ದೆಹಲಿ:
ರಾಜಸ್ಥಾನದ ಕೋಟದಲ್ಲಿನ ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸ್ಪ್ರಿಂಗ್ ಇರವು ಫ್ಯಾನ್‌ಗಳನ್ನು ಅಳವಡಿಸಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ.
ಪ್ರವೇಶಾತಿ ಪರೀಕ್ಷಾ ತರಬೇತಿ ಕೇಂದ್ರವಾದ ಕೋಟದಲ್ಲಿ ಈ ವರ್ಷದಲ್ಲಿ 20 ವಿದ್ಯಾರ್ಥಿಗಳು ಹಾಸ್ಟೆಲ್, ಪಿಜಿಗಳಲ್ಲಿ ಫ್ಯಾನ್‌ಗಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಯಾಗುತ್ತಿದೆ, ಫ್ಯಾನ್‌ಗಳನ್ನು ಬದಲಿಸಲಾಗುತ್ತಿಲ್ಲ ಎಂಬ ಹಲವು ದೂರುಗಳು ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದ್ದವು.
ಇದೀಗ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು ಸ್ಪ್ರಿಂಗ್ ಇರುವ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನೇಣು ಬಿಗಿದುಕೊಂಡರೂ ಸ್ಪ್ರಿಂಗ್ ಇರುವ ಕಾರಣ ಭಾರ ಬಿದ್ದಾಕ್ಷಣ ಫ್ಯಾನ್ ಕೆಳಕ್ಕೆ ಬೀಳಲಿದೆ. ಈ ಕುರಿತಾದ ವಿಡಿಯೊವನ್ನು ಎಎನ್‌ಐ ಹಂಚಿಕೊಂಡಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.