LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೈತರಿಗೆ ಪವರ್ ಟಿಲ್ಲರ್, ರೋಟವೇಟರ್‌ಗಳಿಗೆ ರಿಯಾಯಿತಿದರ – ಅರ್ಜಿ ಹೇಗೆ ಹಾಕುವುದು?

2025-26 ಸಾಲಿನಲ್ಲಿ ರೈತರಿಗೆ ಕೃಷಿ ಉಪಕರಣಗಳಿಗೆ ಶೇ.50ರ ಸಹಾಯಧನ – ಸೋಮವಾರಪೇಟೆ ಮತ್ತು ಕುಶಾಲನಗರ ರೈತರಿಗೆ ಅವಕಾಶ. 2025–26ರ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಕೃಷಿ ಉಪಕರಣಗಳಿಗೆ ಶೇ.50ರ ರಿಯಾಯಿತಿ ನೀಡಲಾಗುತ್ತಿದೆ. ಈ ಯೋಜನೆಯು ಕೃಷಿಯಲ್ಲಿ ಯಾಂತ್ರೀಕರಣವನ್ನು ಉತ್ತೇಜಿಸುವ ಹಾಗೂ ರೈತರಿಗೆ ಆಧುನಿಕ ಉಪಕರಣಗಳ ಉಪಯೋಗವನ್ನು ತಲುಪಿಸಲು ಸಹಕಾರ ನೀಡಲಿದೆ.

ಅರ್ಜಿ ಸಲ್ಲಿಸುವ ವಿಧಾನ:ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಪೂರೈಸಬಹುದಾಗಿದೆ. ಅರ್ಜಿ ಜೊತೆಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು: ಪಹಣಿ (RTC)ಆಧಾರ್ ಕಾರ್ಡ್ ಜೆರಾಕ್ಸ್ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ಒಂದು ಭಾವಚಿತ್ರ₹100ರ ಛಾಪಾಕಾಗದ ದಾಖಲಾತಿ
ಲಭ್ಯವಿರುವ ಉಪಕರಣಗಳು:

ಪವರ್ ಟಿಲ್ಲರ್ಕಲ್ಟಿವೇಟರ್ರೋಟವೇಟರ್ಡಿಸ್ಕ್ ಪ್ಲೋ, ಎಂ.ಬಿ. ಪ್ಲೋಕಳೆಕೊಚ್ಚುವ ಮತ್ತು ಕಳೆ ತೆಗೆಯುವ ಯಂತ್ರಗಳುಡಿಸೇಲ್ ಪಂಪ್ ಸೆಟ್ಪವರ್ ಸ್ಪ್ರೇಯರ್ಮೇವು ಕತ್ತರಿಸುವ ಯಂತ್ರಭತ್ತದ ಒಕ್ಕಣೆ ಯಂತ್ರ, ಕಟಾವು ಯಂತ್ರಭತ್ತದ ಒಕ್ಕಣೆ ಯಂತ್ರ, ಕಟಾವು ಯಂತ್ರಮುಸುಕಿನ ಜೋಳ ಒಕ್ಕಣೆಕೃಷಿ ಸಂಸ್ಕರಣೆ ಯಂತ್ರಗಳು: ರಾಗಿ ಕ್ಲೀನಿಂಗ್, ಹಿಟ್ಟು ಮಾಡುವ ಯಂತ್ರ, ಮೆಣಸಿನ ಪುಡಿ ಮಾಡುವ ಯಂತ್ರ, ಎಣ್ಣೆ ಗಾಣಗಳು.



ಅರ್ಜಿ ಸಲ್ಲಿಸಲು ಅವಕಾಶವಿರುವ ಸ್ಥಳಗಳು:ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.



ರೈತರಿಗೆ ವಿನಂತಿ:ಈ ಮಹತ್ತ್ವಪೂರ್ಣ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ರೈತರು ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026