ನಕಲಿ ಸಹಿ ನಕಲಿ ಆದೇಶ ಪತ್ರ ಇಂಜಿನಿಯರ್ ನೇಮಕ.!
ರಾಮನಗರ : ಹೌದು ರಾಮನಗರ ಜಿ.ಪಂ FDA ಆಗಿ ಅಭಿಷೇಕ್ ಎನ್ನುವ ಯುವಕ ಕಾರ್ಯ ನಿರ್ವಹಿಸುತ್ತಿದ್ದ, ಈ ವೇಳೆ ಮಧು ಎಂಬ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಎಂಜಿನಿಯರ್ ಕೆಲಸಕ್ಕೆ ನೇಮಕ ಮಾಡುಕೊಳ್ಳುವ ವಿಷಯವಾಗಿ ಜಿ.ಪಂ ಸಿಇಓ ದಿಗ್ವಿಜಯ್ ಬೋಡ್ಕೆರವರ ನಕಲಿ ಸಹಿ ಮಾಡಿ ನಕಲಿ ಆದೇಶ ಪತ್ರ ನೀಡಿರೋದು ಬೆಳಕಿಗೆ ಬಂದಿದೆ.!
ಕಳೆದ ಮೂರು ತಿಂಗಳಿನಿಂದ ಮಧು ನರೇಗಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಕುರಿತು ಮಧು ನೇಮಕಾತಿ ಮೇಲೆ ಅನುಮಾನ ವ್ಯಕ್ತಪಡಿಸಿ, ಪರಿಶೀಲನೆ ನಡೆಸಿದ ವೇಳೆ ನಕಲಿ ಆದೇಶದ ಮೂಲಕ ನೇಮಕಾತಿ ಮಾಡಿಕೊಂಡಿರೋದು ಬಯಲಾಗಿದೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಡಿಎ ಅಭಿಷೇಕ್ ಹಾಗೂ ಮಧು ಮೇಲೆ ಎಫ್‌ಐಆರ್ ದಾಖಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.