ ತಜ್ಞರಾಗಿದ್ದು, ಅವರೂ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿದ್ದಾರೆ.

ಫಾಬಿ 12ನೇ ತರಗತಿ ವರೆಗೆ ತ್ರಿವೇಂಡ್ರಂನ ಐಸಿಎಸ್ಇ ಬೋರ್ಡ್ಗೆ ಸಂಯೋಜಿತವಾಗಿರುವ ಸರ್ವೋದಯ ಶಾಲೆಯಲ್ಲಿ ಓದಿದ್ದಾರೆ. 10ನೇ ತರಗತಿಯಲ್ಲಿ 96.7% ಮತ್ತು 12ನೇ ತರಗತಿಯಲ್ಲಿ 97.6% ಅಂಕಗಳನ್ನು ಪಡೆದಿದ್ದರು. 12ನೇ ತರಗತಿಯಲ್ಲಿ ರಾಜ್ಯಕ್ಕೆ ಮೂರನೇ ಟಾಪರ್ ಆಗಿದ್ದರು. ಇದರ ನಂತರ ಅವರು ಭಾರತೀಯ ವಿಜ್ಞಾನ ಶಿಕ್ಷಣ ಸಂಶೋಧನಾ ಸಂಸ್ಥೆಯಿಂದ ಜೈವಿಕ ವಿಜ್ಞಾನಗಳ ಸಮಗ್ರ  ಕೋರ್ಸ್‌‌ನಲ್ಲಿ ಬಿಎಸ್ಎಂಎಸ್ ಮಾಡಿದರು.

2017 ರಿಂದ 2022 ರವರೆಗೆ IISER ನಲ್ಲಿ ಓದುತ್ತಿರುವಾಗ, ಫಾಬಿ ರಶೀದ್ ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ INSPIRE ಫೆಲೋಶಿಪ್ ಪಡೆದರು. UPSC ಪರೀಕ್ಷೆಗೆ ತಯಾರಿ ನಡೆಸಲು ಅವರು ಇಡೀ ವರ್ಷವನ್ನು ಮೀಸಲಿಟ್ಟಿದ್ದರು. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ನ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಉತ್ತಮ ತಯಾರಿಗಾಗಿ, ಫಾಬಿ ರಶೀದ್ ತಿರುವನಂತಪುರಂನಲ್ಲಿರುವ ಸಂಸ್ಥೆಯಿಂದ ತರಬೇತಿ ಪಡೆದರು.

ಫಾಬಿ ರಶೀದ್ UPSC CSE 2023 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 71 ನೇ  ರ್‍ಯಾಂಕ್‌ಗಳಿಸಿದ್ದರು. UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಲ್ಯಾಪ್ ಟಾಪ್ ಅನ್ನು ಹೆಚ್ಚು ಬಳಸುತ್ತಿದ್ದಳು. ಇದರಿಂದಾಗಿ ಅವರ ಕಣ್ಣಿನ ಆರೋಗ್ಯ ತುಂಬಾ ಹದಗೆಟ್ಟಿತ್ತು. ಇದರ ನಡುವೆ ಫಾಬಿ ಲಕ್ಷಾಂತರ ಯುವ ಜನತೆಗೆ ಮಾದರಿಯಾಗಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026