LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭ್ರಷ್ಠಾಚಾರ ಮುಕ್ತ ದುರ್ಗ! ಆಮ್ ಆದ್ಮಿ ಪಾರ್ಟಿಯಿಂದ ಉಪವಾಸ ಸತ್ಯಗ್ರಹ.!

 

ಚಿತ್ರದುರ್ಗ: ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇಂದಿನ ದಿನಮಾನದಲ್ಲಿ ಸಮಾಜಿಕ ನ್ಯಾಯ ಸರಿಯಾದ ರೀತಿಯಲ್ಲಿ ಸಿಕ್ಕಲ್ಲ, ಸಂವಿಧಾನದ ಆಶಯಗಳು ಪೂರ್ಣಗೊಂಡಿಲ್ಲ, ಸರ್ಕಾರದ ಸೌಲಭ್ಯಗಳು ಸಿಕ್ಕವರಿಗೆ ಸಿಗುತ್ತಿವೆ, ಬಡವ ಬಡವನಾಗಿಯೇ ಇರುತ್ತಿದ್ದಾರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಇಂದಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ಎನ್ನುವುದು ತುಂಬಿದೆ ಯಾವ ಸರ್ಕಾರಿ ಕಚೇರಿಯಾದರೂ ಸಹಾ ಲಂಚ ಇಲ್ಲದೆ ಕೆಲಸವಾಗುವುದಿಲ್ಲ, ಆಸ್ಪತ್ರೆಯಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ, ಬಡವರು ಚಿಕಿತ್ಸೆಗಾಗಿ ಹೋದರೆ ಲಂಚ ಇಲ್ಲದೆ ಚಿಕಿತ್ಸೆ ಸಿಗುವುದಿಲ್ಲ ಕಾರ್ಯಾಂಗ ಶಾಸಕಾಂಗ ಭ್ರಷ್ಠಾಚಾರದಿಂದ ಕೊಡಿದೆ. ಇದರಲ್ಲಿ ಮತದಾರನು ಸಹಾ ಭ್ರಷ್ಠಚಾರನಾಗಿದ್ದಾನೆ ಇವರಿಂದ ಮತವನ್ನು ಖರೀದಿ ಮಾಡಿದ ಚುನಾಯುತ ವ್ಯಕ್ತಿಯೂ ಸಹಾ ಭ್ರಷ್ಠಚಾರನಾಗಿದ್ದಾನೆ ಎಂದು ದೂರಿದರು.

ಈ ಸತ್ಯಾಗ್ರಹದಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ವಿನೋದಮ್ಮ, ಸಂಘಟನಾ ಕಾರ್ಯದರ್ಶಿ ಶಿವಮ್ಮ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ತನ್ವೀರ್, ಕಾರ್ಯದರ್ಶಿ ಸೈಯದ್ ದಾವೂದ್, ಹೊಳಲ್ಕರೆ ಘಟಕದ ಅಧ್ಯಕ್ಷ ಮಲ್ಲಿಕಾರ್ಜನಪ್ಪ, ಜಂಟಿ ಕಾರ್ಯದರ್ಶಿ ಲೋಕೇಶಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ, ಜಿಲ್ಲಾ ಮಾಧ್ಯಮ ಸಲಹೆಗಾರ ಲೋಹಿತ್, ಯುವ ಘಟಕದ ಅಧ್ಯಕ್ಷ ರವಿ, ಚಂದ್ರಮ್ಮ, ಪರಮೇಶ್ವರಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : 13 ಕಡೆ ಎನ್‌ಐಎ ದಾಳಿಯೆಮನ್‌ನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ರದ್ದು?: ವಿದೇಶಾಂಗ ಸಚಿವಾಲಯ ಹೇಳಿದ್ದೇನು?ತಿರುಪತಿ ತಿರುಮಲ ದರ್ಶನದ ಟಿಕೇಟ್ ವಿತರಣೆ ಹಾಗೂ ಸಮಯ ಬದಲಾವಣೆ; ಇಲ್ಲಿದೆ ಮಾಹಿತಿಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು: 30 ಮಂದಿಗೆ ಗಾಯ, ಮೂವರು ಗಂಭೀರಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿದೂರಿನ ಮಾಹಿತಿ ಪಡೆಯಲು ಮನೆಗೆ ಬಂದ ಪೊಲೀಸ್ ಸಿಬ್ಬಂದಿ ಎದುರು ಸೀರೆ ಬಿಚ್ಚಿಕೊಂಡು ಹುಚ್ಚಾಟ ಮೆರೆದ ಮಹಿಳೆಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ ಎಂದ ಡೊನಾಲ್ಡ್ ಟ್ರಂಪ್ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೂವರು ಪೊಲೀಸರ ವಶಕ್ಕೆರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ 20ನೇ ಕಂತಿನ ಹಣ ಇಂದು ಬಿಡುಗಡೆಮಾಡೆಲಿಂಗ್‌ ಲೋಕ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಆಗಿ ಅಧಿಕಾರಿಯಾದ ಕಥೆ