ಕೃತಕ ಯೂರಿಯಾ ಗೊಬ್ಬರದ ಅಭಾವ ರೈತರು ಸಂಕಷ್ಟ: ಕೆ.ಎಸ್.ನವೀನ್.!
ಚಿತ್ರದುರ್ಗ : ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದಂತಹ ಯೂರಿಯಾ ರಸಗೊಬ್ಬರವನ್ನು ವಿಲೇವಾರಿ ಮಾಡುತ್ತಿದೆ.ಆದರೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ವಿತರಣೆ ಮಾಡದೇ ರಸ ಗೊಬ್ಬರವನ್ನು ತಯಾರಿಕೆ ಮಾಡುವಂತಹ ಕೈಗಾರಿಕೆಗಳಿಗೆ ಅಕ್ರಮವಾಗಿ ಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯದಲ್ಲಿ ಕೃತಕ ಯೂರಿಯಾ ಗೊಬ್ಬರದ ಅಭಾವವನ್ನು ಸೃಷ್ಟಿ ಮಾಡಿದ್ದಾರೆ ಎಂದು ಬಿಜೆಪಿಯ ರಾಜ್ಯ ವಕ್ತಾರ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚ್ - ಏಪ್ರಿಲ್ ತಿಂಗಳಲ್ಲಿಯೇ ನಮ್ಮ ರಾಜ್ಯಕ್ಕೆ ಇಷ್ಟೇ ಪ್ರಮಾಣದ ಅಗತ್ಯತೆ ಇದೆ ಎಂದು ಪತ್ರ ಬರೆಯುವುದರ ಮೂಲಕ ಅದರ ಬಿಡುಗಡೆಗೆ ಅಗತ್ಯವಾದಂತಹ ಹಣವನ್ನು ಸಹ ನೀಡಬೇಕು.ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಇದಕ್ಕೆ ಒಂದು ಸಾವಿರ ಕೋಟಿ ರೂಗಳನ್ನು ನೀಡಲಾಗಿತ್ತು.. ಆದರೆ ಈಗಿನ ಸಿದ್ದರಾಮಯ್ಯನವರ ಸರ್ಕಾರ ಕೇವಲ 400 ಕೋಟಿ ರೂಗಳನ್ನು ಮಾತ್ರ ನೀಡಿ ಉಳಿದಂತಹ 600 ಕೋಟಿ ರೂಗಳಿಗೆ ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂತಹ ವಾತಾವರಣವನ್ನು ಕಲ್ಪಿಸಿದೆ ಎಂದು ದೂರಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ.. ರೈತರ ಬಗ್ಗೆ ಎಳ್ಳಷ್ಟು ಸಹ ಕಾಳಜಿ ವಹಿಸುತ್ತಿಲ್ಲ.ತಮ್ಮ ಅಧಿಕಾರ ಕುರ್ಚಿ ಉಳಿವಿಗಾಗಿ ಹಲವಾರು ಬಾರಿ ದೆಹಲಿ ಪ್ರವಾಸವನ್ನು ಮಾಡಿರುವ ಸಿದ್ದರಾಮಯ್ಯರವರು ಇದರಲ್ಲಿ ಒಂದು ಬಾರಿಯೂ ಸಹ ಕೇಂದ್ರ ಕೃಷಿ ಸಚಿವರನ್ನಾಗಲೀ.ಸಂಬಂಧಪಟ್ಟ ಅಧಿಕಾರಿಗಳನ್ನಾಗಲೀ ಭೇಟಿ ಮಾಡಿ ನಮ್ಮ ರಾಜ್ಯಕ್ಕೆ ಯೂರಿಯಾ ಬೇಡಿಕೆ ಬಗ್ಗೆ ಬೇಡಿಕೆಯನ್ನು ಇಟ್ಟಿಲ್ಲ.ಇಂದಿನ ದಿನಮಾನಗಳಲ್ಲಿ ಏಕಕಾಲದಲ್ಲಿ ಮಳೆ ವ್ಯಾಪಿಸಿದೆ.ರೈತರೆಲ್ಲರೂ ಸಹ ಬಿತ್ತನೆ ಕಾರ್ಯವನ್ನು ಪ್ರಾರಂಭ ಮಾಡಿದ್ದಾರೆ.. ಎಲ್ಲಾ ರೈತರಿಗೂ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ.ಇದರ ಬಗ್ಗೆ ಗಮನಹರಿಸಿದ ಸಿದ್ದರಾಮಯ್ಯರವರು ತಮ್ಮ ಕುರ್ಚಿ ಉಳಿವಿಕೆಗಾಗಿ ಗಮನ ನೀಡಿದ್ದಾರೆ ಹೊರತು ಅನ್ನದಾತರ ಬಗ್ಗೆ ಯಾವುದೇ ಗಮನ ನೀಡಿಲ್ಲ ಎಂದು ನವೀನ್ ತಿಳಿಸಿದರು.
ಮುಖ್ಯಮಂತ್ರಿಯವರ ತಪ್ಪಿನಿಂದಾಗಿ ನಾಡಿನ ರೈತರು ಕಷ್ಟಕ್ಕೆ ಸಿಲುಕ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆ ಸಂಬಂಧಪಟ್ಟ ಸಚಿವರಾಗಲೀ ಕೃಷಿ ಅಧಿಕಾರಿಗಳಾಗಲೀ ಗಮನ ನೀಡಬೇಕಾಗಿದೆ.ಆಗಸ್ಟ್ -11ರಿಂದ ನಡೆಯುವಂತಹ ವಿಧಾನಸಭೆಯ ಅಧಿವೇಶನದಲ್ಲಿ ಇದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡಿ ಮುಖ್ಯಮಂತ್ರಿಗಳ ಹಾಗೂ ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯಿಸಲಾಗುವುದು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ ಧೋರಣೆಯನ್ನು ತಾಳಿದೆ.. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಮುಂದಾಗಿದೆ.ಜನರ ಹಿತವನ್ನು ಕಾಯುತ್ತಿಲ್ಲ ಇದರ ಬಗ್ಗೆ ಬಿಜೆಪಿ ರೈತ ಮೋರ್ಚಾದಿಂದ ಆದಷ್ಟು ಬೇಗನೆ ಹೋರಾಟವನ್ನು ಮಾಡಲಾಗುವುದು ಎಂದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರೀ ಗೀರೀಶ್, ಉಪಾಧ್ಯಕ್ಷ ಮೋಹನ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.